ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯ ಸಂಪೂರ್ಣ ಭಾರತ ತಂಡದ ಹಿಡಿತದಲ್ಲಿದೆ. ಕೊಹ್ಲಿ ಪಡೆದ ನೀಡಿದ 540 ರನ್ಗಳನ್ನು ಬೆನ್ನಟ್ಟಿರುವ ನ್ಯೂಜಿಲ್ಯಾಂಡ್ ತಂಡ 3ನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 140 ರನ್ಗಳಿಸಿದೆ. ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲು 5 ವಿಕೆಟ್ ಅಗತ್ಯವಿದ್ದರೆ, ಕಿವೀಸ್ ಗೆಲ್ಲಲು 400 ರನ್ಗಳ ಅವಶ್ಯಕತೆಯಿದೆ.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 325 ರನ್ಗಳಿಗೆ ಆಲೌಟ್ ಆದರೆ, ಕಿವೀಸ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಅಶ್ವಿನ್(8ಕ್ಕೆ4) ಮತ್ತು ಸಿರಾಜ್(19ಕ್ಕೆ3) ದಾಳಿಗೆ ಸಿಲುಕಿ ಕೇವಲ 62 ರನ್ಗಳಿಗೆ ಸರ್ವಪತನ ಕಂಡಿತ್ತು. ಮೊದಲ ಇನ್ನಿಂಗ್ಸ್ನ ಸಿಕ್ಕ 263 ರನ್ಗಳ ಬೃಹತ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 7 ವಿಕೆಟ್ ಕಳೆದುಕೊಂಡು 276 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡು ಪ್ರವಾಸಿ ತಂಡಕ್ಕೆ 540 ರನ್ಗಳ ಬೃಹತ್ ಗುರಿ ನೀಡಿತು.
ಮಯಾಂಕ್ ಅಗರ್ವಾಲ್ 62, ಪೂಜಾರ 47, ಶುಬ್ಮನ್ ಗಿಲ್ 47, ಕೊಹ್ಲಿ 36 ಮತ್ತು ಅಕ್ಷರ್ ಪಟೇಲ್ 41 ರನ್ಗಳಿಸಿದ್ದರು. ಕಿವೀಸ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ ಪಡೆದಿದ್ದ ಅಜಾಜ್ ಮತ್ತೆ 4 ವಿಕೆಟ್ ಪಡೆದರೆ, ರಚಿನ್ ರವೀಂದ್ರ 3 ವಿಕೆಟ್ ಪಡೆದರು.
-
Stumps in Mumbai 🏏
— ICC (@ICC) December 5, 2021 " class="align-text-top noRightClick twitterSection" data="
New Zealand need 400 more, while India need five wickets to win.#WTC23 | #INDvNZ | https://t.co/EdvFj8QtKD pic.twitter.com/vBOlgkfo9Q
">Stumps in Mumbai 🏏
— ICC (@ICC) December 5, 2021
New Zealand need 400 more, while India need five wickets to win.#WTC23 | #INDvNZ | https://t.co/EdvFj8QtKD pic.twitter.com/vBOlgkfo9QStumps in Mumbai 🏏
— ICC (@ICC) December 5, 2021
New Zealand need 400 more, while India need five wickets to win.#WTC23 | #INDvNZ | https://t.co/EdvFj8QtKD pic.twitter.com/vBOlgkfo9Q
ಆರಂಭಿಕ ಆಘಾತ:
540 ರನ್ಗಳ ಗುರಿ ಬೆನ್ನಟ್ಟಿದ ಕಿವೀಸ್ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ದಾಳಿಗೆ ಸಿಲುಕಿ 55 ರನ್ಗಳಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ನಾಯಕ ಟಾಮ್ ಲೇಥಮ್(6), ವಿಲ್ ಯಂಗ್(20) ಮತ್ತು ರಾಸ್ ಟೇಲರ್(6) ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾದರು.
ಡೇರಿಲ್ ಮಿಚೆಲ್ - ನಿಕೋಲ್ಸ್ ಜೊತೆಯಾಟ
ಆದರೆ 4ನೇ ವಿಕೆಟ್ಗೆ ಒಂದಾದ ಡೇರಿಲ್ ಮಿಚೆಲ್ ಮತ್ತು ಹೆನ್ರಿ ನಿಕೋಲ್ಸ್ 73 ರನ್ ಸೇರಿಸಿ ಭಾರತೀಯ ಬೌಲರ್ಗಳನ್ನು ಸ್ವಲ್ಪ ಸಮಯ ಕಾಡಿದರು. ಆದರೆ 2ನೇ ಸ್ಪೆಲ್ನಲ್ಲಿ ದಾಳಿಗಿಳಿದ ಅಕ್ಷರ್ ಪಟೇಲ್ 92 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 60 ರನ್ಗಳಿಸಿದ್ದ ಮಿಚೆಲ್ ವಿಕೆಟ್ ಪಡೆದು ಬ್ರೇಕ್ ನೀಡಿದರು. ಇವರ ಬೆನ್ನಲ್ಲೇ ಬಂದ ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ ಖಾತೆ ತೆರೆಯುವ ಮುನ್ನವೇ ರನ್ಔಟ್ ಆಗಿ ವಾಪಸ್ ಆದರು.
ಪ್ರಸ್ತುತ ಹೆನ್ರಿ ನಿಕೋಲ್ಸ್ ಅಜೇಯ 36 ಮ್ತು ರಚಿನ್ ರವೀಂದ್ರ 2 ರನ್ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಭಾರತದ ಪರ ಆರ್ ಅಶ್ವಿನ್ 27ಕ್ಕೆ 3, ಅಕ್ಷರ್ ಪಟೇಲ್ 42ಕ್ಕೆ 1 ವಿಕೆಟ್ ಪಡೆದರು.
ಇದನ್ನೂ ಓದಿ: ಕುಂಬ್ಳೆ, ಭಜ್ಜಿ, ಕಪಿಲ್ ದೇವ್ ಅಂತಹ ದಿಗ್ಗಜರನ್ನ ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಅಶ್ವಿನ್