ETV Bharat / sports

Asia Cup 2023: ಸದೀರ ಸಮರವಿಕ್ರಮ ಆಕರ್ಷಕ ಅರ್ಧಶತಕ​.. ಬಾಂಗ್ಲಾ ಟೈಗರ್ಸ್​ಗೆ 258 ರನ್​ಗಳ ಗುರಿ

author img

By ETV Bharat Karnataka Team

Published : Sep 9, 2023, 7:00 PM IST

Sri Lanka vs Bangladesh: ಏಷ್ಯಾಕಪ್​ನ ಸೂಪರ್​ ಫೋರ್​ ಹಂತದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗಿದ್ದು, ಬಾಂಗ್ಲಾ ಗೆಲುವಿಗೆ ಲಂಕಾ 258 ರನ್​ಗಳ​ ಗುರಿ ನೀಡಿದೆ.

Asia Cup 2023 Sri Lanka vs Bangladesh Super Fours Score update

ಕೊಲಂಬೊ (ಶ್ರೀಲಂಕಾ): ಕುಸಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ಅವರ ಅರ್ಧಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ ಬಾಂಗ್ಲಾ ವಿರುದ್ಧದ ಏಷ್ಯಾಕಪ್​ನ ಸೂಪರ್​ ಫೋರ್​ ಪಂದ್ಯದಲ್ಲಿ ನಿಗದಿತ ಓವರ್​ ಅಂತ್ಯಕ್ಕೆ 9 ವಿಕೆಟ್​ಗಳನ್ನು ಕಳೆದುಕೊಂಡು 257 ರನ್​ಗಳನ್ನು ಕಲೆಹಾಕಿದೆ. ಎರಡನೇ ಸೋಲಿನಿಂದ ತಪ್ಪಿಸಿಕೊಳ್ಳಲು ಬಾಂಗ್ಲಾದೇಶದ ಟೈಗರ್​ಗಳು 258 ಗುರಿಯನ್ನು ಬೆನ್ನು ಹತ್ತಬೇಕಿದೆ.

  • Samarawickrama's scintillating 93-run knock has propelled Sri Lanka to a total of 257 runs! The pitch is proving to be two-paced, offering significant assistance to spinners.

    Can the Tigers successfully chase down this total? #AsiaCup2023 #SLvBAN pic.twitter.com/OypgNVEL4O

    — AsianCricketCouncil (@ACCMedia1) September 9, 2023 " class="align-text-top noRightClick twitterSection" data=" ">

ಇಲ್ಲಿನ ಆರ್.​ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್​ ಗೆದ್ದು ಬಾಂಗ್ಲಾದೇಶ ನಾಯಕ ಶಕೀಬ್​ ಬೌಲಿಂಗ್​ ಆಯ್ಕೆ ಮಾಡಿಕೊಂಡರು. ನಾಯಕನ ಈ ನಿರ್ಧಾರವನ್ನು ಬೌಲರ್​ಗಳು ಸಮರ್ಥಿಸಿಕೊಂಡರು. ಇದರಿಂದ ತಂಡ ಸಾಮಾನ್ಯ ಗುರಿಯನ್ನು ಪಡೆಯಿತು. ಮೊದಲ ಓವರ್​ನಲ್ಲೇ ಎಲ್​ಬಿಡಬ್ಲ್ಯುಗೆ ಬಲವಾಗಿ ಮನವಿ ಮಾಡಿ ಬಾಂಗ್ಲಾ ತನ್ನ ಒಂದು ರಿವೀವ್ ಅವಕಾಶವನ್ನು ಕಳೆದುಕೊಂಡರೂ, ಆರಂಭಿಕರು 34 ರನ್​ ಜೊತೆಯಾಟ ಮಾಡುತ್ತಿದ್ದಂತೆ ಹಸನ್ ಮಹಮೂದ್ 18 ರನ್​ ಗಳಿಸಿ ಆಡುತ್ತಿದ್ದ ದಿಮುತ್ ಕರುಣಾರತ್ನೆ ವಿಕೆಟ್​ ಪಡೆದರು.

ನಂತರ ಇನ್ನೊಬ್ಬ ಆರಂಭಿಕ ಪಾತುಮ್ ನಿಸ್ಸಾಂಕ ಜೊತೆ ಒಂದಾದ ಕುಸಲ್ ಮೆಂಡಿಸ್ ಉತ್ತಮ ಜೊತೆಯಾಟವನ್ನು ಕಟ್ಟಿದರು. ಈ ಜೋಡಿ 74 ರನ್ ಕಲೆಹಾಕಿತ್ತು. 40 ರನ್​ ಗಳಿಸಿ ಅರ್ಧಶತಕದತ್ತ ಮುನ್ನಡೆಯುತ್ತಿದ್ದ ನಿಸ್ಸಾಂಕ, ಶೋರಿಫುಲ್ ಇಸ್ಲಾಂ ಬಾಲ್​ನಲ್ಲಿ ಎಲ್​ಬಿಡಬ್ಲ್ಯೂಗೆ ಬಲಿಯಾದರು. ನಿಸ್ಸಾಂಕ ವಿಕೆಟ್​ ಬೆನ್ನಲ್ಲೇ ಕುಸಾಲ್​ ಮೆಂಡಿಸ್​ ಸಹ ತಮ್ಮ 24ನೇ ಅರ್ಧಶತಕ ಗಳಿಸಿ ವಿಕೆಟ್​ ಒಪ್ಪಿಸಿದರು . ಅವರು 3 ಬಾಲ್ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸ್​ನಿಂದ 50 ರನ್​ ಕೆಲೆಹಾಕಿದ್ದರು. ನಂತರ ಬಂದ ಚರಿತ್​ ಅಸಲಂಕಾ (10) ಮತ್ತು ಧನಂಜಯ್​ ಡಿ ಸಿಲ್ವ (6) ಬೇಗ ವಿಕೆಟ್​ ನೀಡಿದರು.

After losing Karunaratne early in the innings, Nissanka and Mendis have teamed up to establish a formidable 50-run partnership on a pitch that is offering considerable turn for the spinners! 💪#AsiaCup2023 #SLvBAN pic.twitter.com/dBExcBNaXw

— AsianCricketCouncil (@ACCMedia1) September 9, 2023 " class="align-text-top noRightClick twitterSection" data=" ">

ಸಮರವಿಕ್ರಮ ಆಟ: ಸದೀರ ಸಮರವಿಕ್ರಮ ತಮ್ಮ ಹೆಸರಿನಂತೆ ಆಟದಲ್ಲಿ ವಿಕ್ರಮ ಪ್ರದರ್ಶನ ನೀಡಿದರು. 4ನೇ ವಿಕೆಟ್​ ಆಗಿ ಕ್ರೀಸ್​ಗೆ ಬಂದ ಸದೀರಗೆ ಯಾವುದೇ ಆಟಗಾರ ಜೊತೆಯಾಟ ನೀಡಲಿಲ್ಲ. 7ನೇ ವಿಕೆಟ್​ಗೆ ಬಂದ ನಾಯಕ ದಸುನ್ ಶನಕ ಕೊಂಚ ಹೊತ್ತು ಬೆಂಬಲಿಸಿದ್ದು ಬಿಟ್ಟರೆ, 5, 6ನೇ ಬ್ಯಾಟರ್​ಗಳು ವಿಫಲರಾದರು. ದುನಿತ್ ವೆಲ್ಲಲಾಗೆ (3) ಮತ್ತು ಮಹೀಶ್ ತೀಕ್ಷ್ಣ (2) ಬೇಗ ಔಟ್​ ಆದರು.

ಸದೀರ ಸಮರವಿಕ್ರಮ 72 ಬಾಲ್​ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸ್​ನಿಂದ 93 ರನ್​ ಕಲೆಹಾಕಿ ಬೆಸ್ಟ್​ ಇನ್ನಿಂಗ್ಸ್​ ಆಡಿದರು. 50ನೇ ಓವರ್​ನ ಕೊನೆಯ ಬಾಲ್​ನ್ನು ಸಿಕ್ಸ್​​ಗೆ ಕಳಿಸುವ ಭರದಲ್ಲಿ ಕ್ಯಾಚ್​​ ಇತ್ತರು. 7 ರನ್​ನಿಂದ ಅದ್ಭುತ ಶತಕವನ್ನು ಕಳೆದುಕೊಂಡರು.

ಬಾಂಗ್ಲಾ ಪರ ತಸ್ಕಿನ್ ಅಹ್ಮದ್ ಮತ್ತು ಹಸನ್ ಮಹಮೂದ್ ತಲಾ 3 ವಿಕೆಟ್​ ಪಡೆದು ಮಿಂಚಿದರು. ಶೋರಿಫುಲ್ ಇಸ್ಲಾಂ ಪ್ರಮುಖ ಎರಡು ವಿಕೆಟ್​ ಕಿತ್ತರು. ಕೊನೆಯ ಓವರ್​ಗಳಲ್ಲಿ ಸಮರವಿಕ್ರಮ ಅವರನ್ನು ಬಾಂಗ್ಲಾ ಬೌಲರ್​ಗಳಿಗೆ ನಿಯಂತ್ರಿಸಲಾಗಲಿಲ್ಲ. ಹೀಗಾಗಿ 258 ರನ್​ ಗುರಿಯನ್ನು ಬಾಂಗ್ಲಾ ಎದುರಿಸಬೇಕಾಗಿದೆ.

ಇದನ್ನೂ ಓದಿ: ಮೂವರು ಪ್ರಮುಖ ವೇಗಿಗಳೊಂದಿಗೆ ಪಾಕಿಸ್ತಾನ ಎದುರಿಸಿ.. ರಾಹುಲ್​ಗಿಂತ ಕಿಶನ್​ ಆಡಿಸುವುದು ಉಚಿತ: ಸಂಜಯ್​ ಬಂಗಾರ​ ಸಲಹೆ

ಕೊಲಂಬೊ (ಶ್ರೀಲಂಕಾ): ಕುಸಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ಅವರ ಅರ್ಧಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ ಬಾಂಗ್ಲಾ ವಿರುದ್ಧದ ಏಷ್ಯಾಕಪ್​ನ ಸೂಪರ್​ ಫೋರ್​ ಪಂದ್ಯದಲ್ಲಿ ನಿಗದಿತ ಓವರ್​ ಅಂತ್ಯಕ್ಕೆ 9 ವಿಕೆಟ್​ಗಳನ್ನು ಕಳೆದುಕೊಂಡು 257 ರನ್​ಗಳನ್ನು ಕಲೆಹಾಕಿದೆ. ಎರಡನೇ ಸೋಲಿನಿಂದ ತಪ್ಪಿಸಿಕೊಳ್ಳಲು ಬಾಂಗ್ಲಾದೇಶದ ಟೈಗರ್​ಗಳು 258 ಗುರಿಯನ್ನು ಬೆನ್ನು ಹತ್ತಬೇಕಿದೆ.

  • Samarawickrama's scintillating 93-run knock has propelled Sri Lanka to a total of 257 runs! The pitch is proving to be two-paced, offering significant assistance to spinners.

    Can the Tigers successfully chase down this total? #AsiaCup2023 #SLvBAN pic.twitter.com/OypgNVEL4O

    — AsianCricketCouncil (@ACCMedia1) September 9, 2023 " class="align-text-top noRightClick twitterSection" data=" ">

ಇಲ್ಲಿನ ಆರ್.​ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್​ ಗೆದ್ದು ಬಾಂಗ್ಲಾದೇಶ ನಾಯಕ ಶಕೀಬ್​ ಬೌಲಿಂಗ್​ ಆಯ್ಕೆ ಮಾಡಿಕೊಂಡರು. ನಾಯಕನ ಈ ನಿರ್ಧಾರವನ್ನು ಬೌಲರ್​ಗಳು ಸಮರ್ಥಿಸಿಕೊಂಡರು. ಇದರಿಂದ ತಂಡ ಸಾಮಾನ್ಯ ಗುರಿಯನ್ನು ಪಡೆಯಿತು. ಮೊದಲ ಓವರ್​ನಲ್ಲೇ ಎಲ್​ಬಿಡಬ್ಲ್ಯುಗೆ ಬಲವಾಗಿ ಮನವಿ ಮಾಡಿ ಬಾಂಗ್ಲಾ ತನ್ನ ಒಂದು ರಿವೀವ್ ಅವಕಾಶವನ್ನು ಕಳೆದುಕೊಂಡರೂ, ಆರಂಭಿಕರು 34 ರನ್​ ಜೊತೆಯಾಟ ಮಾಡುತ್ತಿದ್ದಂತೆ ಹಸನ್ ಮಹಮೂದ್ 18 ರನ್​ ಗಳಿಸಿ ಆಡುತ್ತಿದ್ದ ದಿಮುತ್ ಕರುಣಾರತ್ನೆ ವಿಕೆಟ್​ ಪಡೆದರು.

ನಂತರ ಇನ್ನೊಬ್ಬ ಆರಂಭಿಕ ಪಾತುಮ್ ನಿಸ್ಸಾಂಕ ಜೊತೆ ಒಂದಾದ ಕುಸಲ್ ಮೆಂಡಿಸ್ ಉತ್ತಮ ಜೊತೆಯಾಟವನ್ನು ಕಟ್ಟಿದರು. ಈ ಜೋಡಿ 74 ರನ್ ಕಲೆಹಾಕಿತ್ತು. 40 ರನ್​ ಗಳಿಸಿ ಅರ್ಧಶತಕದತ್ತ ಮುನ್ನಡೆಯುತ್ತಿದ್ದ ನಿಸ್ಸಾಂಕ, ಶೋರಿಫುಲ್ ಇಸ್ಲಾಂ ಬಾಲ್​ನಲ್ಲಿ ಎಲ್​ಬಿಡಬ್ಲ್ಯೂಗೆ ಬಲಿಯಾದರು. ನಿಸ್ಸಾಂಕ ವಿಕೆಟ್​ ಬೆನ್ನಲ್ಲೇ ಕುಸಾಲ್​ ಮೆಂಡಿಸ್​ ಸಹ ತಮ್ಮ 24ನೇ ಅರ್ಧಶತಕ ಗಳಿಸಿ ವಿಕೆಟ್​ ಒಪ್ಪಿಸಿದರು . ಅವರು 3 ಬಾಲ್ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸ್​ನಿಂದ 50 ರನ್​ ಕೆಲೆಹಾಕಿದ್ದರು. ನಂತರ ಬಂದ ಚರಿತ್​ ಅಸಲಂಕಾ (10) ಮತ್ತು ಧನಂಜಯ್​ ಡಿ ಸಿಲ್ವ (6) ಬೇಗ ವಿಕೆಟ್​ ನೀಡಿದರು.

  • After losing Karunaratne early in the innings, Nissanka and Mendis have teamed up to establish a formidable 50-run partnership on a pitch that is offering considerable turn for the spinners! 💪#AsiaCup2023 #SLvBAN pic.twitter.com/dBExcBNaXw

    — AsianCricketCouncil (@ACCMedia1) September 9, 2023 " class="align-text-top noRightClick twitterSection" data=" ">

ಸಮರವಿಕ್ರಮ ಆಟ: ಸದೀರ ಸಮರವಿಕ್ರಮ ತಮ್ಮ ಹೆಸರಿನಂತೆ ಆಟದಲ್ಲಿ ವಿಕ್ರಮ ಪ್ರದರ್ಶನ ನೀಡಿದರು. 4ನೇ ವಿಕೆಟ್​ ಆಗಿ ಕ್ರೀಸ್​ಗೆ ಬಂದ ಸದೀರಗೆ ಯಾವುದೇ ಆಟಗಾರ ಜೊತೆಯಾಟ ನೀಡಲಿಲ್ಲ. 7ನೇ ವಿಕೆಟ್​ಗೆ ಬಂದ ನಾಯಕ ದಸುನ್ ಶನಕ ಕೊಂಚ ಹೊತ್ತು ಬೆಂಬಲಿಸಿದ್ದು ಬಿಟ್ಟರೆ, 5, 6ನೇ ಬ್ಯಾಟರ್​ಗಳು ವಿಫಲರಾದರು. ದುನಿತ್ ವೆಲ್ಲಲಾಗೆ (3) ಮತ್ತು ಮಹೀಶ್ ತೀಕ್ಷ್ಣ (2) ಬೇಗ ಔಟ್​ ಆದರು.

ಸದೀರ ಸಮರವಿಕ್ರಮ 72 ಬಾಲ್​ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸ್​ನಿಂದ 93 ರನ್​ ಕಲೆಹಾಕಿ ಬೆಸ್ಟ್​ ಇನ್ನಿಂಗ್ಸ್​ ಆಡಿದರು. 50ನೇ ಓವರ್​ನ ಕೊನೆಯ ಬಾಲ್​ನ್ನು ಸಿಕ್ಸ್​​ಗೆ ಕಳಿಸುವ ಭರದಲ್ಲಿ ಕ್ಯಾಚ್​​ ಇತ್ತರು. 7 ರನ್​ನಿಂದ ಅದ್ಭುತ ಶತಕವನ್ನು ಕಳೆದುಕೊಂಡರು.

ಬಾಂಗ್ಲಾ ಪರ ತಸ್ಕಿನ್ ಅಹ್ಮದ್ ಮತ್ತು ಹಸನ್ ಮಹಮೂದ್ ತಲಾ 3 ವಿಕೆಟ್​ ಪಡೆದು ಮಿಂಚಿದರು. ಶೋರಿಫುಲ್ ಇಸ್ಲಾಂ ಪ್ರಮುಖ ಎರಡು ವಿಕೆಟ್​ ಕಿತ್ತರು. ಕೊನೆಯ ಓವರ್​ಗಳಲ್ಲಿ ಸಮರವಿಕ್ರಮ ಅವರನ್ನು ಬಾಂಗ್ಲಾ ಬೌಲರ್​ಗಳಿಗೆ ನಿಯಂತ್ರಿಸಲಾಗಲಿಲ್ಲ. ಹೀಗಾಗಿ 258 ರನ್​ ಗುರಿಯನ್ನು ಬಾಂಗ್ಲಾ ಎದುರಿಸಬೇಕಾಗಿದೆ.

ಇದನ್ನೂ ಓದಿ: ಮೂವರು ಪ್ರಮುಖ ವೇಗಿಗಳೊಂದಿಗೆ ಪಾಕಿಸ್ತಾನ ಎದುರಿಸಿ.. ರಾಹುಲ್​ಗಿಂತ ಕಿಶನ್​ ಆಡಿಸುವುದು ಉಚಿತ: ಸಂಜಯ್​ ಬಂಗಾರ​ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.