ETV Bharat / sports

ಅಶ್ವಿನ್ ಗನ್ ಇದ್ದಂತೆ, ಹೊಸ ಬಾಲ್​ನಲ್ಲಿ ಸ್ಪಿನ್​ ಎದುರಿಸುವುದು ಕಠಿಣ ಸವಾಲು: ಖವಾಜಾ - facing new ball on turners is hardest challenge

ಡೇವಿಡ್​ ವಾರ್ನರ್​ ಜೊತೆಗೆ ಉಸ್ಮಾನ್ ಖವಾಜಾ ಆಸ್ಟ್ರೇಲಿಯಾಕ್ಕೆ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ. ಹೀಗಾಗಿ ಹೊಸ ಚೆಂಡಿನಲ್ಲಿ ಅಶ್ವಿನ್​ ಅವರ ಬೌಲಿಂಗನ್ನು ಭಾರತೀಯ ಪಿಚ್​ಗಳಲ್ಲಿ ಎದುರಿಸುವುದು ಸವಾಲಿಸ ಕೆಲಸ ಎಂದು ಪಾಕ್​ ಮೂಲದ ಬ್ಯಾಟರ್​ ಖವಾಜಾ ಅಭಿಪ್ರಾಯಪಟ್ಟಿದ್ದಾರೆ.

Usman Khawaja visa
ಆರ್​ ಅಶ್ವಿನ್​
author img

By

Published : Feb 6, 2023, 9:30 PM IST

ಬೆಂಗಳೂರು: ಫೆಬ್ರವರಿ 9 ರಿಂದ ಆರಂಭವಾಗುತ್ತಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಆರ್​ ಅಶ್ವಿನ್​ ಮತ್ತು ಭಾರತದ ಸ್ಪಿನ್​ ದಾಳಿ ಎದುರಿಸುವುದು ಸವಾಲಾಗಿದೆ ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಲ್ಕು ಟೆಸ್ಟ್​ ಭಾರತದಲ್ಲಿ ನಡೆಯಲಿದ್ದು, ಪ್ರತಿಷ್ಠಿತ ಕಪ್​ ವಶಪಡಿಸಿಕೊಳ್ಳಲು ಕಾಂಗರೂ ಪಡೆ ರಣತಂತ್ರಗಳನ್ನು ರೂಪಿಸುತ್ತಿದೆ.

ವೀಸಾ ವಿಳಂಬವಾದ ಹಿನ್ನೆಲೆ ಸಹ ಆಟಗಾರರೊಂದಿಗೆ ಪ್ರಯಾಣ ಬೆಳೆಸದ ಪಾಕಿಸ್ತಾನ ಮೂಲದ ಬ್ಯಾಟರ್ ಉಸ್ಮಾನ್ ಖವಾಜಾ ನಂತರ ಭಾರತಕ್ಕೆ ಬಂದರು. ಸದ್ಯ ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪಡೆಯ ಆರಂಭಿಕರಾಗಿದ್ದಾರೆ. ಖವಾಜಾ ಅವರು ಭಾರತದಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ಆಡಿದ್ದಾರೆ. 2013 ಮತ್ತು 2017 ರಲ್ಲಿ ಭಾರತದಲ್ಲಿ ಆಡಿದ ಅವರು ಮತ್ತೆ ಟೆಸ್ಟ್​ ಆಡಲು ಭಾರತಕ್ಕೆ ಬಂದಿದ್ದಾರೆ.

2004-05ರಲ್ಲಿ ಭಾರತದಲ್ಲಿ ಗೆಲುವು ಸಾಧಿಸಿರುವ ಕಾಂಗರೂಗಳಿಗೆ ಮತ್ತೆ ಗೆಲ್ಲುವ ಅವಕಾಶ ಈ ಬಾರಿ ಸೃಷ್ಟಿಸಿಕೊಳ್ಳ ಬೇಕಿದ್ದು, ಉಸ್ಮಾನ್ ಖವಾಜಾ ಆಸ್ಟ್ರೇಲಿಯನ್​ ಬ್ಯಾಟಿಂಗ್ ಪಡೆಯ ಬಹುದೊಡ್ಡ ನಿರೀಕ್ಷೆಯಾಗಿದ್ದಾರೆ. "ಕಳೆದ 10 ವರ್ಷಗಳಲ್ಲಿ ನಾವು ಬಹಳಷ್ಟು ಕಲಿತಿದ್ದೇವೆ, ವಿಶೇಷವಾಗಿ ನಾವು ಪಡೆಯಬಹುದಾದ ವಿಕೆಟ್‌ಗಳು ಮತ್ತು ನಮ್ಮ ಬ್ಯಾಟಿಂಗನ್ನು ಸುಧಾರಿಸಿದ್ದೇವೆ. ಈ ನೆಲದಲ್ಲಿ ಟೆಸ್ಟ್​ ಗೆಲ್ಲುವುದು ಸುಲಭವಿಲ್ಲ. ಆದರೆ, ಮೊದಲಿಗಿಂತ ಸುಧಾರಿತ ಪ್ರದರ್ಶನ ನೀಡುತ್ತೇವೆ" ಎಂದು ಹೇಳಿದ್ದಾರೆ.

ಆಸ್ಟ್ರೇಲಿಯನ್ನರು ಟೆಸ್ಟ್ ಸರಣಿಗೆ ಮುಂಚಿತವಾಗಿ ಅಭ್ಯಾಸ ನಡೆಸಿದ್ದಾರೆ. ಭಾರತದ ಸ್ಪಿನ್​ ಪಿಚ್​ಗಳಿಗೆ ಹೊಂದಿಕೊಂಡು ಬ್ಯಾಟಿಂಗ್​ ಅಭ್ಯಾಸ ಮಾಡುತ್ತಿದ್ದಾರೆ. ಭಾರತದಲ್ಲಿನ ಪಿಚ್​ಗಳ ಬಗ್ಗೆ ಅರಿಯಲು ತಂಡ ಪ್ರಯತ್ನಿಸುತ್ತಿದೆ. ಅಲ್ಲದೇ ಆರ್​ ಅಶ್ವಿನ್​ ಅವರನ್ನೇ ಹೋಲುವ ರೀತಿ ಬೌಲಿಂಗ್​ ಮಾಡುವ ಮಹೇಶ್​ ಅವರ ಸ್ಪಿನ್​ಗೆ ಬ್ಯಾಟಿಂಗ್​ ಅಭ್ಯಾಸ ಮಾಡುತ್ತಿದ್ದಾರೆ. ಹೆಚ್ಚು ಎಡಗೈ ಬ್ಯಾಟರ್​ಗಳನ್ನು ಹೊಂದಿರುವ ಕಾಂಗರೂ ಪಡೆ ಅಶ್ವಿನ್​ರ ಸ್ಪಿನ್​ ದಾಳಿಯ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿದೆ. ಎಡಗೈ ಬ್ಯಾಟರ್​ಗಳಿಗೆ ಮಾರಕವಾಗುವ ಆರ್​ ಅಶ್ವಿನ್​ ಎದುರಿಸುವ ತಂತ್ರಗಾರಿಕೆಯೇ ಮುಖ್ಯ ಎಂದು ಖವಾಜಾ ಹೇಳಿದ್ದಾರೆ.

"ಅಶ್ವಿನ್ ಒಬ್ಬ ಗನ್. ಅವರು ತುಂಬಾ ಕೌಶಲ್ಯಶಾಲಿ, ಅವರು ಸಾಕಷ್ಟು ಟ್ರಿಕ್ಕಿ ಸಣ್ಣ ಬದಲಾವಣೆಯ ಬೌಲಿಂಗ್​ ಮಾಡುತ್ತಾರೆ. ಅವರು ಕ್ರೀಸ್ ಅನ್ನು ಸಹ ಚೆನ್ನಾಗಿ ಬಳಸುತ್ತಾರೆ. ಆಫ್ ಸ್ಪಿನ್ನರ್‌ಗಳು ಏನು ಮಾಡುತ್ತಿದ್ದಾರೆ ಮತ್ತು ಎದುರಿಸುವುದು ಹೇಗೆ ಎಂದು ನಾನು ನಿಜವಾಗಿಯೂ ಕಲಿತಿಲ್ಲ. ಅಶ್ವಿನ್​ ಅವರ ಬೌಲಿಂಗ್​ ಎದುರಿಸುವುದೇ ಸವಾಲಿನ ಕೆಲಸವಾಗಿದೆ. ಹೆಚ್ಚು ಅವರ ಬೌಲ್​ ಎದುರಿಸಿದರೆ ಅವರು ಬೌಲಿಂಗ್​ ಟ್ರಿಕ್​ ಬದಲಾವನೆ ಮಾಡುತ್ತಾರೆ. ಅವರ ವಿರುದ್ಧ ರನ್​ ಕಲೆ ಹಾಕುವುದೇ ಸಾಹಸದ ಕೆಲಸ" ಎಂದು ಖವಾಜಾ ಹೇಳಿದ್ದಾರೆ.

"ಪಂದ್ಯದ ಆರಂಭದಲ್ಲಿ ಪಿಚ್​ ಹೊಸದಾಗಿದ್ದಾಗ ಹೊಸ ಚೆಂಡಿನಲ್ಲಿ ಸ್ಪಿನ್ನರ್​ಗಳನ್ನು ಎದುರಿಸುವುದು ಸುಲಭ. ಆದರೆ, ಪಿಚ್​ ಹಳೆಯದಾಗುತ್ತಿದ್ದಂತೆ ಬಾಲ್​ ಹೆಚ್ಚು ತಿರುಗುತ್ತದೆ. ಇದರಿಂದ ಬ್ಯಾಟಿಂಗ್​ ಬಹಳಾ ಕಷ್ಟಕರವಾಗಿರುತ್ತದೆ. ಅಶ್ವಿನ್​ ಪದೇ ಪದೆ ಒಂದೇ ರೀತಿಯ ಬೌಲ್​ ಮಾಡುವುದಿಲ್ಲ. ಅವರು ಆಗಾಗ ಮಾಡುವ ಸಣ್ಣ ಪುಟ್ಟ ಬದಲಾವಣೆಗಳು ಕ್ರಿಸ್​ನಲ್ಲಿ ಬಾಲ್​ ಎದುರಿಸಲು ಕಠಿಣ ಸವಾಲಾಗಿರುತ್ತದೆ. ಅಶ್ವಿನ್​ ಜೊತೆಗೆ ಜಡೇಜ ಮತ್ತು ಅಕ್ಷರ್​ ಪಟೇಲ್​ ಕೂಡ ಪರಿಣಾಮ ಬೀರುತ್ತಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ರಾಷ್ಟ್ರಕ್ಕಾಗಿ ಆಡುವುದು ಮತ್ತೆ ಮಹತ್ವ ಪಡೆದುಕೊಳ್ಳಲಿದೆ.. ಕೆಲವೇ ಲೀಗ್​​ಗಳು ಮಾತ್ರವೇ​ ಉಳಿಯಲಿವೆ: ಗಂಗೂಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.