ದುಬೈ(ಯುಎಇ): ಏಷ್ಯಾಕಪ್ ಟಿ20 ಟೂರ್ನಾಮೆಂಟ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ಥಾನದ ಬೌಲರ್ಗಳು ಪಾರಮ್ಯ ಮೆರೆದಿದ್ದು, ಎದುರಾಳಿ ಶ್ರೀಲಂಕಾ ತಂಡದ ಬ್ಯಾಟರ್ಗಳನ್ನು ಮಾರಕ ಬೌಲಿಂಗ್ ಮೂಲಕ ಕಟ್ಟಿಹಾಕಿದ್ದಾರೆ. ಪರಿಣಾಮ ಸಿಂಹಳೀಯರ ತಂಡ 19. 4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 105 ರನ್ಗಳಿಗೆ ಆಲೌಟ್ ಆಗಿದ್ದು, ಗೆಲುವಿಗೆ 106 ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಶ್ರೀಲಂಕಾ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಕೇವಲ 5ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ತಂಡದ ಆರಂಭಿಕರಾದ ನಿಶಾಂಕ್(3), ಮೆಂಡಿಸ್(2) ಹಾಗೂ ಅಸಲಂಕಾ(0) ನಿರಾಸೆ ಮೂಡಿಸಿದರು.

ಚೇತರಿಕೆ ನೀಡುವ ಕೆಲಸ ಮಾಡಿದ ಗುಣತಿಲಕ್-ರಾಜಪಕ್ಸೆ: ಕೇವಲ 5ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ತಂಡಕ್ಕೆ ಗುಣತಿಲಕ್- ರಾಜಪಕ್ಸೆ ಚೇತರಿಕೆ ನೀಡುವ ಕೆಲಸ ಮಾಡಿದರು. ಆದರೆ, 17ರನ್ಗಳಿಕೆ ಮಾಡಿದ್ದ ಗುಣತಿಲಕ್ ವಿಕೆಟ್ ಒಪ್ಪಿಸುತ್ತಿದ್ದಂತೆ ತಂಡದ ಪೆವಿಲಿಯನ್ ಪರೇಡ್ ಮತ್ತೊಮ್ಮೆ ಶುರುವಾಯಿತು. ಹಸರಂಗ(2), ಶನಕ್(0), ತಿಕ್ಷಣ್(0) ಔಟಾದರು. ತಂಡದ ಪರ ರಾಜಪಕ್ಸೆ 38ರನ್ಗಳಿಸಿದ್ದು, ವೈಯಕ್ತಿಕ ಗರಿಷ್ಠ ಸ್ಕೋರ್ ಆಯಿತು. 10ನೇ ವಿಕೆಟ್ಗೆ ಚಮೀರಾ 31ರನ್ಗಳಿಕೆ ಮಾಡಿ ಎದುರಾಳಿ ಬೌಲರ್ಗಳ ದಂಡಿಸಿದರು. 19.4 ಓವರ್ಗಳಲ್ಲಿ ತನ್ನಲ್ಲ ವಿಕೆಟ್ ಕಳೆದುಕೊಂಡ ಶ್ರೀಲಂಕಾ ಕೇವಲ 105ರನ್ಗಳಿಕೆ ಮಾಡಿದೆ.
ಇದನ್ನೂ ಓದಿ: Asia Cup 2022 SL vs AFG: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಅಫ್ಘಾನಿಸ್ಥಾನ
ಅಫ್ಘಾನ್ ಪರ ಮಿಂಚಿದ ಫಾರೂಖಿ 3 ವಿಕೆಟ್ ಪಡೆದುಕೊಂಡರೆ, ರಹಮನ್, ಮಹಮ್ಮದ್ ನಬಿ ತಲಾ 2 ವಿಕೆಟ್ ಪಡೆದರು, ನವೀನ್ ಉಲ್ ಹಕ್ 1 ವಿಕೆಟ್ ಕಿತ್ತರು.