ಶಾರ್ಜಾ(ಯುಎಇ): ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಶ್ರೀಲಂಕಾ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದ ನಬಿ ಬಳಗ ಇಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದೆ. ಈ ಮೂಲಕ ಸೂಪರ್ 4ಗೆ ಲಗ್ಗೆ ಹಾಕಿದೆ.
ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 127ರನ್ಗಳಿಕೆ ಮಾಡಿತು. ತಂಡದ ಮೊಸ್ದಕ್ ಹುಸೈನ್ 48 ರನ್ಗಳಿಕೆ ಮಾಡಿದ್ದ ವೈಯಕ್ತಿಕ ಗರಿಷ್ಠ ಸ್ಕೋರ್ ಆಯಿತು. ಉಳಿದಂತೆ ನಮಿ, ಶಕೀಬ್, ರಹೀಂ ಅನ್ಮೂಲ್ ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದುಲ್ಲಾ 25ರನ್ಗಳಿಸಿ, ತಂಡ 100ರ ಗಡಿ ದಾಟುವಂತೆ ಮಾಡಿದರು.
ಅಫ್ಘಾನಿಸ್ತಾನದ ಪರ ಮುಜೀಬ್, ರಶೀದ್ ಖಾನ್ 3 ವಿಕೆಟ್ ಪಡೆದರೆ, ಹುಸೈನ್ ಹಾಗೂ ಸೈಫುದುಲ್ಲಾ ತಲಾ 1 ವಿಕೆಟ್ ಕಿತ್ತರು. ಮೊದಲ ಪಂದ್ಯದಲ್ಲಿ ದೊರೆತ ಗೆಲುವಿನ ಆತ್ಮವಿಶ್ವಾದಲ್ಲೇ ಬಾಂಗ್ಲಾದೇಶ ವಿರುದ್ಧ ಗೆದ್ದಿರುವ ಅಫ್ಘಾನಿಸ್ತಾನ ಇಂದಿಗ ಮುಂದಿನ ಹಂತಕ್ಕೆ ಲಗ್ಗೆ ಹಾಕಿದೆ. ಆಧರೆ, ಶಕೀಬ್ ಅಲ್ ಹಸನ್ ತಂಡ ಮೊದಲ ಪಂದ್ಯದಲ್ಲೇ ಎಡವಿದೆ.
ಇದನ್ನೂ ಓದಿ: ಧೋನಿಗೆ ಪಾಂಡ್ಯ ಹೋಲಿಕೆ: ಟೀಂ ಇಂಡಿಯಾ ಮುನ್ನಡೆಸುವ ಸಾಮರ್ಥ್ಯವಿದೆ ಎಂದ ಭಜ್ಜಿ
128ರನ್ಗಳ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ಕೂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಕೇವಲ 28ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಒಂದಾದ ಇಬ್ರಾಹಿಂ ಅಜೇಯ 42ರನ್ ಹಾಗೂ ನಜಬುಲ್ಲಾ ಅಜೇಯ 43ರನ್ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದರು.
-
A spectacular finish from Najibullah Zadran as Afghanistan make it two wins in two in #AsiaCup2022 🔥#BANvAFG | 📝 Scorecard: https://t.co/5cGrYOhU7p pic.twitter.com/NKPYC2Xp9q
— ICC (@ICC) August 30, 2022 " class="align-text-top noRightClick twitterSection" data="
">A spectacular finish from Najibullah Zadran as Afghanistan make it two wins in two in #AsiaCup2022 🔥#BANvAFG | 📝 Scorecard: https://t.co/5cGrYOhU7p pic.twitter.com/NKPYC2Xp9q
— ICC (@ICC) August 30, 2022A spectacular finish from Najibullah Zadran as Afghanistan make it two wins in two in #AsiaCup2022 🔥#BANvAFG | 📝 Scorecard: https://t.co/5cGrYOhU7p pic.twitter.com/NKPYC2Xp9q
— ICC (@ICC) August 30, 2022
ತಂಡ ಕೊನೆಯದಾಗಿ 18.3 ಓವರ್ಗಳಲ್ಲಿ 3 ವಿಕೆಟ್ನಷ್ಟಕ್ಕೆ 131ರನ್ಗಳಿಸಿತು. ಈ ಮೂಲಕ ಏಷ್ಯಾಕಪ್ನಲ್ಲಿ ಮೊದಲ ತಂಡವಾಗಿ ಸೂಪರ್ 4ಗೆ ಲಗ್ಗೆ ಹಾಕಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಬಾಂಗ್ಲಾ ಮುಂದಿನ ಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿದೆ.
ಅಬ್ಬರಿಸಿದ ಜಾರ್ಡನ್ ಪ್ಲೇಯರ್ಸ್: 127ರನ್ಗಳ ಗುರಿ ಬೆನ್ನಟ್ಟಿದ್ದ ಅಫ್ಘಾನಿಸ್ತಾನ ಸಂಕಷ್ಟಕ್ಕೊಳಗಾಗಿದ್ದ ಸಂದರ್ಭದಲ್ಲಿ ಒಂದಾದ ಇಬ್ರಾಹಿಂ ಜಾರ್ಡನ್ ಹಾಗೂ ನಜಿಬುಲ್ಲಾ ಜಾರ್ಡನ್ ಅಬ್ಬರಿಸಿದರು. ಈ ಜೋಡಿ ಮುರಿಯದ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದಿಟ್ಟರು. ನಜಿಬುಲ್ಲಾ ಕೇವಲ 17 ಎಸೆತಗಳಲ್ಲಿ 1 ಬೌಂಡರಿ, 6 ಸಿಕ್ಸರ್ ಸಿಡಿಸಿದರೆ, ಇಬ್ರಾಹಿಂ ಜಾರ್ಡನ್ 41 ಎಸೆತಗಳಲ್ಲಿ 42ರನ್ಗಳಿಕೆ ಮಾಡಿದರು.