ETV Bharat / sports

Asia Cup 2023: ವಿರಾಟ್​, ರಾಹುಲ್​ ಶತಕದಾಟ... ಪಾಕಿಸ್ತಾನಕ್ಕೆ 357 ರನ್​ಗಳ ಬೃಹತ್​ ಗುರಿ - KL Rahul

ಏಷ್ಯಾಕಪ್​ನ ಸೂಪರ್​ ಫೋರ್​ ಹಂತದ 3ನೇ ಪಂದ್ಯದಲ್ಲಿ ಭಾರತ - ಪಾಕಿಸ್ತಾನ ಪಂದ್ಯ ನಡೆದಿದ್ದು, ಪಾಕ್​ಗೆ ಭಾರತ 357 ರನ್​ಗಳ​ ಗುರಿ ನೀಡಿದೆ.

Asia Cup, 2023
Asia Cup, 2023
author img

By ETV Bharat Karnataka Team

Published : Sep 11, 2023, 6:44 PM IST

Updated : Sep 11, 2023, 7:12 PM IST

ಕೊಲಂಬೊ (ಶ್ರೀಲಂಕಾ): ಪಂದ್ಯಕ್ಕೆ ಮಳೆ ಕಾಡಿದರೆ, ಪಾಕಿಸ್ತಾನ ಬೌಲರ್​ಗಳನ್ನು ವಿರಾಟ್​ ಕೊಹ್ಲಿ ಮತ್ತು ಕೆಎಲ್​ ರಾಹುಲ್​ ಕಾಡಿದರು. ಈ ಇಬ್ಬರು ಬ್ಯಾಟರ್​ಗಳ ಅಬ್ಬರದ ಶತಕದಾಟದ ನೆರವಿನಿಂದ ಭಾರತ ತಂಡ ಪಾಕಿಸ್ತಾನದ ವಿರುದ್ಧ ನಿಗದಿತ ಓವರ್​​ಗೆ 2 ವಿಕೆಟ್​ ನಷ್ಟಕ್ಕೆ 356 ರನ್ ಗಳಿಸಿದೆ. ಬಾಬರ್​ ನಾಯಕತ್ವದ ಪಾಕ್​ ಏಷ್ಯಾಕಪ್​ನ ಸೂಪರ್​ ಫೋರ್​ ಹಂತದ ಎರಡನೇ ಪಂದ್ಯ ಗೆಲ್ಲಲು 357 ರನ್​ ಕಲೆಹಾಕಬೇಕಿದೆ. ​

ಮೀಸಲು ದಿನವೂ ವರುಣನ ಕಾಟದಿಂದ ತಡವಾಗಿ ಪಂದ್ಯ ಆರಂಭವಾಯಿತು . 4:40ಕ್ಕೆ ಆರಂಭವಾದ ಪಂದ್ಯದಲ್ಲಿ ಭಾರತ ಕೆಎಲ್​ ರಾಹುಲ್​ ಮತ್ತು ವಿರಾಟ್​ ಬ್ಯಾಟಿಂಗ್​ ಮುಂದುವರೆಸಿದರು. ಈ ಇಬ್ಬರು ಆಟಗಾರರು ಪಾಕಿಸ್ತಾನದ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪಿಚ್​ಗೆ ಸೆಟ್ ಆಗಲು ಇಬ್ಬರು ಆಟಗಾರರು ಸ್ವಲ್ಪ ಸಮಯ ತೆಗೆದುಕೊಂಡರಾದರೂ ಆ ಬಳಿಕ ಚೇತರಿಸಿಕೊಂಡು ಪರಾಕ್ರಮ ಮೆರೆದರು.

ನಿನ್ನೆ 24.1 ಓವರ್​ಗೆ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಸಲಾಗಿತ್ತು. ಅಲ್ಲಿಂದಲೇ ಇಂದು ಮ್ಯಾಚ್​ ಆರಂಭವಾಯಿತು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕನ್ನಡಿಗ ಕೆಎಲ್​ ರಾಹುಲ್​ ಸಂಪೂರ್ಣ ಪಿಟ್​ ಆಗಿರುವುದನ್ನು ಮೈದಾನದಲ್ಲಿ ತಮ್ಮ ಆಟದ ಮೂಲಕ ಸಾಬೀತು ಮಾಡಿದರು. ಅಲ್ಲದೇ ಅವರನ್ನು ಟೀಕೆ ಮಾಡುತ್ತಿದ್ದ ಎಲ್ಲರಿಗೂ ತಮ್ಮ ಸಿಕ್ಸ್ ಮತ್ತು ಬೌಂಡರಿಗಳಿಂದ ಉತ್ತರಿಸುತ್ತಾ ಅರ್ಧಶತಕವನ್ನು ಪೂರೈಸಿ, ಶತಕವನ್ನು ಗಳಿಸಿದರು. ಅವರು ಈ ಇನ್ನಿಂಗ್ಸ್​ನಲ್ಲಿ 106 ಬಾಲ್​ನ್ನು ಫೇಸ್​ ಮಾಡಿ 12 ಬೌಂಡರಿ ಮತ್ತು 2 ಸಿಕ್ಸ್​ನಿಂದ ಅಜೇಯವಾಗಿ 111 ರನ್​ ಕಲೆಹಾಕಿದರು.

ಇವರ ಜೊತೆ ಕಿಂಗ್​ ಕೊಹ್ಲಿ ಅದ್ಭುತ ಇನ್ನಿಂಗ್ಸ್​ ಸಾಥ್​ ನೀಡಿದರು. ಆರಂಭದಲ್ಲಿ ಹೆಚ್ಚು ರಾಹುಲ್​ಗೆ ಕ್ರೀಸ್​ ಬಿಟ್ಟುಕೊಡುತ್ತಾ ಸಾಗಿದ ವಿರಾಟ್​ ನಿಧಾನವಾಗಿ ಅರ್ಧಶತಕ ಪೂರೈಸಿಕೊಂಡರು. ಅಲ್ಲಿಂದ ತಮ್ಮ ಸ್ಕೋರ್​ಗೆ ವೇಗವನ್ನು ಹೆಚ್ಚಿಸಿದರು. 55 ಬಾಲ್​ ಎದುರಿಸಿ 50 ರನ್​ ಗಳಿಸಿದ ವಿರಾಟ್​ ಮತ್ತೆ ಕೇವಲ 29 ಬಾಲ್​ನಲ್ಲಿ 50 ರನ್​ ಸೇರಿಸಿದರು. 84ನೇ ಬಾಲ್​ನಲ್ಲಿ ವಿರಾಟ್​ ತಮ್ಮ ಏಕದಿನ ಕ್ರಿಕೆಟ್​ನ 47ನೇ ಶತಕವನ್ನು ದಾಖಲಿಸಿದರು. ಇನ್ನಿಂಗ್ಸ್​ ಮುಕ್ತಾಯಕ್ಕೆ ವಿರಾಟ್​ 94 ಬಾಲ್​ನಲ್ಲಿ 3 ಸಿಕ್ಸ್​ ಮತ್ತು 9 ಬೌಂಡರಿಯಿಂದ ಅಜೇಯ 122 ರನ್​ ಕಲೆಹಾಕಿದರು.

ನಿನ್ನೆಯ ಇನ್ನಿಂಗ್ಸ್​ನಲ್ಲಿ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ 121 ರನ್​ನ ಜೊತೆಯಾಟ ಮಾಡಿ ಉತ್ತಮ ಬುನಾದಿ ಹಾಕಿಕೊಟ್ಟಿದ್ದರು. ರೋಹಿತ್​ ಶರ್ಮಾ 56 ರನ್​ ಕಲೆ ಹಾಕಿ ಶಾದಾಬ್​ಗೆ ವಿಕೆಟ್​ ಕೊಟ್ಟರೆ, 58 ರನ್​ ಗಳಿಸಿದ ಗಿಲ್​ ಶಹೀನ್​ಗೆ ಔಟ್​ ಆಗಿದ್ದರು. ಈ ಎರಡು ವಿಕೆಟ್​ ಪತನದ ನಂತರ ವಿರಾಟ್​ 8 ಮತ್ತು ಕೆಎಲ್​ ರಾಹುಲ್ 17 ರನ್​ ಗಳಿಸಿ​ ಕ್ರೀಸ್​ನಲ್ಲಿದ್ದರು.

13 ಸಾವಿರ ರನ್​ ಪೂರೈಸಿದ ಕಿಂಗ್​ ಕೊಹ್ಲಿ: ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ ವೃತ್ತಿಜೀವನದಲ್ಲಿ 13,000 ರನ್​ ಪೂರೈಸಿದರು. ಭಾರತದಲ್ಲಿ ಸಚಿನ್ ತೆಂಡೂಲ್ಕರ್​ ನಂತರ ಈ ಸಾಧನೆ ಮಾಡಿದ ಬ್ಯಾಟರ್​ ವಿರಾಟ್ ಆಗಿದ್ದಾರೆ.

ಇದನ್ನೂ ಓದಿ: ಪಾಕ್​ - ಭಾರತ ಪಂದ್ಯ​: ವಿರಾಟ್​, ರಾಹುಲ್​ ಶತಕ.. ಇಂಡಿಯಾ ಸೂಪರ್​ ಕಮ್​ಬ್ಯಾಕ್​

Last Updated : Sep 11, 2023, 7:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.