ಲಂಡನ್: ಇಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಕೊನೆಯ, 5ನೇ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಮೊದಲ ಇನಿಂಗ್ಸ್ನ ಅಲ್ಪ ಹಿನ್ನಡೆಯ ಹೊರತಾಗಿಯೂ ಇಂಗ್ಲೆಂಡ್ ಭರ್ಜರಿ ಕಮ್ಬ್ಯಾಕ್ ಮಾಡಿ 3 ದಿನದಾಂತ್ಯಕ್ಕೆ 2ನೇ ಇನಿಂಗ್ಸ್ನಲ್ಲಿ 9 ವಿಕೆಟ್ಗೆ 389 ರನ್ ಪೇರಿಸಿತು. ಇನ್ನೊಂದೆಡೆ, ತಂಡದ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
-
Stuart, it's been an honour 🤝
— England Cricket (@englandcricket) July 29, 2023 " class="align-text-top noRightClick twitterSection" data="
We wish you all the best in whatever you decide to do next ❤️ #EnglandCricket | #Ashes pic.twitter.com/ezB9OBWObt
">Stuart, it's been an honour 🤝
— England Cricket (@englandcricket) July 29, 2023
We wish you all the best in whatever you decide to do next ❤️ #EnglandCricket | #Ashes pic.twitter.com/ezB9OBWObtStuart, it's been an honour 🤝
— England Cricket (@englandcricket) July 29, 2023
We wish you all the best in whatever you decide to do next ❤️ #EnglandCricket | #Ashes pic.twitter.com/ezB9OBWObt
ಮೊದಲ ಇನಿಂಗ್ಸ್ನಲ್ಲಿ 12 ರನ್ಗಳ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಹ್ಯಾರಿ ಬ್ರೂಕ್ ಹೊರತುಪಡಿಸಿ ಎಲ್ಲ ಬ್ಯಾಟರ್ಗಳು ಅಬ್ಬರಿಸಿದರು. ಜಾಕ್ ಕ್ರಾವ್ಲೆ 73, ಬೆನ್ ಡಕೆಟ್ 42, ನಾಯಕ ಬೆನ್ ಸ್ಟ್ರೋಕ್ಸ್ 42, ಜಾನಿ ಬೈರ್ಸ್ಟೋವ್ 78, ಮೊಯಿನ್ ಅಲಿ 29 ರನ್ ಮಾಡಿದರು. ಪ್ರಥಮ ಇನಿಂಗ್ಸ್ನಲ್ಲಿ ಬೇಸ್ಬಾಲ್ ಮಾದರಿ ಬ್ಯಾಟ್ ಮಾಡಿದ್ದ ತಂಡ 2ನೇ ಇನಿಂಗ್ಸ್ನಲ್ಲೂ ಅದೇ ಮಾದರಿ ಅನುಸರಿಸಿ ಯಶ ಕಂಡಿತು.
ರೂಟ್ಗೆ ಶತಕ ಮಿಸ್: ಮೊದಲ ಇನಿಂಗ್ಸ್ನಲ್ಲಿ ವೈಫಲ್ಯ ಅನುಭವಿಸಿದ್ದ ಜೋಯ್ ರೂಟ್ ಅಬ್ಬರಿಸಿದರು. ಏಕದಿನ ಮಾದರಿಯಲ್ಲಿ ಬ್ಯಾಟ್ ಮಾಡಿದ ಇಂಗ್ಲೆಂಡ್ ಆಟಗಾರ 105 ಎಸೆತಗಳಲ್ಲಿ 91 ರನ್ ಮಾಡಿದರು. ಇದರಲ್ಲಿ 11 ಬೌಂಡರಿ, 1 ಸಿಕ್ಸರ್ ಇದ್ದವು. ಶತಕದ ಅಂಚಿನಲ್ಲಿ ರೂಟ್, ಟಾಡ್ ಮೊರ್ಪೆ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡ್ ಆಗಿ ಶತಕ ವಂಚಿತರಾದರು.
-
Crawley 7⃣3⃣
— England Cricket (@englandcricket) July 29, 2023 " class="align-text-top noRightClick twitterSection" data="
Root 9⃣1⃣
Bairstow 7⃣8⃣
3⃣8⃣9⃣ England runs in the day 🏏💥
Day Three Highlights 👇
">Crawley 7⃣3⃣
— England Cricket (@englandcricket) July 29, 2023
Root 9⃣1⃣
Bairstow 7⃣8⃣
3⃣8⃣9⃣ England runs in the day 🏏💥
Day Three Highlights 👇Crawley 7⃣3⃣
— England Cricket (@englandcricket) July 29, 2023
Root 9⃣1⃣
Bairstow 7⃣8⃣
3⃣8⃣9⃣ England runs in the day 🏏💥
Day Three Highlights 👇
ಮತ್ತೆ ಮಿಚೆಲ್ ಮಿಂಚು: ಇತ್ತ ಬ್ರಿಟಿಷ್ ಬ್ಯಾಟರ್ಗಳು ರನ್ ಗುಡ್ಡೆ ಹಾಕುತ್ತಿದ್ದರೆ, ಆಸ್ಟೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಕೆಡವಿದರು. ಮೊದಲ ಇನಿಂಗ್ಸ್ನಲ್ಲೂ ಇಷ್ಟೇ ವಿಕೆಟ್ ಪಡೆದು ಇಂಗ್ಲೆಂಡ್ ಕಟ್ಟಿಹಾಕಿದ್ದರು. ಇವರ ಜತೆಗೆ ಸ್ಪಿನ್ನರ್ ಟಾಡ್ ಮೊರ್ಫಿ 3 ವಿಕೆಟ್ ಪಡೆದರು.
ಇನ್ನೆರಡು ದಿನಗಳ ಆಟ ಬಾಕಿ ಉಳಿದಿದೆ. ಇಂಗ್ಲೆಂಡ್ ಕೈಯಲ್ಲಿ 1 ವಿಕೆಟ್ ಉಳಿದಿದ್ದು, ಸದ್ಯ್ಕಕೆ 377 ರನ್ ಮುನ್ನಡೆಯಲ್ಲಿದೆ. ಈಗಾಗಲೇ ಆಸ್ಟ್ರೇಲಿಯಾ 5 ಪಂದ್ಯಗಳ ಮಹತ್ವದ ಆ್ಯಶಸ್ ಸರಣಿಯನ್ನು 2-1 ರಲ್ಲಿ ತನ್ನಲ್ಲೇ ಉಳಿಸಿಕೊಂಡಿದೆ. 22 ವರ್ಷಗಳಿಂದ ತವರಿನಲ್ಲಿ ಆ್ಯಶಸ್ ಸರಣಿ ಗೆಲ್ಲುವ ಕನಸು ಇಂಗ್ಲೆಂಡ್ಗೆ ಈ ಬಾರಿಯೂ ಕೈಗೂಡಲಿಲ್ಲ.
-
That's stumps 🏏
— England Cricket (@englandcricket) July 29, 2023 " class="align-text-top noRightClick twitterSection" data="
Australia trail by 3️⃣7️⃣7️⃣ at the close.
Another incredible day for England - what did you make of that? 🤔 #EnglandCricket | #Ashes pic.twitter.com/1L8tOufRBj
">That's stumps 🏏
— England Cricket (@englandcricket) July 29, 2023
Australia trail by 3️⃣7️⃣7️⃣ at the close.
Another incredible day for England - what did you make of that? 🤔 #EnglandCricket | #Ashes pic.twitter.com/1L8tOufRBjThat's stumps 🏏
— England Cricket (@englandcricket) July 29, 2023
Australia trail by 3️⃣7️⃣7️⃣ at the close.
Another incredible day for England - what did you make of that? 🤔 #EnglandCricket | #Ashes pic.twitter.com/1L8tOufRBj
ಬ್ರಾಡ್ ದಿಢೀರ್ ನಿವೃತ್ತಿ: ಇಂಗ್ಲೆಂಡ್ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇದು ತಂಡ, ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯಾಗಿದೆ. 3ನೇ ದಿನದಾಂತ್ಯ ಮುಗಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬ್ರಾಡ್, "ಇದು ನನ್ನ ಕೊನೆಯ ಟೆಸ್ಟ್. ಅಚ್ಚುಮಚ್ಚಿನ ಆ್ಯಶಸ್ ಸರಣಿಯಲ್ಲಿ ನಿವೃತ್ತಿ ಘೋಷಿಸಬೇಕು ಎಂದುಕೊಂಡಿದ್ದೆ. ಅದರಂತೆ ಈ ಸರಣಿಯಲ್ಲೇ ಕ್ರಿಕೆಟ್ನಿಂದ ನಿವೃತ್ತಿಯಾಗುತ್ತಿದ್ದೇನೆ" ಎಂದರು.
2007ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬ್ರಾಡ್ ಈವರೆಗೂ 167 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 602 ವಿಕೆಟ್ ಗಳಿಸಿದ್ದು, ಅತಿಹೆಚ್ಚು ವಿಕೆಟ್ ಗಳಿಸಿದ ಸಾರ್ವಕಾಲಿಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಸ್ಟವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಜೋಡಿ ಇಂಗ್ಲೆಂಡ್ನ ಅತಿ ಯಶಸ್ವಿ ವೇಗಿ ಜೋಡಿಯಾಗಿದೆ.
ಇದನ್ನೂ ಓದಿ: West Indies vs India, 2nd ODI: ಭಾರತ 'ಟಿ20 ತಂಡ'ದ ವಿರುದ್ಧ ವಿಂಡೀಸ್ಗೆ 6 ವಿಕೆಟ್ಗಳ ಗೆಲುವು; ಸರಣಿ 1-1ರಲ್ಲಿ ಸಮಬಲ