ETV Bharat / sports

Asia Cup: ಇಂದಿನಿಂದ ಸೂಪರ್​ 4 ಹಂತ.. ಕೊಲಂಬೊದಲ್ಲಿ 10 ದಿನ ಮಳೆ ಸಾಧ್ಯತೆ, ಪಂದ್ಯಗಳಿಗೆ ಅಡ್ಡಿ ಆತಂಕ

ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್​ 4 ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಸೆಣಸಾಡಲಿವೆ. ಕೊಲಂಬೊದಲ್ಲಿ ಮಳೆ ಭೀತಿ ಮುಂದುವರಿದಿದೆ.

ಏಷ್ಯಾ ಕಪ್
ಏಷ್ಯಾ ಕಪ್
author img

By ETV Bharat Karnataka Team

Published : Sep 6, 2023, 1:11 PM IST

ಕೊಲಂಬೊ (ಶ್ರೀಲಂಕಾ) : ಆಫ್ಘಾನಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ ಶ್ರೀಲಂಕಾ 2 ರನ್​ಗಳಿಂದ ಗೆಲುವು ಸಾಧಿಸಿ ಸೂಪರ್​ 4 ಹಂತ ತಲುಪಿದೆ. ಈ ಮೂಲಕ ಗುಂಪು ಹಂತದ ಎಲ್ಲ ಮುಕ್ತಾಯವಾಗಿವೆ. ಎರಡು ಗಂಪುಗಳಿಂದ ನಾಲ್ಕು ತಂಡಗಳು ಸೂಪರ್ 4ಗೆ ಎಂಟ್ರಿ ಕೊಟ್ಟಿವೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಬಿ ಗುಂಪಿನಿಂದ ಶ್ರೀಲಂಕಾ, ಬಾಂಗ್ಲಾದೇಶ ಅರ್ಹತೆ ಪಡೆದಿವೆ. ನೇಪಾಳ ಮತ್ತು ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಬಿದ್ದಿವೆ.

ಇಂದಿನಿಂದ ಸೂಪರ್​ 4 ಹಂತ : ನಾಲ್ಕು ಬಲಿಷ್ಠ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದು, ಇಂದಿನಿಂದ ಸೂಪರ್​ 4 ಪಂದ್ಯಗಳು ಆರಂಭವಾಗಲಿವೆ. ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿದ್ದು, ಅಗ್ರ 2 ಸ್ಥಾನ ಪಡೆದವರು ಫೈನಲ್​ನಲ್ಲಿ ಟ್ರೋಫಿಗಾಗಿ ಕಾದಾಡಲಿದ್ದಾರೆ. ಫೈನಲ್ ಪಂದ್ಯ ಸೆ.17 ರಂದು ಕೊಲಂಬೊದಲ್ಲಿ ನಡೆಯಲಿದೆ.

ಹವಾಮಾನ ಇಲಾಖೆಯ ಮಳೆ ಮಾಹಿತಿ
ಹವಾಮಾನ ಇಲಾಖೆಯ ಮಳೆ ಮಾಹಿತಿ

ಸೂಪರ್​ 4 ಹಂತದ ಇಂದಿನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೆಣಸಾಡಲಿವೆ. ಈ ಪಂದ್ಯ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಾಂಗ್ಲಾದೇಶ ಗುಂಪು ಹಂತದಲ್ಲಿ ಆಡಿದ 2 ಪಂದ್ಯಗಳಲ್ಲಿ ತಲಾ ಒಂದು, ಸೋಲು ಗೆಲುವು ಕಂಡು ಎರಡನೇ ಸ್ಥಾನಿಯಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಎ ತಂಡದಲ್ಲಿದ್ದ ಪಾಕಿಸ್ತಾನ, ಭಾರತ ಎದುರಿನ ಪಂದ್ಯ ಮಳೆಯಿಂದ ರದ್ದಾಗಿದ್ದರೂ, ನೇಪಾಳ ವಿರುದ್ಧ ಗೆದ್ದು ಸೂಪರ್​ 4ಗೆ ಬಂದಿದೆ.

  • Schedule of Super 4 matches in Asia Cup 2023:

    Sept 6 - PAK vs BAN
    Sept 9 - SL vs BAN
    Sept 10 - IND vs PAK
    Sept 12 - IND vs SL
    Sept 14 - PAK vs SL
    Sept 15 - IND vs BAN

    Which teams will play in the finals of the Asia Cup? pic.twitter.com/tmgOLmaBys

    — Johns. (@CricCrazyJohns) September 6, 2023 " class="align-text-top noRightClick twitterSection" data=" ">

ಕೊಲಂಬೊದಲ್ಲಿ ಮಳೆ ಎಚ್ಚರಿಕೆ : ಪಾಕ್​ ಮತ್ತು ಬಾಂಗ್ಲಾದ ಇಂದಿನ ಪಂದ್ಯ ಹೊರತುಪಡಿಸಿ ಸೂಪರ್​ ಫೋರ್​ನ 5 ಪಂದ್ಯ ಮತ್ತು ಫೈನಲ್​ ಸೇರಿದಂತೆ ಎಲ್ಲ ಮ್ಯಾಚ್​ಗಳು ಕೊಲಂಬೊದ ಆರ್​ ಪ್ರೇಮದಾಸ್​ ಮೈದಾನದಲ್ಲಿ ಆಯೋಜಿಸಲಾಗಿದೆ. ಇಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಪಂದ್ಯಗಳಿಗೆ ಅಡ್ಡಿಯುಂಟಾಗುವ ಸಾಧ್ಯತೆ ಹೆಚ್ಚಿದೆ. ಮುಂದಿನ 10 ದಿನಗಳ ಕಾಲ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೂ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 10 ರಂದು ನಡೆಯಲಿದೆ. ಗುಂಪು ಹಂತದ ಮೊದಲ ಪಂದ್ಯ ಇದೇ ಮೈದಾನದಲ್ಲಿ ನಡೆದಿದ್ದು, ಮಳೆಯಿಂದಾಗಿ ಸಂಪೂರ್ಣವಾಗಿ ರದ್ದಾಗಿತ್ತು. ಇದು ಕ್ರೀಡಾಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿಸಿತ್ತು. ಲಂಕಾದಲ್ಲಿ ತೀವ್ರ ಮಳೆಯಾಗುತ್ತಿದ್ದರೂ, ಟೂರ್ನಿಯನ್ನು ಆಯೋಜಿಸಿದ್ದಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಟೀಕೆಗೆ ಗುರಿಯಾಗುತ್ತಿದೆ.

ಸದ್ಯ ಕೊಲಂಬೊದಲ್ಲಿ ಮಳೆ ನಿಲ್ಲುವ ಯಾವ ಲಕ್ಷಣವೂ ಇಲ್ಲ. ಹೀಗಾಗಿ ಎಲ್ಲ ಪಂದ್ಯಗಳನ್ನು ಹಂಬತೋಟ ಮೈದಾನಕ್ಕೆ ಸ್ಥಳಾಂತರಿಸುವ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆ ಕೇಳಿಬಂದಿತ್ತು. ಆದರೆ, ಈ ವಿಷಯದಲ್ಲಿ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​(ಎಸಿಸಿ) ಮತ್ತು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ (ಪಿಸಿಬಿ) ನಡುವೆ ಒಮ್ಮತದ ಕೊರತೆಯಿಂದಾಗಿ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಹೀಗಾಗಿ ಮುಂದಿನ ಎಲ್ಲ ಪಂದ್ಯಗಳ ಮಳೆಯ ಮಧ್ಯೆ ಕೊಲಂಬೊದಲ್ಲೇ ನಡೆಯುವ ಸಾಧ್ಯತೆ ಇದೆ.

ಸೂಪರ್ 4 ​ಪಂದ್ಯಗಳ ವಿವರ

  • ಸೆ.6 ಪಾಕಿಸ್ತಾನ- ಬಾಂಗ್ಲಾದೇಶ
  • ಸೆ.9 ಶ್ರೀಲಂಕಾ- ಬಾಂಗ್ಲಾದೇಶ
  • ಸೆ.10 ಭಾರತ- ಪಾಕಿಸ್ತಾನ
  • ಸೆ.12 ಭಾರತ- ಶ್ರೀಲಂಕಾ
  • ಸೆ.14 ಪಾಕಿಸ್ತಾನ- ಶ್ರೀಲಂಕಾ
  • ಸೆ.15 ಭಾರತ- ಬಾಂಗ್ಲಾದೇಶ
  • ಸೆ.17- ಫೈನಲ್​

ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ಹೋರಾಡಿ ಸೋತ ಅಫ್ಘಾನಿಸ್ತಾನ.. ಸೂಪರ್​ ಫೋರ್​ಗೆ ಬಾಂಗ್ಲಾ, ಲಂಕಾ ಎಂಟ್ರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.