ETV Bharat / sports

Asia Cup 2023: ಏಷ್ಯಾ ಕಪ್​ ಗೆಲ್ಲಿಸಿಕೊಟ್ಟ ಸಿರಾಜ್​.. ಫೈನಲ್ ಪಂದ್ಯದ ದಾಖಲೆಗಳು ಹೀಗಿವೆ..

author img

By ETV Bharat Karnataka Team

Published : Sep 17, 2023, 8:11 PM IST

ಏಷ್ಯಾಕಪ್​ 2023ರ ಫೈನಲ್​ ಪಂದ್ಯದಲ್ಲಿ ಲಂಕಾವನ್ನು ಭಾರತ 50 ರನ್​ಗೆ ಆಲ್​ಔಟ್​ ಮಾಡುವ ಮೂಲಕ ಸುಧೀರ್ಘ ವರ್ಷದ ಹಿಂದಿನ ಸೇಡನ್ನು ತೀರಿಸಿಕೊಂಡಂತಾಗಿದೆ.

Asia Cup 2023 India vs Sri Lanka Final match records

ಕೊಲಂಬೊ (ಶ್ರೀಲಂಕಾ): ಐಪಿಎಲ್​ನಿಂದ ರಾಷ್ಟ್ರೀಯ ತಂಡಕ್ಕೆ ಪ್ರವೇಶ ಪಡೆದು ಮೂರು ಮಾದರಿಯ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಮೊಹಮ್ಮದ್​ ಸಿರಾಜ್​ ಏಷ್ಯಾಕಪ್​ 2023ರ ಫೈನಲ್ ಪಂದ್ಯದಲ್ಲಿ ಜಾದುವನ್ನೇ ಮಾಡಿದರು. ಪಂದ್ಯದ ನಾಲ್ಕನೇ ಓವರ್​ ಮಾಡಿದ ಅವರು, ಸಿಂಹಳೀಯರ ನಾಲ್ಕು ವಿಕೆಟ್​​ ಪಡೆದು ಜಂಘಾಬಲವನ್ನೇ ಕುಂದಿಸಿದರು. ಅಲ್ಲದೇ ಪಂದ್ಯದಲ್ಲಿ ಒಟ್ಟಾರೆಯಾಗಿ 7 ಓವರ್​ ಮಾಡಿ 21 ರನ್​ ಕೊಟ್ಟು 6 ವಿಕೆಟ್​ ಪಡೆದರು. ಇದರಲ್ಲಿ ಒಂದು ಮೇಡನ್​ ಓವರ್​ ಸಹ ಇತ್ತು.

ಸಿರಾಜ್​ಗೆ ಇಂದು ಹಾರ್ದಿಕ್​ ಪಾಂಡ್ಯ ಮತ್ತು ಬುಮ್ರಾ ಸಾಥ್​ ನೀಡಿದರು. ಮೊದಲ ಓವರ್​ನಲ್ಲೇ ಬುಮ್ರಾ ವಿಕೆಟ್​ ಪಡೆದರೆ, 13 ಮತ್ತು 16ನೇ ಓವರ್​ನಲ್ಲಿ ಹಾರ್ದಿಕ್​ ಮೂರು ವಿಕೆಟ್​ ಪಡೆದರು. ಈ ಮೂಲಕ ಎಲ್ಲಾ 10ವಿಕೆಟ್​ಗಳನ್ನು ಬೌಲರ್​ಗಳೇ ಕಬಳಿಸಿದರು. ಇದರಿಂದ ಲಂಕಾ ಕೇವಲ 50 ರನ್​ಗೆ​ ಸರ್ವಪತನ ಕಂಡಿತು. ಈ ಮೂಲಕ ಟೀಮ್​ ಇಂಡಿಯಾ ತನ್ನ 23 ವರ್ಷದ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಂಡಿದೆ.

ಅದು 2000 ಇಸವಿಯಲ್ಲಿ ಜಿಂಬಾಬ್ವೆ, ಶ್ರೀಲಂಕಾ ಮತ್ತು ಭಾರತದ ನಡುವಣ ತ್ರಿಕೋನ ಸರಣಿಯನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಭಾರತ ಮತ್ತು ಲಂಕಾ ಫೈನಲ್​ನಲ್ಲಿ ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಶ್ರೀಲಂಕಾ 50 ಓವರ್​ಗೆ 299 ರನ್​ ಗಳಿಸಿತ್ತು. ಇದನ್ನು ಬೆನ್ನತ್ತಿದ್ದ ಭಾರತ 54 ರನ್​ಗೆ ಸರ್ವಪತನ ಕಂಡಿತ್ತು. ಈಗ ಈ 23 ವರ್ಷದ ಲಂಕಾ ಸೇಡನ್ನು ತೀರಿಸಿದಂತಾಗಿದೆ.

  • 29th October 2000 - Sri Lanka bowled out India on 54 in the Tri-Nation Final.

    17th September 2023- India bowled out Sri Lanka on 50 in Asia Cup Final. pic.twitter.com/l8w9KiEJFn

    — Mufaddal Vohra (@mufaddal_vohra) September 17, 2023 " class="align-text-top noRightClick twitterSection" data=" ">

ಭಾರತದ ವಿರುದ್ಧ ಇದು ಮೊದಲ ಅತಿ ಅಲ್ಪ ಮೊತ್ತವಾಗಿದೆ. 2014ರಲ್ಲಿ ಬಾಂಗ್ಲಾದೇಶವನ್ನು ಟೀಮ್​ ಇಂಡಿಯಾ 58 ರನ್​ಗೆ ಆಲ್​ಔಟ್​ ಮಾಡಿತ್ತು, 2005 ರಲ್ಲಿ ಜಿಂಬಾಬ್ವೆ 65 ರನ್​ಗೆ ಸರ್ವ ಪತನ ಕಂಡಿತ್ತು.

ಭಾರತದ ಪರ ಉತ್ತಮ ಬೌಲಿಂಗ್​ ಪ್ರದರ್ಶನದಲ್ಲಿ ಸಿರಾಜ್​ ಇಂದಿನ ಆಟ 4ನೇ ಬೆಸ್ಟ್​ ಎಸೆತ ಎನಿಸಿಕೊಂಡಿದೆ. 2014 ರಲ್ಲಿ ಬಾಂಗ್ಲಾ ವಿರುದ್ಧ ಸ್ಟುವರ್ಟ್​ ಬಿನ್ನಿ ಕೇವಲ 6 ರನ್​ ಕೊಟ್ಟು 4 ವಿಕೆಟ್​ ಪಡೆದಿದ್ದರು. 1993 ರಲ್ಲಿ ಅನಿಲ್​ ಕುಂಬ್ಳೆ 12ಕ್ಕೆ 6 ವಿಕೆಟ್​, 2022 ರಲ್ಲಿ ಜಸ್ಪ್ರೀತ್​ ಬುಮ್ರಾ 19ಕ್ಕೆ 6 ವಿಕೆಟ್​ ಮತ್ತು ಇಂದು ಸಿರಾಜ್​ 19ಕ್ಕೆ 6 ವಿಕೆಟ್​ ಪಡೆದು ದಾಖಲೆ ಮಾಡಿದ್ದಾರೆ.

Mohammad Siraj today in the Powerplay:

0,0,0,0,0,0,W,0,W,W,4,W,0,0,0,W,0,1,1,0,0,0,0,0,0,1,0,0,0,0.

26 dot balls in the 5 overs with 5 wickets - The greatest ever Powerplay spell in ODIs! pic.twitter.com/YcCUCpy8zB

— Mufaddal Vohra (@mufaddal_vohra) September 17, 2023 " class="align-text-top noRightClick twitterSection" data=" ">

1990 ರಲ್ಲಿ ಶಾರ್ಜಾದಲ್ಲಿ ವಕಾರ್ ಯೂನಿಸ್ ಅವರು 26 ರನ್​ಗೆ 6 ವಿಕೆಟ್​ ಪಡೆದ ಸಾಧನೆಯನ್ನು ಲಂಕಾ ವಿರುದ್ಧ ಮಾಡಿದ್ದರು. 19 ಕ್ಕೆ 6 ವಿಕೆಟ್​ ಪಡೆದ ಸಿರಾಜ್​ ಈಗ ಆ ದಾಖಲೆಯನ್ನು ಮುರಿದಿದ್ದಾರೆ.

ಶ್ರೀಲಂಕಾದ ಎರಡನೇ ಏಕದಿನ ಕಡಿಮೆ ಮೊತ್ತ ಇದಾಗಿದೆ. ಸಿಂಹಳೀಯರು ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ 2012ರಲ್ಲಿ 43 ಕ್ಕೆ ರನ್​ಗೆ ಆಲ್​ಔಟ್​ ಆಗಿದ್ದರು. ಇಂದು ಭಾರತದ ವಿರುದ್ಧ 50 ರನ್​ಗೆ ಸರ್ವಪತನ ಕಂಡಿರುವುದು ಎರಡನೇ ಲೋ ಸ್ಕೋರ್ ಇನ್ನಿಂಗ್ಸ್​ ಆಗಿದೆ.

ಈ ವರ್ಷದ ಏಷ್ಯಾಕಪ್​ನಲ್ಲಿ ಎರಡು ಬಾರಿಗೆ ವೇಗಿಗಳೇ 10 ವಿಕೆಟ್​ ಪಡೆದ ಸಾಧನೆ ಮಾಡಿದರು. ಈ ಹಿಂದೆ ಏಷ್ಯಾಕಪ್​ನಲ್ಲಿ ಈ ದಾಖಲೆ ಆಗಿರಲಿಲ್ಲ. ಏಷ್ಯಾಕಪ್​ ಲೀಗ್​ ಹಂತದ ಭಾರತ - ಪಾಕಿಸ್ತಾನ ವಿರುದ್ಧದ ರದ್ದಾದ ಪಂದ್ಯದಲ್ಲಿ ಟೀಮ್​ ಇಂಡಿಯಾ ತನ್ನೆಲ್ಲಾ ವಿಕೆಟ್​ಗಳನ್ನು ವೇಗಿಗಳಿಗೆ ಒಪ್ಪಿಸಿತ್ತು. ಇಂದು ಸಹ ಸಿರಾಜ್​, ಹಾರ್ದಿಕ್​ ಮತ್ತು ಬುಮ್ರಾ ವಿಕೆಟ್​ ಕಬಳಿಸಿದರು.

  • Rohit Sharma as a captain:

    Won the IPL 2013.
    Won the CLT20 2013.
    Won the IPL 2015.
    Won the IPL 2017.
    Won the Asia Cup 2018.
    Won the Nidahas Trophy 2018.
    Won the IPL 2019.
    Won the IPL 2020.
    Won the Asia Cup 2023.

    One of the Greatest captains ever. pic.twitter.com/R53a2Q6mwa

    — Johns. (@CricCrazyJohns) September 17, 2023 " class="align-text-top noRightClick twitterSection" data=" ">

ಫೈನಲ್​ ಪಂದ್ಯದಲ್ಲಿ ಎರಡನೇ ಬಾರಿಗೆ ಭಾರತ ತಂಡ 10 ವಿಕೆಟ್​ಗಳ ಗೆಲುವು ದಾಖಲಿಸಿದೆ. ​1998 ರಲ್ಲಿ ಲಂಕಾ, ಭಾರತ ಮತ್ತು ಜಿಂಬಾಬ್ವೆ ನಡುವಿನ ತ್ರಿಕೋನ ಸರಣಿಯ ಫೈನಲ್​ನಲ್ಲಿ ಭಾರತ 197 ರನ್​ನ ಗುರಿಯನ್ನು ಶೂನ್ಯ ವಿಕೆಟ್​ ನಷ್ಟದಲ್ಲಿ ಸಾಧಿಸಿತ್ತು. 2002 -03 ರಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಗ್ಲೆಂಡ್​ ನಡುವಿನ ತ್ರಿಕೋನ ಸರಣಿ ಆಸಿಸ್​ನಲ್ಲಿ ನಡೆದಿತ್ತು. ಇದರ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ಕೊಟ್ಟಿದ್ದ 118 ರನ್​ನ ಗುರಿಯನ್ನು ಆಸ್ಟ್ರೇಲಿಯಾ ವಿಕೆಟ್​ ನಷ್ಟವಿಲ್ಲದೇ ಸಾಧಿಸಿತ್ತು.

ಭಾರತ ತಂಡ ಈ ಫೈನಲ್​ ಪಂದ್ಯವನ್ನು 263 ಬಾಲ್​ಗಳನ್ನು ಉಳಿಸಿಕೊಂಡು ಗೆದ್ದಿದೆ. ಇದು ಭಾರತದ ಮಟ್ಟಿಗೆ ಹೆಚ್ಚು ಬಾಲ್​ ಉಳಿಸಿಕೊಂಡು ಗೆದ್ದ ಮೊದಲ ಪಂದ್ಯವಾಗಿದೆ. ಏಕದಿನ ಮಾದರಿಯ ಫೈನಲ್​ನಲ್ಲಿ 2002 -03 ರಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಗ್ಲೆಂಡ್​ ನಡುವಿನ ತ್ರಿಕೋನ ಸರಣಿಯಲ್ಲಿ ಆಸಿಸ್​ 226 ಬಾಲ್​ ಉಳಿಸಿ ಗೆದ್ದಿರುವುದು ಎರಡನೇ ದಾಖಲೆ ಆಗಿದೆ.

ಇದನ್ನೂ ಓದಿ: Asia Cup 2023: 5 ವರ್ಷದ ಟ್ರೋಫಿ ಬರ ನೀಗಿಸಿಕೊಂಡ ಭಾರತ.. ಏಷ್ಯಾಕಪ್​ಗೆ ಭಾರತವೇ ಬಾಸ್​​

  • Mohammad Siraj today in the Powerplay:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.