ನವದೆಹಲಿ: ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂ ಬರುವ ಏಷ್ಯನ್ ಗೇಮ್ಸ್ನಲ್ಲಿ ಆಡಬೇಕಾದಲ್ಲಿ ವನಿತೆಯರ ತಂಡ ಫೈನಲ್ಸ್ ಪ್ರವೇಶ ಪಡೆಯಬೇಕಾಗುತ್ತದೆ. ಏಷ್ಯನ್ ಗೇಮ್ಸ್‌ಗೆ ಭಾರತೀಯ ಕ್ರಿಕೆಟ್ ಪುರುಷ ಮತ್ತು ಮಹಿಳಾ ತಂಡ ನೇರ ಎಂಟರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ. ಗೆಮ್ಸ್ನ ನಿಯಮದಂತೆ ಜೂನ್ 1ರ ಐಸಿಸಿ ಟಿ -20 ಅಂತಾರಾಷ್ಟ್ರೀಯ ಶ್ರೇಯಾಂಕದ ಆಧಾರದ ಮೇಲೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ನೇರ ಸ್ಥಾನವನ್ನು ಪಡೆದುಕೊಂಡಿದೆ.
-
Harmanpreet Kaur set to miss the two matches in the Asian Games due to her ban. pic.twitter.com/2UXlLebtKB
— Mufaddal Vohra (@mufaddal_vohra) July 28, 2023 " class="align-text-top noRightClick twitterSection" data="
">Harmanpreet Kaur set to miss the two matches in the Asian Games due to her ban. pic.twitter.com/2UXlLebtKB
— Mufaddal Vohra (@mufaddal_vohra) July 28, 2023Harmanpreet Kaur set to miss the two matches in the Asian Games due to her ban. pic.twitter.com/2UXlLebtKB
— Mufaddal Vohra (@mufaddal_vohra) July 28, 2023
ಈ ನೇರ ಪ್ರವೇಶ ಪಡೆದಿರುವ ಸಂತೋಷ ಭಾರತೀಯ ವನಿತೆಯ ತಂಡಕ್ಕೆ ಒಂದೆಡೆ ಆದರೆ, ಇನ್ನೊಂದೆಡೆ ನಾಯಕಿ ಇಲ್ಲದೇ ಮೈದಾನಕ್ಕೆ ಇಳಿಯ ಬೇಕಾದ ಪರಿಸ್ಥಿತಿ ಎದುರಾಗಿದೆ. ಹೌದು, ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂಪೈರಿಂಗ್ ಅನ್ನು ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಹರ್ಮನ್‌ಪ್ರೀತ್‌ಗೆ ಎರಡು ಪಂದ್ಯಗಳಿಂದ ಐಸಿಸಿ ನಿಷೇಧ ಹೇರಿದೆ.
ಹೀಗಾಗಿ ಹರ್ಮನ್‌ಪ್ರೀತ್ ಅವರು ಕ್ವಾರ್ಟರ್-ಫೈನಲ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅರ್ಹತೆ ಪಡೆದು ಅಂತಿ ಪಂದ್ಯಕ್ಕೆ ಸ್ಥಾನ ಗಿಟ್ಟಿಸಿಕೊಂಡಲ್ಲಿ ನಾಯಕಿ ಕೌರ್ ಬ್ಯಾಟ್ ಹಿಡಿಯಲಿದ್ದಾರೆ. ಮಹಿಳೆಯರ ಸ್ಪರ್ಧೆಗಳು ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ ಮತ್ತು ಸೆಪ್ಟೆಂಬರ್ 26 ರಂದು ಚಿನ್ನ ಮತ್ತು ಕಂಚಿನ ಪದಕದ ಸ್ಪರ್ಧೆಯಿಂದ ಕೊನೆಗೊಳ್ಳಲಿದೆ.
-
Harmanpreet Kaur has been suspended for 2 games by ICC. pic.twitter.com/DFuD5XBcfJ
— Johns. (@CricCrazyJohns) July 25, 2023 " class="align-text-top noRightClick twitterSection" data="
">Harmanpreet Kaur has been suspended for 2 games by ICC. pic.twitter.com/DFuD5XBcfJ
— Johns. (@CricCrazyJohns) July 25, 2023Harmanpreet Kaur has been suspended for 2 games by ICC. pic.twitter.com/DFuD5XBcfJ
— Johns. (@CricCrazyJohns) July 25, 2023
ರುತುರಾಜ್ ಗಾಯಕ್ವಾಡ್ ನೇತೃತ್ವದ ಪುರುಷರ ತಂಡವು ಸಹ ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಪಡೆದಿದೆ. ಪುರುಷರ ಈವೆಂಟ್ ಸೆಪ್ಟೆಂಬರ್ 28 ರಂದು ಪ್ರಾರಂಭವಾಗುತ್ತದೆ. ಏಕದಿನ ವಿಶ್ವಕಪ್ ಅಕ್ಟೋಬರ್ 5ಕ್ಕೆ ಆರಂಭವಾದರೆ, ಪುರುಷರ ಏಷ್ಯನ್ ಗೇಮ್ಸ್ ಫೈನಲ್ 7 ರಂದು ನಡೆಯಲಿದೆ. ಭಾರತೀಯ ಕ್ರಿಕೆಟ್ ತಂಡವು ಫೈನಲ್‌ಗೆ ಅರ್ಹತೆ ಪಡೆದರೆ ಅವರು ಸತತ ಮೂರು ದಿನ ಪಂದ್ಯವನ್ನು ಆಡಬೇಕಾಗುತ್ತದೆ. ಅಕ್ಟೋಬರ್ 5 ರಂದು ಕ್ವಾರ್ಟರ್ ಫೈನಲ್, ಅಕ್ಟೋಬರ್ 6 ಸೆಮಿಫೈನಲ್ ಮತ್ತು ಅಕ್ಟೋಬರ್ 7 ಫೈನಲ್ಸ್ ನಡೆಯಲಿದೆ.
-
India's schedule in Asian Games 2023 [PTI]:
— Johns. (@CricCrazyJohns) July 28, 2023 " class="align-text-top noRightClick twitterSection" data="
Oct 5th - Quarter Final
Oct 6th - Semi Final (If they Qualify)
Oct 7th - Final (If they Qualify)
It will have International status. pic.twitter.com/EAWEwK4vTF
">India's schedule in Asian Games 2023 [PTI]:
— Johns. (@CricCrazyJohns) July 28, 2023
Oct 5th - Quarter Final
Oct 6th - Semi Final (If they Qualify)
Oct 7th - Final (If they Qualify)
It will have International status. pic.twitter.com/EAWEwK4vTFIndia's schedule in Asian Games 2023 [PTI]:
— Johns. (@CricCrazyJohns) July 28, 2023
Oct 5th - Quarter Final
Oct 6th - Semi Final (If they Qualify)
Oct 7th - Final (If they Qualify)
It will have International status. pic.twitter.com/EAWEwK4vTF
ಟೀಂ ಇಂಡಿಯಾ (ಸೀನಿಯರ್ ಮೆನ್) ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) ಪುರುಷರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾ (ಸೀನಿಯರ್ ವುಮೆನ್ಸ್) ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ಟೈಟಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅನುಷಾ ಬಾರೆಡ್ಡಿ ಮಹಿಳೆಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸ್ಟ್ಯಾಂಡ್‌ಬೈ ಪಟ್ಟಿ: ಹರ್ಲೀನ್ ಡಿಯೋಲ್, ಕಾಶ್ವೀ ಗೌತಮ್, ಸ್ನೇಹ್ ರಾಣಾ, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್ ಇದ್ದು, ಮಹಿಳಾ ಕ್ರಿಕೆಟ್ ಸ್ಪರ್ಧೆಯು ಸೆಪ್ಟೆಂಬರ್ 19 ರಿಂದ 28ರ ವರೆಗೆ ಟಿ20 ಸ್ವರೂಪದಲ್ಲಿ ನಡೆಯಲಿದೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್‌ಗೆ ಟೀಂ ಇಂಡಿಯಾ ಪ್ರಕಟ.. ರುತುರಾಜ್ ಗಾಯಕ್ವಾಡ್ಗೆ ನಾಯಕತ್ವ