ಸೌತಾಂಪ್ಟನ್: ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್ ಪಡೆಯುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಸೌತಾಂಪ್ಟನ್ನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಆರ್. ಅಶ್ವಿನ್ ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆದಿದ್ದರು. ಕೊನೆಯ ದಿನವಾದ ಇಂದು ಆರಂಭಿಕರಾದ ಟಾಮ್ ಲ್ಯಾಥಮ್ ಮತ್ತು ಡಿವೋನ್ ಕಾನ್ವೆ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಹಿಂದಿಕ್ಕಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಆಸೀಸ್ ಪೇಸರ್ 14 ಪಂದ್ಯಗಳಿಂದ 70 ವಿಕೆಟ್ ಪಡೆದಿದ್ದರು. ಅಶ್ವಿನ್ ಕೂಡ ಅಷ್ಟೇ ಪಂದ್ಯಗಳಿಂದ 71 ವಿಕೆಟ್ ಪಡೆದಿದ್ದಾರೆ. ಅಶ್ವಿನ್ 4 ಬಾರಿ 5 ವಿಕೆಟ್ ಪಡೆದಿದ್ದರೆ, ಕಮಿನ್ಸ್ ಕೇವಲ ಒಂದು ಬಾರಿ 5 ವಿಕೆಟ್ ಪಡೆದಿದ್ದಾರೆ. ಆಶ್ವಿನ್ ಬಿಟ್ಟರೆ ವೇಗಿ ಮೊಹಮ್ಮದ್ ಶಮಿ 11 ಪಂದ್ಯಗಳಿಂದ 40 ವಿಕೆಟ್ ಪಡೆದಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳು
- ರವಿಚಂದ್ರನ್ ಅಶ್ವಿನ್- 14 ಪಂದ್ಯ 71 ವಿಕೆಟ್
- ಪ್ಯಾಟ್ ಕಮಿನ್ಸ್- 14 ಪಂದ್ಯ 70 ವಿಕೆಟ್
- ಸ್ಟುವರ್ಟ್ ಬ್ರಾಡ್- 17 ಪಂದ್ಯ 69 ವಿಕೆಟ್
- ಟಿಮ್ ಸೌಥಿ- 11 ಪಂದ್ಯ 56 ವಿಕೆಟ್
- ನಥನ್ ಲಿಯಾನ್- 14 ಪಂದ್ಯ 56 ವಿಕೆಟ್