ETV Bharat / sports

ಏಷ್ಯನ್ ಗೇಮ್ಸ್‌ ಕ್ರಿಕೆಟ್‌: ಜೈಸ್ವಾಲ್ ಶತಕ, ಬಿಷ್ಣೋಯ್, ಅವೇಶ್​ ಮಿಂಚು.. ನೇಪಾಳ ವಿರುದ್ಧ ಗೆದ್ದ ಟೀಂ ಇಂಡಿಯಾ - ಟಾಸ್​ ಗೆದ್ದ ಭಾರತ ತಂಡ ಮೊದಲ ಬ್ಯಾಟಿಂಗ್​

ಏಷ್ಯನ್​ ಗೇಮ್ಸ್​ ಕ್ರಿಕೆಟ್​ನ ಮೊದಲ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದೆ.

Asian Games Mens T20I 2023  India vs Nepal Quarter Final 1  India won the toss and opt to bat  India won the toss and opt to bat against Nepal  ನೇಪಾಳ ವಿರುದ್ಧ ಟಾಸ್​ ಗೆದ್ದ ಭಾರತ  ಏಷ್ಯನ್ ಗೇಮ್ಸ್‌ ಕ್ರಿಕೆಟ್‌  ಜೈಸ್ವಾಲ್ ಶತಕ  ಏಷ್ಯನ್​ ಗೇಮ್ಸ್​ ಕ್ರಿಕೆಟ್​ನ ಮೊದಲ ಕ್ವಾರ್ಟರ್​ ಫೈನಲ್​ ನೇಪಾಳ ವಿರುದ್ಧ ಭಾರತ ತಂಡ ಟಾಸ್​ ಗೆದ್ದು ಬ್ಯಾಟಿಂಗ್  ತಂಡವನ್ನು ಚೀನಾದ ಹ್ಯಾಂಗ್‌ಝೌ  ಮೊದಲ ಪ್ರಯತ್ನದಲ್ಲೇ ಸ್ವರ್ಣ ಪದಕ  ಟಾಸ್​ ಗೆದ್ದ ಭಾರತ ತಂಡ ಮೊದಲ ಬ್ಯಾಟಿಂಗ್​ ಭಾರತಕ್ಕೆ ಉತ್ತಮ ಆರಂಭ
ಜೈಸ್ವಾಲ್ ಶತಕ
author img

By ETV Bharat Karnataka Team

Published : Oct 3, 2023, 7:51 AM IST

Updated : Oct 3, 2023, 10:45 AM IST

ಹ್ಯಾಂಗ್​ಝೌ, ಚೀನಾ: ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಬಿಸಿಸಿಐ ವನಿತೆಯರ ಮತ್ತು ಪುರುಷರ ತಂಡವನ್ನು ಚೀನಾದ ಹ್ಯಾಂಗ್‌ಝೌಗೆ ಕಳುಹಿಸಿದೆ. ವನಿತೆಯರ ತಂಡ ಇತ್ತೀಚೆಗೆ ತಮ್ಮ ಮೊದಲ ಪ್ರಯತ್ನದಲ್ಲೇ ಸ್ವರ್ಣ ಪದಕ ಗೆದ್ದುಕೊಂಡಿದೆ. ಇಂದು ರುತುರಾಜ್ ಗಾಯಕ್ವಾಡ್​ ನಾಯಕತ್ವದ ಭಾರತ ತಂಡ ಏಷ್ಯಾಡ್​ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನೇಪಾಳ ವಿರುದ್ಧ 23 ರನ್​ಗಳ ಗೆಲುವು ಸಾಧಿಸಿದೆ.

ಭಾರತಕ್ಕೆ ಉತ್ತಮ ಆರಂಭ: ನೇಪಾಳ ವಿರುದ್ಧ ಟಾಸ್​ ಗೆದ್ದ ಭಾರತ ತಂಡ ಮೊದಲ ಬ್ಯಾಟಿಂಗ್​ ಆಯ್ದುಕೊಂಡಿತು. ಆರಂಭಿಕರಾದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ನೇಪಾಳ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಇಬ್ಬರು ಆಟಗಾರರು ಮೊದಲ ವಿಕೆಟ್​ ಪತನಕ್ಕೆ ಶತಕದ ಜೊತೆಯಾಟವಾಡಿದರು. ನಾಯಕ ರುತುರಾಜ್ ಗಾಯಕ್ವಾಡ್ 25 ರನ್​ ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು. ಬಳಿಕ ಬಂದ ಮತ್ತೊಬ್ಬ ಸ್ಫೋಟಕ ಆಟಗಾರ ತಿಲಕ್​ ವರ್ಮಾ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೇ ವಿಕೆಟ್​ವೊಪ್ಪಿಸಿ ನಿರ್ಗಮಿಸಿದರು. ಅವರು ಕೇವಲ 2 ರನ್​ ಮಾತ್ರ ಗಳಿಸಿದ್ದರು.

ವರ್ಮಾ ಔಟಾದ ಬೆನ್ನೆಲ್ಲೇ ಬಂದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಜಿತೇಶ್ ಶರ್ಮಾ 5 ರನ್​ ಕಲೆ ಹಾಕಿ ಔಟಾದರು. ಇನ್ನು ಆರಂಭಿಕರಾಗಿ ಭರ್ಜರಿ ಪ್ರದರ್ಶನ ತೋರಿದ ಯಶಸ್ವಿ ಜೈಸ್ವಾಲ್ 48 ಎಸೆತಗಳಲ್ಲಿ ಶತಕ ಬಾರಿಸಿ, ಔಟಾದರು. ಕೊನೆಯಲ್ಲಿ ಶಿವಂ ದುಬೆ 25 ಮತ್ತು ರಿಂಕು ಸಿಂಗ್ 37 ರನ್ ಸಿಡಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟಿಸಿದರು. ಭಾರತ ತಂಡ 20 ಓವರ್​ಗಳಿಗೆ 4 ವಿಕೆಟ್​ಗಳ ನಷ್ಟಕ್ಕೆ 202 ರನ್​ಗಳನ್ನು ಕಲೆ ಹಾಕಿತು. ನೇಪಾಳ ಪರ ಸೋಂಪಾಲ್ ಕಮಿ, ದೀಪೇಂದ್ರ ಸಿಂಗ್ ಐರಿ ಮತ್ತು ಸಂದೀಪ್ ಲಮಿಚಾನೆ ತಲಾ ಒಂದೊಂದು ವಿಕೆಟ್​ ಪಡೆದು ಭಾರತ ತಂಡವನ್ನು ಕಟ್ಟಿ ಹಾಕಲು ಯತ್ನಿಸಿದರು.

ಫಲಸಲಿಲ್ಲ ನೇಪಾಳ ಹೋರಾಟ: ಭಾರತ ನೀಡಿದ 203 ಗುರಿಯನ್ನು ಬೆನ್ನತ್ತಿದ್ದ ನೇಪಾಳ ಆರಂಭದಿಂದಲೇ ಎಚ್ಚರಿಕೆಯಿಂದ ಕಣಕ್ಕಿಳಿಯಿತು. ಒಂದು ಕಡೆಯಿಂದ ವಿಕೆಟ್​ ಪತನಗೊಳ್ಳುತ್ತಿದ್ದರೇ, ಮತ್ತೊಂದು ಕಡೆಯಿಂದ ಸ್ಕೋರ್​ ಬೋರ್ಡ್​ಗಳಲ್ಲಿ ರನ್​ಗಳ ಹೊಳೆಯೇ ಹರಿದು ಬರುತ್ತಿತ್ತು. ಒಟ್ನಲ್ಲಿ ನಿಗದಿತ 20 ಓವರ್​ಗಳಿಗೆ ನೇಪಾಳ ತಂಡ 9 ವಿಕೆಟ್​ಗಳನ್ನು ಕಳೆದುಕೊಂಡು 179 ರನ್​ಗಳನ್ನು ಮಾತ್ರ ಕಲೆ ಹಾಕಲು ಶಸಕ್ತವಾಯಿತು.

ನೇಪಾಳ ಪರ ಕುಶಾಲ್ ಭುರ್ಟೆಲ್ 28 ರನ್​, ವಿಕೆಟ್​ ಕೀಪರ್ ಆಸಿಫ್ ಶೇಖ್ 10 ರನ್​, ಕುಶಾಲ್ ಮಲ್ಲಾ 29 ರನ್​, ಸಂದೀಪ್ ಜೋರಾ 29 ರನ್​, ಗುಲ್ಸನ್ ಝಾ 6 ರನ್​, ನಾಯಕ ರೋಹಿತ್ ಪೌಡೆಲ್ 3 ರನ್​, ಸಂದೀಪ್ ಲಮಿಚಾನೆ 5 ರನ್​ ಮತ್ತು ಸೋಂಪಾಲ್ ಕಮಿ 7 ರನ್​ ಗಳಿಸಿ ಔಟಾದ್ರೆ, ಕರಣ್ ಕೆಸಿ 18 ರನ್​, ಅಬಿನಾಶ್ ಬೋಹರಾ 0 ಅಜೇರಾಗಿ ಉಳಿದರು. ಭಾರತದ ಪರ ರವಿ ಬಿಷ್ಣೋಯ್ ಮತ್ತು ಅವೇಶ್ ಖಾನ್ ತಲಾ ಮೂರು ವಿಕೆಟ್​ ಪಡೆದ್ರೆ, ಅರ್ಶ್ದೀಪ್ ಸಿಂಗ್ 2 ವಿಕೆಟ್​ ಮತ್ತು ರವಿಶ್ರೀನಿವಾಸನ್ ಸಾಯಿ ಕಿಶೋರ್ 1 ವಿಕೆಟ್​ ಪಡೆದು ಮಿಂಚಿದರು.

ಭಾರತ ತಂಡದ 11ರ ಬಳಗ: ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್..

ನೇಪಾಳ ತಂಡದ 11ರ ಬಳಗ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್​ ಕೀಪರ್), ಸಂದೀಪ್ ಜೋರಾ, ಗುಲ್ಸನ್ ಝಾ, ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸೋಂಪಾಲ್ ಕಮಿ, ಕರಣ್ ಕೆಸಿ, ಅಬಿನಾಶ್ ಬೋಹರಾ, ಸಂದೀಪ್ ಲಮಿಚಾನೆ.

ಏಷ್ಯನ್​ ಗೇಮ್ಸ್‌ನಲ್ಲಿ ಕ್ರಿಕೆಟ್​: ಏಷ್ಯನ್​ ಗೇಮ್ಸ್​ಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್​ ಫೈನಲ್‌ಗೆ​ ಅರ್ಹತೆ ಪಡೆದುಕೊಂಡಿವೆ. ನೇಪಾಳ, ಹಾಂ​ಕಾಂಗ್​ ಮತ್ತು ಮಲೇಷ್ಯಾ ತಂಡಗಳು ಅರ್ಹತಾ ಹಂತದ ಪಂದ್ಯಗಳನ್ನಾಡಿ ಕ್ವಾರ್ಟ​ರ್​ ಫೈನಲ್​ಗೆ ಪ್ರವೇಶ ಪಡೆದುಕೊಂಡಿವೆ. ಅಕ್ಟೋಬರ್​ 4ರಂದು ಶ್ರೀಲಂಕಾ vs ಅಫ್ಘಾನಿಸ್ತಾನ, ಬಾಂಗ್ಲಾದೇಶ vs ಮಲೇಷ್ಯಾ ನಡುವೆ ಪಂದ್ಯಗಳಿವೆ. ಏಕದಿನ ವಿಶ್ವಕಪ್​ ಮತ್ತು ಏಷ್ಯನ್​ ಗೇಮ್ಸ್​ ಒಂದೇ ಸಮಯದಲ್ಲಿ ನಡೆಯುತ್ತಿರುವುದು ಗಮನಾರ್ಹ..

ಓದಿ: ಭಾರತೀಯ ಪಿಚ್​​ನಲ್ಲಿ ಅಶ್ವಿನ್​ ಉತ್ತಮ ಬೌಲರ್; ಅಕ್ಷರ್​ ಸುವರ್ಣಾವಕಾಶ ಕಳೆದುಕೊಂಡರು- ಸಂದೀಪ್ ಪಾಟೀಲ್

Last Updated : Oct 3, 2023, 10:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.