ಮುಂಬೈ: ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ 2 ವಿಕೆಟ್ ಪಡೆಯುವ ಮೂಲಕ ರವಿಚಂದ್ರನ್ ಅಶ್ವಿನ್ ಕ್ಯಾಲೆಂಡರ್ ವರ್ಷದಲ್ಲಿ 50ಕ್ಕೂ ಹೆಚ್ಚು ವಿಕೆಟ್ಗಳನ್ನು ಹೆಚ್ಚು ಬಾರಿ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಕಿವೀಸ್ ಓಪನರ್ ವಿಲ್ ಯಂಗ್(20) ವಿಕೆಟ್ ಪಡೆಯುವ ಮೂಲಕ ಅಶ್ವಿನ್ 2021ರಲ್ಲಿ 50 ವಿಕೆಟ್ ಪೂರ್ಣಗೊಳಿಸಿದರು. ಇದಕ್ಕೂ ಮುನ್ನ 2015, 2016, 2017ರಲ್ಲಿ 50+ ವಿಕೆಟ್ ಪಡೆದಿದ್ದರು. ಈ ವರ್ಷ ಸೇರಿದಂತೆ ಅಶ್ವಿನ್ ವೃತ್ತಿ ಜೀವನದಲ್ಲಿ 4 ವರ್ಷ 50+ ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಶ್ವಿನ್ ಹೊರತುಪಡಿಸಿದರೆ ಅನಿಲ್ ಕುಂಬ್ಳೆ(1999, 2004, 2006) ಮತ್ತು ಹರ್ಭಜನ್ ಸಿಂಗ್(2001, 2002, 2008) ತಲಾ ಮೂರು ಬಾರಿ ಕ್ಯಾಲೆಂಡರ್ ವರ್ಷದಲ್ಲಿ 50ಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಕಪಿಲ್ ದೇವ್ 1979 ಮತ್ತು 1983 ರಲ್ಲಿ ಈ ಸಾಧನೆ ಮಾಡಿದ್ದರು.
2021ರಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್
ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಪಡೆದಿರುವ ಅಶ್ವಿನ್ 2021ರಲ್ಲಿ 51 ವಿಕೆಟ್ ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ಶಾಹೀನ್ ಅಫ್ರಿದಿ 44 ಮತ್ತು ಹಸನ್ ಅಲಿ 39 ಮತ್ತು ಅಕ್ಷರ್ ಪಟೇಲ್ 35 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: India vs New Zealand 2nd test : ನ್ಯೂಜಿಲ್ಯಾಂಡ್ಗೆ 540 ರನ್ಗಳ ಗುರಿ ನೀಡಿದ ಭಾರತ