ಬರ್ಮಿಂಗ್ಹ್ಯಾಮ್ (ಇಂಗ್ಲೆಂಡ್): ಕ್ರಿಕೆಟ್ ಬದ್ಧವೈರಿಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ ಆ್ಯಶಸ್ ಟೆಸ್ಟ್ನ ಮೊದಲ ಪಂದ್ಯದ ಎರಡೇ ದಿನದಲ್ಲಿ 700ಕ್ಕೂ ಅಧಿಕ ರನ್ಗಳು ದಾಖಲಾಗಿವೆ. ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ 393 ರನ್ಗಳ ಗುರಿಯನ್ನು ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಅವರ ಅಜೇಯ ಶತಕದ ಬಲದಿಂದ ದಿಟ್ಟವಾಗಿ ಎದುರಿಸುತ್ತಿರುವ ಆಸೀಸ್ 2ನೇ ದಿನದ ಅಂತ್ಯಕ್ಕೆ 5 ವಿಕೆಟ್ಗೆ 311 ರನ್ ಗಳಿಸಿತು. ತಂಡ ಇನ್ನೂ 82 ರನ್ಗಳ ಹಿನ್ನಡೆಯಲ್ಲಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ 62 ಪಂದ್ಯಗಳನ್ನಾಡಿ 15 ಶತಕ ಬಾರಿಸಿರುವ ಉಸ್ಮಾನ್ ಖವಾಜಾ ಇಂಗ್ಲೆಂಡ್ನಲ್ಲಿ ನೆಲದಲ್ಲಿ ಇದೇ ಮೊದಲ ಬಾರಿಗೆ ಸೆಂಚುರಿ ಬಾರಿಸಿದ್ದಾರೆ. ಆರಂಭಿಕ ಹಿನ್ನಡೆಯ ನಡುವೆಯೂ ಉತ್ತಮ ಬ್ಯಾಟ್ ಬೀಸಿದ ಎಡಗೈ ದಾಂಡಿಗ ಬ್ರಿಟಿಷ್ ನೆಲದಲ್ಲಿ ಚೊಚ್ಚಲ ಶತಕ (126) ದಾಖಲಿಸಿ ಖುಷಿ ಪಟ್ಟರು. ಈ ಸಾಧನೆ ಬಳಿಕ ಆಟಗಾರ ಬ್ಯಾಟನ್ನು ಗಾಳಿಯಲ್ಲಿ ತೂರಿ ಸಂಭ್ರಮಾಚರಣೆ ಮಾಡಿದ್ದು ವಿಶೇಷವಾಗಿತ್ತು.
-
This is what it means 🙌
— ICC (@ICC) June 17, 2023 " class="align-text-top noRightClick twitterSection" data="
Usman Khawaja celebrated his sublime century against England in style 💯#Ashes | #WTC25 pic.twitter.com/6fGWJr8fAB
">This is what it means 🙌
— ICC (@ICC) June 17, 2023
Usman Khawaja celebrated his sublime century against England in style 💯#Ashes | #WTC25 pic.twitter.com/6fGWJr8fABThis is what it means 🙌
— ICC (@ICC) June 17, 2023
Usman Khawaja celebrated his sublime century against England in style 💯#Ashes | #WTC25 pic.twitter.com/6fGWJr8fAB
ಇನಿಂಗ್ಸ್ ಆರಂಭದಲ್ಲಿ ಹಿರಿಯ ಆಟಗಾರ ಡೇವಿಡ್ ವಾರ್ನರ್ 9 ರನ್ಗೆ ಸ್ಟುವರ್ಟ್ ಬ್ರಾಡ್ಗೆ ವಿಕೆಟ್ ನೀಡಿದರು. ಇದಾದ ಮುಂದಿನ ಎಸೆತದಲ್ಲಿ ವಿಶ್ವದ ನಂಬರ್ 1 ಟೆಸ್ಟ್ ಬ್ಯಾಟರ್ ಮಾರ್ನಸ್ ಲಬುಶೇನ್ ಸೊನ್ನೆ ಸುತ್ತಿದರು. ಇದು ತಂಡಕ್ಕೆ ಭಾರಿ ಹೊಡೆತ ನೀಡಿತು. ಮಧ್ಯಮ ಕ್ರಮಾಂಕದ ಆಧಾರ ಭರ್ಜರಿ ಲಯದಲ್ಲಿರುವ ಸ್ಟೀವ್ ಸ್ಮಿತ್ 16 ರನ್ಗೆ ಮೈದಾನ ತೊರೆದರು. ಇದರಿಂದ ತಂಡ ಕೇವಲ 67 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಕ್ರೀಸ್ಗಿಳಿದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಹೀರೋ ಟ್ರೇವಿಸ್ ಹೆಡ್ (50) ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಆಧರಿಸಿ ಔಟಾದರು. ಕ್ಯಾಮರೂನ್ ಗ್ರೀನ್ 38 ರನ್ ಮಾಡಿ ಟೆಸ್ಟ್ ನಿವೃತ್ತಿಯಿಂದ ಮರಳಿ ಬಂದ ಮೊಯೀನ್ ಅಲಿ ಎಸೆತದಲ್ಲಿ ಔಟ್ ಆದರು.
ಖವಾಜಾ ಶತಕ ಸಾಧನೆ: ತಂಡ ಒಂದೊಂದೇ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ದೃಢವಾಗಿ ನಿಂತು ಆಡಿದ ಉಸ್ಮಾನ್ ಖವಾಜಾ ಇಂಗ್ಲಿಷರ ನಾಡಲ್ಲಿ ಚೊಚ್ಚಲ ಅಜೇಯ ಶತಕ (126) ಸಾಧನೆ ಮಾಡಿದರು. ಬ್ರಿಟಿಷರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಬ್ಯಾಟರ್ 14 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಇತ್ತ ಅಲೆಕ್ಸ್ ಕ್ಯಾರಿ ಕೂಡ 52 ರನ್ ಮಾಡಿದ್ದು, ಅಜೇಯರಾಗುಳಿದು ಇಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಬ್ಬರೂ ಸೇರಿ 91 ರನ್ ಜೊತೆಯಾಟ ನೀಡಿದರು.
-
Usman Khawaja and Alex Carey carry Australia to stumps 🙌🏻 #Ashes | #WTC25 | 📝: https://t.co/ZNnKIn9jeq pic.twitter.com/Y5eeAPkQVQ
— ICC (@ICC) June 17, 2023 " class="align-text-top noRightClick twitterSection" data="
">Usman Khawaja and Alex Carey carry Australia to stumps 🙌🏻 #Ashes | #WTC25 | 📝: https://t.co/ZNnKIn9jeq pic.twitter.com/Y5eeAPkQVQ
— ICC (@ICC) June 17, 2023Usman Khawaja and Alex Carey carry Australia to stumps 🙌🏻 #Ashes | #WTC25 | 📝: https://t.co/ZNnKIn9jeq pic.twitter.com/Y5eeAPkQVQ
— ICC (@ICC) June 17, 2023
ಇತ್ತ ಇಂಗ್ಲೆಂಡ್ ಪರವಾಗಿ 29 ಓವರ್ ಎಸೆದ ಮೊಯೀನ್ ಅಲಿ 124ಕ್ಕೆ 2, ಸ್ಟುವರ್ಟ್ ಬ್ರಾಡ್ 49ಕ್ಕೆ 2, ಬೆನ್ ಸ್ಟೋಕ್ಸ್ 1 ವಿಕೆಟ್ ಗಳಿಸಿದ್ದಾರೆ. ಆಸೀಸ್ ಪಡೆಯನ್ನು ಕಡಿಮೆ ರನ್ಗೆ ಕಟ್ಟಿಹಾಕುವ ಇರಾದೆಯಲ್ಲಿದ್ದ ಇಂಗ್ಲೆಂಡ್ ಮೊದಲ ದಿನದಲ್ಲೇ 393 ರನ್ಗೆ ಡಿಕ್ಲೇರ್ ಮಾಡಿಕೊಂಡಿತ್ತು. ಆದರೆ, ಖವಾಜಾ ಶತಕ ಇಬ್ಬರು ಆಟಗಾರರ ಅರ್ಧಶತಕದಿಂದ ಆಸೀಸ್ ಮುನ್ನಡೆ ಸಾಧಿಸುವತ್ತ ನುಗ್ಗುತ್ತಿದೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ ಜೋ ರೂಟ್ 118 ರನ್ ಗಳಿಸಿ ಅಜೇಯರಾಗಿ ಉಳಿದರೆ, ಝಾಕ್ ಕ್ರಾವ್ಲಿ 61, ಜಾನಿ ಬೈರ್ಸ್ಟೋವ್ 78 ರನ್ ಗಳಿಸಿದ್ದರು.
ಇದನ್ನೂ ಓದಿ: Ashes 2023: ತಂಡಕ್ಕಾಗಿ ಏಕಾಂಗಿ ಪ್ರದರ್ಶನ ನೀಡಿ ತಮ್ಮದೇ ತಂಡದ ಆಟಗಾರನ ದಾಖಲೆ ಮುರಿದ ರೋಟ್