ದುಬೈ(ಯುಎಇ): ಏಷ್ಯಾ ಕಪ್ ಟಿ20 ಕ್ರಿಕೆಟ್ನಲ್ಲಿ ಸೂಪರ್ ಫೋರ್ ಹಂತಕ್ಕೆ ಪ್ರವೇಶ ಪಡೆಯುವ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಶ್ರೀಲಂಕಾ ತಂಡ ರೋಚಕ ಜಯ ಸಾಧಿಸಿದೆ. ಬಾಂಗ್ಲಾದೇಶ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.
ಕೊನೆಯ ಓವರ್ವರೆಗೂ ರೋಚಕತೆಯಿಂದ ಕೂಡಿದ್ದ ಬಾಂಗ್ಲಾ-ಲಂಕಾ ಕದನದಲ್ಲಿ ಸಿಂಹಳೀಯರು ಮೇಲುಗೈ ಸಾಧಿಸಿದ್ದು, ಎರಡು ವಿಕೆಟ್ಗಳಿಂದ ಜಯ ಸಾಧಿಸಿ ಸೂಪರ್ 4 ಹಂತ ತಲುಪಿದರು. ಬಿ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋತ ಶಕೀಬ್ ನಾಯಕತ್ವದ ಬಾಂಗ್ಲಾದೇಶ ಮುಖಭಂಗ ಅನುಭವಿಸಿತು. ಇದೇ ಗುಂಪಿನಿಂದ ಈಗಾಗಲೇ ಅಫ್ಘಾನಿಸ್ತಾನ ಮುಂದಿನ ಹಂತ ತಲುಪಿದೆ.
-
Just one spot of the Super 4 up for grabs!
— AsianCricketCouncil (@ACCMedia1) September 1, 2022 " class="align-text-top noRightClick twitterSection" data="
All eyes on the #PAKvHK match to see who will join Afghanistan, India, and Sri Lanka in the Super 4 of the DP World #AsiaCup.#SLvBAN #ACC #GetReadyForEpic #AsiaCup2022 pic.twitter.com/W0wM5JAllc
">Just one spot of the Super 4 up for grabs!
— AsianCricketCouncil (@ACCMedia1) September 1, 2022
All eyes on the #PAKvHK match to see who will join Afghanistan, India, and Sri Lanka in the Super 4 of the DP World #AsiaCup.#SLvBAN #ACC #GetReadyForEpic #AsiaCup2022 pic.twitter.com/W0wM5JAllcJust one spot of the Super 4 up for grabs!
— AsianCricketCouncil (@ACCMedia1) September 1, 2022
All eyes on the #PAKvHK match to see who will join Afghanistan, India, and Sri Lanka in the Super 4 of the DP World #AsiaCup.#SLvBAN #ACC #GetReadyForEpic #AsiaCup2022 pic.twitter.com/W0wM5JAllc
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ಗಳಿಕೆ ಮಾಡಿತು. ತಂಡದ ಪರ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಆರಂಭಿಕ ಆಟಗಾರ ಮಿರ್ಜಾ(38), ನಾಯಕ ಶಕೀಬ್(24), ಹುಸೈನ್(39), ಮೊಹಮ್ಮದುಲ್ಲಾ (27) ಹಾಗೂ ಮೊಸಡಕ್ (24)ರನ್ ಗಳಿಸಿದರು.
ತಂಡ ಕೊನೆಯದಾಗಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 183 ರನ್ಗಳಿಸಿದರು. ಇದನ್ನು ಬೆನ್ನತ್ತಿದ ಲಂಕಾ 19.2 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ಗಳಿಸಿ ವಿಕ್ರಮ ಮೆರೆಯಿತು.
-
A must-win game 🏏 of the DP World Asia Cup 2022 group stage, Pakistan and Hong Kong will bring their absolute best tomorrow 🔥to move forward in the tournament!
— AsianCricketCouncil (@ACCMedia1) September 1, 2022 " class="align-text-top noRightClick twitterSection" data="
Catch all the action LIVE on Disney+ Hotstar and Star Sports. 📺#PAKvHK #ACC#AsiaCup2022 #GetReadyForEpic pic.twitter.com/AwQhXiMI8X
">A must-win game 🏏 of the DP World Asia Cup 2022 group stage, Pakistan and Hong Kong will bring their absolute best tomorrow 🔥to move forward in the tournament!
— AsianCricketCouncil (@ACCMedia1) September 1, 2022
Catch all the action LIVE on Disney+ Hotstar and Star Sports. 📺#PAKvHK #ACC#AsiaCup2022 #GetReadyForEpic pic.twitter.com/AwQhXiMI8XA must-win game 🏏 of the DP World Asia Cup 2022 group stage, Pakistan and Hong Kong will bring their absolute best tomorrow 🔥to move forward in the tournament!
— AsianCricketCouncil (@ACCMedia1) September 1, 2022
Catch all the action LIVE on Disney+ Hotstar and Star Sports. 📺#PAKvHK #ACC#AsiaCup2022 #GetReadyForEpic pic.twitter.com/AwQhXiMI8X
ಇದನ್ನೂ ಓದಿ: ಎಬಿಡಿ ರೀತಿ ಬ್ಯಾಟ್ ಬೀಸಿದ ಸೂರ್ಯ! 1 ಓವರ್ 4 ಸಿಕ್ಸರ್: ಸಹ ಆಟಗಾರನಿಗೆ ಶಿರಬಾಗಿದ ಕೊಹ್ಲಿ
ಶ್ರೀಲಂಕಾ ಪರ ಹಸರಂಗ, ಕರುಣರತ್ನೆ ತಲಾ 2 ವಿಕೆಟ್ ಪಡೆದುಕೊಂಡರೆ, ದಿಲ್ಸಾನ್, ತಿಕ್ಷಣ್ ಹಾಗೂ ಫೆರ್ನಾಂಡೋ ತಲಾ 1 ವಿಕೆಟ್ ಕಿತ್ತರು.
184ರನ್ ಗುರಿ ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಂಡಿತು. ನಿಸಂಕಾ ಮತ್ತು ಕುಸಾಲ್ ಮೆಂಡಿಸ್ ತಂಡಕ್ಕೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 20 ರನ್ಗಳಿಕೆ ಮಾಡಿದ್ದ ನಿಸಾಂಕ್ ಹುಸೈನ್ ಓವರ್ನಲ್ಲಿ ಔಟಾದರು.
ಮಧ್ಯಮ ಕ್ರಮಾಂಕ ದಿಢೀರ್ ಪತನ: ಉತ್ತಮ ಓಪನಿಂಗ್ ಪಡೆದುಕೊಂಡಿದ್ದ ಲಂಕಾ ತಂಡ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಪತನಕ್ಕೊಳಗಾಯಿತು. ಅಸಲಂಕಾ(1), ಗುಣತಿಲಕ(11) ಹಾಗೂ ರಾಜಪಕ್ಸೆ(2)ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ, ತಂಡ 77ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.
ಮೆಂಡಿಸ್-ಶನಕ್ ಅಬ್ಬರ: ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಲಂಕಾಕ್ಕೆ ಆರಂಭಿಕ ಆಟಗಾರ ಮೆಂಡಿಸ್ ಹಾಗೂ ಮಧ್ಯಮ ಕ್ರಮಾಂಕದ ಶನಕ ಆಸರೆಯಾದರು. ಮೆಂಡಿಸ್ ತಾವು ಎದುರಿಸಿದ 37 ಎಸೆತಗಳಲ್ಲಿ 60 ರನ್ಗಳಿಸಿದರೆ, ಶನಕ 45ರನ್ಗಳಿಕೆ ಮಾಡಿದರು. ಇವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ತಂಡ ಮತ್ತೊಮ್ಮೆ ಬಿಕ್ಕಟ್ಟಿಗೆ ತಲುಪಿತು.
ಶ್ರೀಲಂಕಾ ತಂಡಕ್ಕೆ ಗೆಲಲ್ಲು ಕೊನೆಯ 12 ಎಸೆತಗಳಲ್ಲಿ 25 ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಉತ್ತಮವಾಗಿ ಆಡ್ತಿದ್ದ ಕರುಣರತ್ನೆ(16) ರನೌಟ್ ಬಲೆಗೆ ಬಿದ್ದರು. ಆದರೆ, ಅಸಿತಾ ಫೆರ್ನಾಂಡೋ ಕೊನೆಯ ಓವರ್ನಲ್ಲಿ ಎರಡು ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಬಾಂಗ್ಲಾ ಪರ ಹುಸೈನ್ 3 ವಿಕೆಟ್, ತಸ್ಕಿನ್ ಅಹ್ಮದ್ 2 ವಿಕೆಟ್ ಪಡೆದರೆ, ಮುಸ್ತುಫಿಜುರ್ ಹಾಗೂ ಮೆಹದಿ ಹಸನ್ ತಲಾ 1 ವಿಕೆಟ್ ಕಿತ್ತರು.
ಇಂದು ಹಾಂಗ್ ಕಾಂಗ್-ಪಾಕಿಸ್ತಾನ ಮುಖಾಮುಖಿ: ಆಡಿರುವ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ ಇಂದು ಮುಖಾಮುಖಿಯಾಗಲಿವೆ. ಸೂಪರ್ 4 ಹಂತಕ್ಕೆ ಲಗ್ಗೆ ಹಾಕಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಉಭಯ ತಂಡಗಳಿಗೂ ಅನಿವಾರ್ಯ.