ಹೈದರಾಬಾದ್(ಸ್ಪೋರ್ಟ್ಸ್ ಡೆಸ್ಕ್): ಭಾರತ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 7 ವಿಕೆಟ್ ಪಡೆದರೆ ಭಾರತದ ಪರ ಹೆಚ್ಚು ಟೆಸ್ಟ್ ವಿಕೆಟ್ ಪಡೆದ 2ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.
ಪ್ರಸ್ತುತ ಅಶ್ವಿನ್ 81 ಟೆಸ್ಟ್ ಪಂದ್ಯಗಳಿಂದ 427 ವಿಕೆಟ್ ಪಡೆದಿದ್ದಾರೆ. ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳಿಂದ 434 ವಿಕೆಟ್ ಪಡೆದಿದ್ದು ಗರಿಷ್ಠ ವಿಕೆಟ್ ಪಡೆದ ವೇಗಿ ಮತ್ತು ಭಾರತದ ಪರ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ(619) ನಂತರದ ಸ್ಥಾನದಲ್ಲಿದ್ದಾರೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ. ಮುರಳೀಧರನ್(800), ಶೇನ್ ವಾರ್ನ್(708), ಜೇಮ್ಸ್ ಆ್ಯಂಡರ್ಸನ್(635), ಅನಿಲ್ ಕುಂಬ್ಳೆ(619), ಗ್ಲೇನ್ ಮೆಗ್ಗ್ರಾತ್(563), ಸ್ಟುವರ್ಟ್ ಬ್ರಾಡ್(526) ಕರ್ಟ್ನಿ ವಾಲ್ಶ್(519), ಡೇಲ್ ಸ್ಟೇನ್(439), ಕಪಿಲ್ ದೇವ್(434) ರಂಗನಾ ಹೆರಾತ್(433) ಅಶ್ವಿನ್ ಗಿಂತ ಮೇಲಿನ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ 12 ವಿಕೆಟ್ ಪಡೆದರೆ 8ನೇ ಸ್ಥಾನಕ್ಕೇರಲಿದ್ದಾರೆ.
ಇದನ್ನೂ ಓದಿ: South Africa vs India: ಕೋಚ್ ರಾಹುಲ್ ದ್ರಾವಿಡ್ ದಾಖಲೆ ಮೇಲೆ ವಿರಾಟ್ ಕೊಹ್ಲಿ ಕಣ್ಣು