ದೋಹಾ (ಕತಾರ್): ಇಲ್ಲಿ ನಡೆಯುತ್ತಿರುವ 2023 ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಮೊದಲ ಪಂದ್ಯದಲ್ಲಿ ಏಷ್ಯಾ ಲಯನ್ಸ್ ತಂಡ ಇಂಡಿಯನ್ ಮಹಾರಾಜಾಸ್ ತಂಡವನ್ನ 9 ರನ್ಗಳಿಂದ ಮಣಿಸಿತು. ಏಷ್ಯಾ ಲಯನ್ಸ್ ಕೊಟ್ಟಿದ್ದ 165 ರನ್ಗಳಿಸವಲ್ಲಿ ಇಂಡಿಯನ್ ಮಹಾರಾಜಾಸ್ ಹಿನ್ನಡೆ ಅನುಭವಿಸಿತು, 20 ಓವರ್ನಲ್ಲಿ ಕೇವಲ 156 ರನ್ ಮಾತ್ರ ಗಳಿಸಿತು.
-
After a tough defeat in a nail-biting contest, India Maharajas will be back on the winning ways!
— Legends League Cricket (@llct20) March 10, 2023 " class="align-text-top noRightClick twitterSection" data="
The maharajas scored 156 runs but came short, with 4 sixes, 14 fours and 6 wickets overall.#LegendsLeagueCricket #LLCMasters #LLCT20 #YahanSabBossHain pic.twitter.com/auUrAu2vMU
">After a tough defeat in a nail-biting contest, India Maharajas will be back on the winning ways!
— Legends League Cricket (@llct20) March 10, 2023
The maharajas scored 156 runs but came short, with 4 sixes, 14 fours and 6 wickets overall.#LegendsLeagueCricket #LLCMasters #LLCT20 #YahanSabBossHain pic.twitter.com/auUrAu2vMUAfter a tough defeat in a nail-biting contest, India Maharajas will be back on the winning ways!
— Legends League Cricket (@llct20) March 10, 2023
The maharajas scored 156 runs but came short, with 4 sixes, 14 fours and 6 wickets overall.#LegendsLeagueCricket #LLCMasters #LLCT20 #YahanSabBossHain pic.twitter.com/auUrAu2vMU
ಏಷ್ಯಾ ಲಯನ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಂಡಿಯನ್ ಮಹಾರಾಜಾಸ್ ಆರಂಭಿಕ ಬೌಲಿಂಗ್ ಜೋಡಿ ಅಶೋಕ್ ದಿಂಡಾ ಮತ್ತು ಇರ್ಫಾನ್ ಪಠಾಣ್ ಅವರು ತಿಲಕರತ್ನೆ ದಿಲ್ಶಾನ್ ಅವರನ್ನು 5 ರನ್‌ಗಳಿಗೆ ಮತ್ತು ಅಸ್ಗರ್ ಅಫ್ಘಾನ್ 2 ಎಸೆತಗಳಲ್ಲಿ 1 ರನ್‌ಗೆ ಬೇಗನೇ ಔಟಾದರು.
ಎರಡು ವಿಕೆಟ್ ಕಳೆದುಕೊಂಡಿದ್ದ ಲಯನ್ಸ್ಗೆ ಮಿಸ್ಬಾ-ಉಲ್-ಹಕ್ ಮತ್ತು ಉಪುಲ್ ತರಂಗ ಆಸರೆಯಾದರು. ಇಬ್ಬರು ಬ್ಯಾಟರ್ಗಳು 100+ ರನ್ನ ಜೊತೆಯಾಟ ಆಡಿದರು. ಇದು ತಂಡ ಮೊತ್ತವನ್ನು ಬಲಿಷ್ಠಗೊಳಿಸಿತು. 40 ರನ್ ಗಳಿಸಿ ಆಡುತ್ತಿದ್ದ ಉಪುಲ್ ತರಂಗ ಅವರನ್ನು ಅವಾನಾ ಅವರು ಔಟ್ ಮಾಡಿದರು. ಇದರಿಂದ ಲಯನ್ಸ್ನ ಭರ್ಜರಿ ಶತಕ ರನ್ ಜೊತೆಯಾಟ ಅಂತ್ಯವಾಯಿತು.
ನಂತರ ನಾಯಕ ಶಾಹಿದ್ ಅಫ್ರಿದಿ ಬ್ಯಾಟಿಂಗ್‌ಗೆ ಇಳಿದರು. ತರಂಗ ವಿಕೆಟ್ ನಂತರ ತಂಡಕ್ಕೆ 23 ರನ್ ಸೇರಿಸುವಷ್ಟರಲ್ಲಿ ಮಿಸ್ಬಾ-ಉಲ್-ಹಕ್ ಬಿನ್ನಿಗೆ ವಿಕೆಟ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ನಂತರ ಶಾಹಿದ್ ಅಫ್ರಿದಿ (12) ಮತ್ತು ಅಬ್ದುರ್ ರಜಾಕ್ (6) ವಿಕೆಟ್ ಕಳೆದುಕೊಂಡರು. ತಿಸಾರಾ ಪೆರೆರಾ (5) ಮತ್ತು ಪರಸ್ ಖಡ್ಕಾ (3) ಬ್ಯಾಟಿಂಗ್ನಲ್ಲಿದ್ದಾಗ 20 ಓವರ್ ಅಂತ್ಯವಾಗಿ ಅಜೇವಾಗಿ ಉಳಿದರು.
ಚೇಸಿಂಗ್ನಲ್ಲಿ ಎಡವಿದ ಮಹರಾಜಾಸ್: ಏಷ್ಯಾ ಲಯನ್ಸ್ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ್ದ ಇಂಡಿಯನ್ಸ್ಗೆ ಆರಂಭಿಕ ಆಘಾತವಾಗಿತು. ರನ್ ಗಳಿಸುವ ಮುನ್ನ ಕನ್ನಡಿಗ ರಾಬಿನ್ ಉತ್ತಪ್ಪ ವಿಕೆಟ್ ಒಪ್ಪಿಸಿದರು. ಎರಡು ಮತ್ತು ಮೂರನೇ ವಿಕೆಟ್ಗೆ ಒಂದಾದ ಗೌತಮ್ ಗಂಭೀರ್ ಹಾಗೂ ಮುರಳಿ ವಿಜಯ್ ಅರ್ಧಶತಕದ ಜೊತೆಯಾಟ ಮಾಡಿ ತಂಡಕ್ಕೆ ಆಸರೆಯಾದರು. 19 ಬಾಲ್ನಲ್ಲಿ 25 ರನ್ ಗಳಿಸಿ ಆಡುತ್ತಿದ್ದ ಮುರಳಿ ವಿಜಯ್ ಅವರು ತಿಲಕರತ್ನೆ ದಿಲ್ಶಾನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸುರೇಶ್ ರೈನ 3 ರನ್ ಔಟ್ ಆದರು.
ಗೌತಮ್ ಗಂಭೀರ್ (54) ಅರ್ಧಶತಕ ಗಳಿಸಿದ್ದು ಬಿಟ್ಟರೆ ಮತ್ತಾರು ಹೇಳುವಂತಹ ಬ್ಯಾಟಿಂಗ್ ಮಾಡಲಿಲ್ಲ. ಮೊಹಮ್ಮದ್ ಕೈಫ್ (22), ಯೂಸುಫ್ ಪಠಾಣ್ (14), ಸ್ಟುವರ್ಟ್ ಬಿನ್ನಿ(8) ಮತ್ತು ಇರ್ಫಾನ್ ಪಠಾಣ್ (19) ಹೆಚ್ಚು ರನ್ ಗಳಿಸದೇ ವಿಕೆಟ್ ಒಪ್ಪಿಸಿದರು. ಹರ್ಭಜನ್ ಸಿಂಗ್ ಮತ್ತು ಪರವಿಂದರ್ ಅವಾನ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಏಷ್ಯಾ ಲಯನ್ಸ್ ಬೌಲಿಂಗ್ ಮುಂದೆ 9 ರನ್‌ಗೆ ಮಣಿಯ ಬೇಕಾಯಿತು. ಲಯನ್ಸ್ ಪರ ಸೊಹೈಲ್ ತನ್ವೀರ್ 27 ರನ್ ಕೊಟ್ಟು 3 ವಿಕೆಟ್ ಪಡೆದು ಸ್ಟಾರ್ ಪರ್ಫಾರ್ಮರ್ ಆದರು.
ಇದನ್ನೂ ಓದಿ: ಯುಪಿ ನಾಯಕಿಯ ಅಮೋಘ 96 ರನ್ಗಳ ಆಟ: ಆರ್ಸಿಬಿಗೆ ಸತತ 4ನೇ ಸೋಲು