ETV Bharat / sports

ಹೇಜಲ್‌ವುಡ್ ಮಾರಕ ದಾಳಿ: ಶ್ರೀಲಂಕಾ ವಿರುದ್ಧ ಮೊದಲ ಟಿ-20 ಪಂದ್ಯ ಗೆದ್ದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾವು 149/9 ರನ್​ ಗುರಿಯನ್ನು ನೀಡಿತ್ತು. ಆದರೆ, ಮಳೆಯ ಕಾರಣ ಡಿಎಲ್​ಎಸ್​ ನಿಯಮದಂತೆ 19 ಓವರ್​ಗಳಲ್ಲಿ 143ರನ್​ ನೀಡಲಾಯಿತು. ಲಂಕನ್ನರ ನಾಲ್ಕು ವಿಕೆಟ್​ಗಳನ್ನು ಹೇಜಲ್‌ವುಡ್​ ಮತ್ತು ಮೂರು ವಿಕೆಟ್​ಗಳನ್ನು ಯ್ಯಾಡಮ್​ ಝಾಂಪಾ ಉರುಳಿಸಿದರು. ಇದರಿಂದ ಆಸ್ಟ್ರೇಲಿಯಾ 20ರನ್​ಗಳ ಗೆಲುವು ಸಾಧಿಸಿತು.

author img

By

Published : Feb 11, 2022, 8:39 PM IST

Aus vs SL, 1st T20I: Hazlewood's spell help hosts to register victory in rain-curtailed match
ಹೇಜಲ್‌ವುಡ್ ಮಾರಕ ದಾಳಿ: ಶ್ರೀಲಂಕಾ ವಿರುದ್ಧ ಮೊದಲ ಟಿ-20 ಪಂದ್ಯ ಗೆದ್ದ ಆಸ್ಟ್ರೇಲಿಯಾ

ಸಿಡ್ನಿ: ಶುಕ್ರವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಜೋಶ್ ಹೇಜಲ್‌ವುಡ್​ರ ಮಾರಕ ದಾಳಿಗೆ ಮಣಿದ ಸಿಂಹಳೀಯರು, ಐದು ಪಂದ್ಯಗಳ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವು ಶ್ರೀಲಂಕಾವನ್ನು 20ರನ್​ಗಳಿಂದ ಸೋಲಿಸಿತು. ಮಳೆಯ ಕಾರಣ ಡಿಎಲ್​ಎಸ್​(DLS) ವಿಧಾನವನ್ನು ಬಳಸಿ ಶ್ರೀಲಂಕಾಗೆ 19 ಓವರ್​ಗಳಲ್ಲಿ 143 ರನ್​ಗಳ ಗುರಿಯನ್ನು ನೀಡಲಾಗಿತ್ತು.

ಆಸ್ಟ್ರೇಲಿಯಾವು 149/9 ರನ್​ನ ಗುರಿಯನ್ನು ನೀಡಿತ್ತು. ಆದರೆ, ಮಳೆಯ ಕಾರಣ ಡಿಎಲ್​ಎಸ್​ ನಿಯಮದಂತೆ 19 ಓವರ್​ಗಳಲ್ಲಿ 143ರನ್​ ನೀಡಲಾಯಿತು. ಲಂಕನ್ನರ ನಾಲ್ಕು ವಿಕೆಟ್​ಗಳನ್ನು ಹೇಜಲ್‌ವುಡ್​ ಮತ್ತು ಮೂರು ವಿಕೆಟ್​ಗಳನ್ನು ​ ಝಾಂಪಾ ಉರುಳಿಸಿದರು. ಇದರಿಂದ ಆಸ್ಟ್ರೇಲಿಯಾವು 20ರನ್​ಗಳ ಗೆಲುವು ಸಾಧಿಸಿತು.

ತಂಡದ ಸ್ಕೋರ್​ 3 ಆಗಿದ್ದಾಗ ಧನುಷ್​ ಗುಣತಿಲಕ ಅವರ ವಿಕೆಟ್ ಪಡೆಯುವ ಮೂಲಕ ಹೇಜಲ್‌ವುಡ್ ಶ್ರೀಲಂಕಾಗೆ ಆರಂಭಿಕ ಆಘಾತವನ್ನು ನೀಡಿದರು. ಪ್ಯಾಟ್​ ಕಂಮ್ಮಿಂಗ್ಸ್​ಗೆ ಪಾತುಂ ನಿಸ್ಸಾಂಕ್​ ವಿಕೆಟ್​ ನೀಡಿದರು. ಇದರಿಂದ ಎರಡನೇ ವಿಕೆಟ್​ನ ಜೊತೆ ಆಟ ತುಂಬಾ ಹೊತ್ತು ನಡೆಯಲಿಲ್ಲ.

ನಂತರ, ಚರಿತ್ ಅಸಲಂಕಾ ಮತ್ತು ನಿಸ್ಸಾಂಕ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಆದರೆ ಝಂಪಾ ಅವರು ಎರಡು ವಿಕೆಟ್​ಗಳನ್ನು ಒಟ್ಟಿಗೆ ಉರುಳಿಸಿದರು. 11 ನೇ ಓವರ್‌ನಲ್ಲಿ ತಂಡದ ಮೊತ್ತವು 64/4 ಆಗಿತ್ತು. ವನಿಂದು ಹಸರಂಗ ಕೇವಲ 13 ರನ್‌ಗೆ ಝಂಪಾ ಅವರ ಸ್ಪೆಲ್‌ಗೆ ಔಟಾದ ನಂತರ ಮಳೆಯಿಂದಾಗಿ ಆಟ ಸ್ಥಗಿತಗೊಂಡು 19 ಓವರ್‌ಗಳಲ್ಲಿ 143 ರನ್‌ಗಳ ಗುರಿಯನ್ನು ಪರಿಷ್ಕರಿಸಲಾಯಿತು.

ಮಳೆಯ ವಿರಾಮದಿಂದ ಹಿಂತಿರುಗಿದ ಆಸ್ಟ್ರೇಲಿಯಾ, ಹ್ಯಾಜಲ್‌ವುಡ್ ಮೂರು ವಿಕೆಟ್‌ಗಳನ್ನು ಕಬಳಿಸಿ ದಸುನ್ ಶನಕ, ಚಾಮಿಕ ಕರುಣಾರತ್ನೆ ಮತ್ತು ದುಷ್ಮಂತ ಚಮೀರ ಅವರನ್ನು ಡಗ್ ಔಟ್‌ಗೆ ಕಳುಹಿಸಿದರು. ಅಥಿತೇಯರನ್ನು 122/8ಕ್ಕೆ ಕಟ್ಟಿ ಹಾಕುವ ಮೂಲಕ 20 ರನ್‌ಗಳ ಜಯ ಸಾಧಿಸಿತು.

ಇದಕ್ಕೂ ಮೊದಲ, ಆಸ್ಟ್ರೇಲಿಯಾ ಬ್ಯಾಟರ್​ಗಳೂ ಉತ್ತಮವಾಗಿ ಆಡುವಲ್ಲಿ ವಿಫಲರಾಗಿದ್ದರು. ಆದರೆ, ಬೆನ್ ಮೆಕ್‌ಡರ್ಮಾಟ್ ಮಾತ್ರ 53 ರನ್‌ಗಳ ಉತ್ತಮ ಇನ್ನಿಂಗ್ಸ್‌ನಿಂದ ಆಸ್ಟ್ರೇಲಿಯಾಗೆ ನೆರವಾದರು. ಇವರ ಹೊರತಾಗಿ ಜೋಶ್ ಇಂಗ್ಲಿಸ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಮಾತ್ರ ಎರಡಂಕಿಯಲ್ಲಿ ಸ್ಕೋರ್ ಮಾಡಿದರು.

ಶ್ರೀಲಂಕಾ ಪರ ಹಸರಂಗ ಮೂರು ವಿಕೆಟ್ ಕಬಳಿಸಿದರೆ, ಚಮೀರಾ, ಬಿನೂರ ಫೆರ್ನಾಂಡೊ ಮತ್ತು ಕರುಣಾರತ್ನೆ ತಲಾ ಎರಡು ವಿಕೆಟ್ ಪಡೆದು ಮರಳಿದರು. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ ನಡೆಯಲಿರುವ 2ನೇ ಟಿ-20ಗಾಗಿ ಎರಡೂ ತಂಡಗಳು ಸೆಣಸಲಿವೆ.

ಸಂಕ್ಷಿಪ್ತ ಸ್ಕೋರ್​: ಆಸ್ಟ್ರೇಲಿಯಾ 149/9 (ಬೆನ್ ಮೆಕ್‌ಡರ್ಮಾಟ್ 53, ಮಾರ್ಕಸ್ ಸ್ಟೊಯಿನಿಸ್ 30; ಹಸರಂಗಾ 3-38) ವಿರುದ್ಧ ಶ್ರೀಲಂಕಾ 122/8 (ಪಾತುಮ್ ನಿಸ್ಸಾಂಕ 36, ದಿನೇಶ್ ಚಾಂಡಿಮಲ್ 25; ಜೋಶ್ ಹ್ಯಾಜಲ್‌ವುಡ್ 4-12)

ಇದನ್ನೂ ಓದಿ: ವಿಂಡೀಸ್​ ವಿರುದ್ಧದ ಟಿ-20 ಸರಣಿಗೂ ಮುನ್ನ ಭಾರತಕ್ಕೆ ಆಘಾತ: ಇಬ್ಬರು ಆಟಗಾರರು ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.