ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಮತ್ತೆ ತಾನೇ ಬಾಸ್ ಎಂದು ತೋರಿಸಿದ್ದಾರೆ. ಏಷ್ಯಾಕಪ್ನ ಭಾರತ - ಪಾಕ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಶತಕದ ಇನ್ನಿಂಗ್ಸ್ ಆಡಿದರು. ರನ್ ಮಷಿನ್ ಕೊಹ್ಲಿ ಪಂದ್ಯದಲ್ಲಿ 98 ರನ್ ಪೂರೈಸಿದ ಕೂಡಲೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 13,000 ಪೂರೈಸಿದ ದಾಖಲೆ ಮಾಡಿದರು.
-
13000 ODI runs and counting for 👑 Kohli
— BCCI (@BCCI) September 11, 2023 " class="align-text-top noRightClick twitterSection" data="
He also brings up his 47th ODI CENTURY 👏👏#TeamIndia pic.twitter.com/ePKxTWUTzn
">13000 ODI runs and counting for 👑 Kohli
— BCCI (@BCCI) September 11, 2023
He also brings up his 47th ODI CENTURY 👏👏#TeamIndia pic.twitter.com/ePKxTWUTzn13000 ODI runs and counting for 👑 Kohli
— BCCI (@BCCI) September 11, 2023
He also brings up his 47th ODI CENTURY 👏👏#TeamIndia pic.twitter.com/ePKxTWUTzn
13 ಸಾವಿರ ರನ್ ಪೂರೈಸಿದ 5 ಬ್ಯಾಟರ್ ಕೊಹ್ಲಿ ಆಗಿದ್ದಾರೆ. ನಾಲ್ವರು ಆಟಗಾರರು ನಿವೃತ್ತಿ ತೆಗೆದುಕೊಂಡಿದ್ದಾರೆ. ಈಗಲೂ ಪಂದ್ಯಗಳನ್ನು ಆಡುತ್ತಿರುವ ಆಟಗಾರರಲ್ಲಿ ವಿರಾಟ್ ಮಾತ್ರ ಇದ್ದಾರೆ. ಇವರಿಗೂ ಮೊದಲು ಭಾರತದ ಪರ ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು. ಸಚಿನ್ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ವಿಶ್ವದ ನಂ.1 ಆಟಗಾರ. ಅವರು ನಿವೃತ್ತಿಯ ವೇಳೆಗೆ ಏಕದಿನ ಕ್ರಿಕೆಟ್ನಲ್ಲಿ 49 ಶತಕದಿಂದ 18,426 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
-
A monumental achievement today as @imVkohli crosses the 13,000-run mark in ODIs! Your unwavering commitment and exceptional consistency in the game make you a true cricketing legend. Keep those runs flowing and continue making us proud! 🇮🇳 pic.twitter.com/qS1UIZXEa4
— Jay Shah (@JayShah) September 11, 2023 " class="align-text-top noRightClick twitterSection" data="
">A monumental achievement today as @imVkohli crosses the 13,000-run mark in ODIs! Your unwavering commitment and exceptional consistency in the game make you a true cricketing legend. Keep those runs flowing and continue making us proud! 🇮🇳 pic.twitter.com/qS1UIZXEa4
— Jay Shah (@JayShah) September 11, 2023A monumental achievement today as @imVkohli crosses the 13,000-run mark in ODIs! Your unwavering commitment and exceptional consistency in the game make you a true cricketing legend. Keep those runs flowing and continue making us proud! 🇮🇳 pic.twitter.com/qS1UIZXEa4
— Jay Shah (@JayShah) September 11, 2023
ಸಚಿನ್ ನಂತರ ಕುಮಾರ ಸಂಗಾಕಾರ (14234), ರಿಕ್ಕಿ ಪಾಂಟಿಂಗ್ (13704) ಮತ್ತು ಸನತ್ ಜಯಸೂರ್ಯ (13430) ಇದ್ದಾರೆ. ಈಗ ಇವರೆಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಂಡಿರುವುದರಿಂದ ಕಿಂಗ್ ಕೊಹ್ಲಿ ಮುಂದಿನ ದಿನಗಳಲ್ಲಿ ಇವರ ಸ್ಕೋರ್ನ್ನು ಮೀರುವ ಸಾಧ್ಯತೆ ಇದೆ. ಈ ವರ್ಷ ಏಕದಿನ ವಿಶ್ವಕಪ್ ಇದ್ದು, ಫಾರ್ಮ್ನಲ್ಲಿರುವ ಕೊಹ್ಲಿ ಸತತ ರನ್ ಗಳಿಸಿದಲ್ಲಿ ಜಯಸೂರ್ಯ ಅವರ ರನ್ ದಾಖಲೆ ಪುಡಿಯಾಗಲಿದೆ. ವಿರಾಟ್ ಕೊಹ್ಲಿ ಕೇವಲ 267 ಇನ್ನಿಂಗ್ಸ್ನಿಂದ 13000 ಪೋರೈಸಿದ ದಾಖಲೆಮಾಡಿದ್ದಾರೆ.
47ನೇ ಏಕದಿನ ಶತಕ: ಏಕದಿನ ಕ್ರಿಕೆಟ್ನ 47ನೇ ಶತಕವನ್ನು ವಿರಾಟ್ ಇಂದಿನ ಪಂದ್ಯದಲ್ಲಿ ಪೂರೈಸಿದ್ದಾರೆ. ಇನ್ನಿಂಗ್ಸ್ನಲ್ಲಿ ರನ್ ಮಷಿನ್ ಕೊಹ್ಲಿ ಕೇವಲ 84 ಬಾಲ್ನಲ್ಲಿ ಶತಕ ಪೂರೈಸಿದರು. ಶತಕದ ಮೊದಲ 50 ರನ್ ಗಳಿಸಲು 55 ಬಾಲ್ಗಳನ್ನು ತೆಗೆದುಕೊಂಡರೆ, ನಂತರದ 50 ಕೇವಲ 29 ಬಾಲ್ಗಳನ್ನು ತೆಗೆದುಕೊಂಡರು. ಪಂದ್ಯದ ಅಂತ್ಯಕ್ಕೆ ವಿರಾಟ್ ಅಜೇಯ 122 ರನ್ನ ಇನ್ನಿಂಗ್ಸ್ ಆಡಿದ್ದರು.
-
Rising above the rest, as always! 🔝❤️🔥
— Royal Challengers Bangalore (@RCBTweets) September 11, 2023 " class="align-text-top noRightClick twitterSection" data="
Fastest ever to 13000 ODI runs 👑💥#PlayBold #TeamIndia #PAKvIND #AsiaCup2023 @imVkohli pic.twitter.com/KPbqPQWvhI
">Rising above the rest, as always! 🔝❤️🔥
— Royal Challengers Bangalore (@RCBTweets) September 11, 2023
Fastest ever to 13000 ODI runs 👑💥#PlayBold #TeamIndia #PAKvIND #AsiaCup2023 @imVkohli pic.twitter.com/KPbqPQWvhIRising above the rest, as always! 🔝❤️🔥
— Royal Challengers Bangalore (@RCBTweets) September 11, 2023
Fastest ever to 13000 ODI runs 👑💥#PlayBold #TeamIndia #PAKvIND #AsiaCup2023 @imVkohli pic.twitter.com/KPbqPQWvhI
ಏಕದಿನ ಏಷ್ಯಾಕಪ್ನಲ್ಲಿ ಶತಕದ ದಾಖಲೆ: ಏಕದಿನ ಮಾದರಿಯ ಏಷ್ಯಾಕಪ್ನಲ್ಲಿ ವಿರಾಟ್ ಕೊಹ್ಲಿ 4ನೇ ಶತಕ ದಾಖಲಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸನತ್ ಜಯಸೂರ್ಯ ಈ ಪಟ್ಟಿಯಲ್ಲಿ 6 ಶತಕಗಳಿಂದ ಅಗ್ರ ಸ್ಥಾನದಲ್ಲಿದ್ದಾರೆ. ಕುಮಾರ್ ಸಂಗಕ್ಕರ್ ಮತ್ತು ಶೋಯಬ್ ಮಲ್ಲಿಕ್ ನಂತರದ 3 ಮತ್ತು 4ನೇ ಸ್ಥಾನವನ್ನು ಕ್ರಮವಾಗಿ ಅಲಂಕರಿಸಿದ್ದಾರೆ.
ದಾಖಲೆಯ ಜೊತೆಯಾಟ: ಪಾಕಿಸ್ತಾನದ ವಿರುದ್ಧ ದಾಖಲೆಯ ಜೊತೆಯಾಟವನ್ನು ಭಾರತ ನೀಡಿದೆ. ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 233 ರನ್ ಜೊತೆಯಾಟ ಅಡಿದರು. ಇದಕ್ಕೂ ಮೊದಲು ನವಜೋತಿ ಸಿಂಗ್ ಸಿಧು ಮತ್ತು ಸಚಿನ್ ತೆಂಡೂಲ್ಕರ್ 231 ರನ್ಗಳ ಪಾಲುದಾರಿಕೆಯನ್ನು 1996ರಲ್ಲಿ ಮಾಡಿದ್ದರು. ಇಂದು 233 ರನ್ ಜೊತೆಯಾಟದ ಮೂಲಕ ಈ ದಾಖಲೆ ಬ್ರೇಕ್ ಆಗಿದೆ. 2018 ರಲ್ಲಿ ಶಿಖರ್ ಧವನ್ ಮತ್ತು ರೋಹಿತ್ 210 ರನ್ಗಳು, 2005 ರಲ್ಲಿ ರಾಹುಲ್ ದ್ರಾವಿಡ್ ಮತ್ತು ಸೆಹ್ವಾಗ್ 201 ರನ್ಗಳ ಜೊತೆಯಾಟವಾಡಿದ್ದರು.
13000 ರನ್ ಗಳಿಸಿ ದಾಖಲೆ ಬರೆದ ವಿರಾಟ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಎಕ್ಸ್ ಆ್ಯಪ್ನಲ್ಲಿ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ವಿರೇಂದ್ರ ಸೆಹ್ವಾಗ್ ಸಹ ವಿರಾಟ್ ಸಾಧನೆಯನ್ನು ತಮ್ಮ ಪೋಸ್ಟ್ನಲ್ಲಿ ಹೊಗಳಿದ್ದಾರೆ.
ಇದನ್ನೂ ಓದಿ: ವಿರಾಟ್, ರಾಹುಲ್ ಶತಕದಾಟ... ಪಾಕಿಸ್ತಾನಕ್ಕೆ 357 ರನ್ಗಳ ಬೃಹತ್ ಗುರಿ