ETV Bharat / sports

WTC records: ಅಶ್ವಿನ್, ಲಾಬುಶೇನ್ ಸೇರಿದಂತೆ ಟೂರ್ನಿಯಲ್ಲಿನ ವೈಯಕ್ತಿಕ ದಾಖಲೆಗಳ ವಿವರ ಇಲ್ಲಿದೆ

ನ್ಯೂಜಿಲ್ಯಾಂಡ್ ಆಲ್​ರೌಂಡರ್​ ಕೈಲ್ ಜೆಮೀಸ್​ನ ಐಸಿಸಿ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಹೆಚ್ಚು ಬಾರಿ 5 ವಿಕೆಟ್​ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ. ಚೊಚ್ಚಲ ಟೂರ್ನಿಯ ಫೈನಲ್​ ಸೇರಿದಂತೆ ಕಿವೀಸ್​ ಸ್ಟಾರ್ ಒಟ್ಟು 7 ಪಂದ್ಯಗಳಲ್ಲಿ 43 ವಿಕೆಟ್​ ಪಡೆದಿದ್ದಾರೆ.

WTC records
WTC records
author img

By

Published : Jun 24, 2021, 4:23 PM IST

ಸಾತಾಂಪ್ಟನ್: ಭಾರತ ತಂಡದ ಸ್ಪಿನ್​ ಬೌಲರ್ ಮತ್ಯು ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ಮಾರ್ನಸ್ ಲಾಬುಶೇನ್ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.

ಕೇನ್ ವಿಲಿಯಮ್ಸನ್​ ನೇತೃತ್ವದ ಕಿವೀಶ್ ಪಡೆ ಬುಧವಾರ ಅಂತ್ಯಗೊಂಡ ಚೊಚ್ಚಲ ಟೆಸ್ಟ್​ ಚಾಂಪಿಯನ್​ ಗೆದ್ದು ಬೀಗಿದೆ. ಎರಡು ವರ್ಷಗಳ ಕಾಲ ನಡೆದ ಟೂರ್ನಿಯಲ್ಲಿ ಕೆಲವು ವೈಯಕ್ತಿಕ ದಾಖಲೆ ಟೆಸ್ಟ್​ ಕ್ರಿಕೆಟ್​ ಬೆಳೆಸುವ ಐಸಿಸಿ ಯೋಜನೆಗೆ ಬಲ ತುಂಬಿದೆ. ಎರಡು ವರ್ಷಗಳಲ್ಲಿ ಕೆಲವು ವಿಶೇಷ ದಾಖಲೆಗಳಿಗೆ ಪಾತ್ರರಾದ ಕ್ರಿಕೆಟಿಗರ ಸಾಧನೆ ಇಲ್ಲಿದೆ.

ಗರಿಷ್ಠ ವಿಕೆಟ್: ರವಿಚಂದ್ರನ್ ಅಶ್ವಿನ್(71)

ಭಾರತ ತಂಡದ ರವಿಚಂದ್ರನ್ ಅಶ್ವಿನ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್ ಆಗಿದ್ದಾರೆ. ಅವರು ಬುಧವಾರ WTCಯ ಕೊನೆಯ ದಿನ ಕಿವೀಸ್​ನ 2 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​ ಅವರನ್ನು(70) ಹಿಂದಿಕ್ಕಿ ಟೂರ್ನಿ ಶ್ರೇಷ್ಠ ಬೌಲರ್ ಎನಿಸಿಕೊಂಡರು.

ಹೆಚ್ಚು 5 ವಿಕೆಟ್​ ಗೊಂಚಲು: ಕೈಲ್ ಜೆಮೀಸನ್(5)

ನ್ಯೂಜಿಲ್ಯಾಂಡ್ ಆಲ್​ರೌಂಡರ್​ ಕೈಲ್ ಜೆಮೀಸ್​ನ ಐಸಿಸಿ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಹೆಚ್ಚು ಬಾರಿ 5 ವಿಕೆಟ್​ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ. ಚೊಚ್ಚಲ ಟೂರ್ನಿಯ ಫೈನಲ್​ ಸೇರಿದಂತೆ ಕಿವೀಸ್​ ಸ್ಟಾರ್ ಒಟ್ಟು 8 ಪಂದ್ಯಗಳಲ್ಲಿ 46 ವಿಕೆಟ್​ ಪಡೆದಿದ್ದಾರೆ.

ಹೆಚ್ಚು ರನ್​, ಶತಕ ಅರ್ಧಶತಕ: ಮಾರ್ನಸ್ ಲಾಬುಶೇನ್ -1675

ಆಸ್ಟ್ರೇಲಿಯಾದ ಉದಯೋನ್ಮುಖ ಬ್ಯಾಟ್ಸ್​ಮನ್ ಮಾರ್ನಸ್​ ಲಾಬುಶೇನ್ 13(23 ಇನ್ನಿಂಗ್ಸ್) ಪಂದ್ಯಗಳಿಂದ 1675 ರನ್​ ಬಾರಿಸಿ ಟೂರ್ನಿಯಲ್ಲಿ ಹೆಚ್ಚು ರನ್​ ದಾಖಲಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಜೊತೆಗೆ 5, 9 ಅರ್ಧಶತಕ ಗಳಿಸುವ ಮೂಲಕ ಈ ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ತಂಡದಲ್ಲಿ ಸ್ಮಿತ್​ಗೆ ಕನ್ಕಷನ್ ಬದಲೀ ಆಟಗಾರನಾಗಿ ಅವಕಾಶ ಪಡೆದು ಖಾಯಂ ಆಟಗಾರನಾಗಿ ತಮ್ಮನ್ನು ತಾವೂ ಸ್ಥಾಪಿಸಿಕೊಂಡಿದ್ದು ಶ್ಲಾಘನೀಯ.

ಹೆಚ್ಚು ಕ್ಯಾಚ್​: ಜೋ ರೂಟ್​ 34

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ WTCಯಲ್ಲಿ ಹೆಚ್ಚು ಕ್ಯಾಚ್ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ಕ್ಯಾಪ್ಟನ್ 20 ಪಂದ್ಯಗಳಲ್ಲಿ 34 ಕ್ಯಾಚ್ ಪಡೆದಿದ್ದಾರೆ.

ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ವೈಯಕ್ತಿಕ ಗರಿಷ್ಠ ಸ್ಕೋರರ್​(335), ಭಾರತದ ಅಕ್ಷರ್​ ಪಟೇಲ್(70ಕ್ಕೆ11 ವಿಕೆಟ್​) ವೈಯಕ್ತಿಕ ಬೆಸ್ಟ್​ ಬೌಲಿಂಗ್​ ದಾಖಲೆ, ಆಸ್ಟ್ರೇಲಿಯಾದ ಟಿಮ್ ಪೇನ್(65) ಗರಿಷ್ಠ ಬಲಿ ಪಡೆದ ವಿಕೆಟ್ ಕೀಪರ್ ಎಂಬ ವೈಯಕ್ತಿಕ ದಾಖಲೆಗೆ ಪಾತ್ರರಾಗಿದ್ದಾರೆ.

ಇದನ್ನು ಓದಿ:ಒಂದೇ ಪಂದ್ಯದಿಂದ ಅತ್ಯುತ್ತಮ ಟೆಸ್ಟ್ ತಂಡ ನಿರ್ಧಾರವಾಗಲ್ಲ: ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.