ಎಡ್ಜ್‌ಬಾಸ್ಟನ್ (ಲಂಡನ್): ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ತಲುಪಿದೆ. ಕೊನೆಯ ದಿನವಾದ ಇಂದು ಉಭಯ ತಂಡಗಳಿಗೂ ಗೆಲ್ಲುವ ಅವಕಾಶ ಇದೆ. ಆಸ್ಟ್ರೇಲಿಯಾ ಬಳಿ ಇಂದು ಮೂರು ಸೆಷನ್ಗಳಿದ್ದು, ಕೇವಲ 174 ರನ್ ಮಾತ್ರ ಬೇಕಿದೆ. ಅತ್ತ ಇಂಗ್ಲೆಂಡ್ ಗೆಲುವಿಗೆ ಏಳು ವಿಕೆಟ್ಗಳ ಅಗತ್ಯ ಇದೆ.
-
The stage is set. Our Aussie men need 174 runs to win. 👊#Ashes pic.twitter.com/5rYS1JIJUj
— Cricket Australia (@CricketAus) June 19, 2023 " class="align-text-top noRightClick twitterSection" data="
">The stage is set. Our Aussie men need 174 runs to win. 👊#Ashes pic.twitter.com/5rYS1JIJUj
— Cricket Australia (@CricketAus) June 19, 2023The stage is set. Our Aussie men need 174 runs to win. 👊#Ashes pic.twitter.com/5rYS1JIJUj
— Cricket Australia (@CricketAus) June 19, 2023
ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 3 ವಿಕೆಟ್‌ಗೆ 107 ರನ್ ಗಳಿಸಿತ್ತು. ಇದೀಗ ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜಾ ಮತ್ತು ಸ್ಕಾಟ್ ಬೋಲ್ಯಾಂಡ್ ಜೋಡಿ ಕ್ರೀಸ್ ಗಿಳಿಸಲು ಸಿದ್ಧವಾಗಿದೆ. ನಿನ್ನೆ ಇಂಗ್ಲೆಂಡ್ನ ಬ್ಯಾಟರ್ಗಳು ಬಿರುಸಿನ ಆಟಕ್ಕೆ ಮುಂದಾಗಿ ಬೇಗ ವಿಕೆಟ್ ಒಪ್ಪಿಸಿದರು. ಎರಡನೇ ಇನ್ನಿಂಗ್ಸ್ನಲ್ಲಿ ಆಂಗ್ಲರು 273ಕ್ಕೆ ಸರ್ವಪತನ ಕಂಡರು. 7 ರನ್ ಮುನ್ನಡೆಯಿಂದ ಬ್ಯಾಟಿಂಗ್ ಆರಂಭಿಸಿದ್ದರಿಂದ ಆಸ್ಟ್ರೇಲಿಯಾಕ್ಕೆ 281 ರನ್ ಗುರಿ ನೀಡಿದ್ದರು.
ಕ್ರೀಸ್‌ನಲ್ಲಿ ಉಸ್ಮಾನ್ ಖವಾಜಾ 34 ರನ್ ಮತ್ತು ಸ್ಕಾಟ್ ಬೋಲ್ಯಾಂಡ್ 13 ರನ್ ಗಳಿಸಿ ಔಟಾಗದೇ ಉಳಿದಿದ್ದಾರೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಕಾಂಗರೂಗಳ ವಿರುದ್ಧ 2 ವಿಕೆಟ್ ಮತ್ತು ಒಲಿ ರಾಬಿನ್ಸನ್ ಒಂದು ವಿಕೆಟ್ ಪಡೆದರು.
-
- One Day left.
— Johns. (@CricCrazyJohns) June 19, 2023 " class="align-text-top noRightClick twitterSection" data="
- Australia needs 174 runs.
- England needs 7 wickets.
Ashes at its very best, moving into the final day, A classic loading. pic.twitter.com/pzP6PFHALE
">- One Day left.
— Johns. (@CricCrazyJohns) June 19, 2023
- Australia needs 174 runs.
- England needs 7 wickets.
Ashes at its very best, moving into the final day, A classic loading. pic.twitter.com/pzP6PFHALE- One Day left.
— Johns. (@CricCrazyJohns) June 19, 2023
- Australia needs 174 runs.
- England needs 7 wickets.
Ashes at its very best, moving into the final day, A classic loading. pic.twitter.com/pzP6PFHALE
ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭವೇ ಸಿಕ್ಕಿದೆ. ಆರಂಭಿಕ ಜೋಡಿ 61 ರನ್ ಜೊತೆಯಾಟ ಮಾಡಿದ್ದರು. 57 ಬಾಲ್ನಲ್ಲಿ 4 ಬೌಂಡರಿಯಿಂದ 36 ರನ್ ಗಳಿಸಿ ಆಡುತ್ತಿದ್ದ ವಾರ್ನರ್ ಒಲಿ ರಾಬಿನ್ಸನ್ಗೆ ವಿಕೆಟ್ ಕೊಟ್ಟರು. ಇದರಿಂದ ಒಂದು ಉತ್ತಮ ಆರಂಭ ಅಂತ್ಯವಾಯಿತು. ನಂತರ ಬಂದ ಮಾರ್ನಸ್ ಲಬುಶೇನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಲ್ಲದೇ ಲಬುಶೇನ್ ವಿಕೆಟ್ ತೆಗೆಯಲು ಸ್ಟೋಕ್ಸ್ ಆಕ್ರಮಣಕಾರಿ ಫೀಲ್ಡಿಂಗ್ ಸೆಟ್ ಮಾಡಿದ್ದರು. 15 ಬಾಲ್ಗಳಲ್ಲಿ 13 ರನ್ ಗಳಿಸಿ ಮಾರ್ನಸ್ ವಿಕೆಟ್ ಒಪ್ಪಿಸಿದರು. ಸ್ಟೀವ್ ಸ್ಮಿತ್ (6) ಎರಡನೇ ಇನ್ನಿಂಗ್ಸ್ನಲ್ಲಿಯೂ ಬೃಹತ್ ರನ್ ಕಲೆಹಾಕುವಲ್ಲಿ ಎಡವಿದರು.
ಮೊದಲ ಇನ್ನಿಂಗ್ಸ್ನಲ್ಲಿ ಶತಕ ದಾಖಲಿಸಿ ಇಂಗ್ಲೆಂಡ್ ಬೌಲರ್ಗಳನ್ನು ಕಾಡಿದ್ದ ಉಸ್ಮಾನ್ ಖವಾಜಾ ಕ್ರೀಸ್ನಲ್ಲಿದ್ದು, 81 ಬಾಲ್ನಲ್ಲಿ 31 ರನ್ ಗಳಿಸಿ ರಕ್ಷಣಾತ್ಮಕ ಆಟ ಆಡುತ್ತಿದ್ದಾರೆ. ಅವರ ಜೊತೆಗೆ ನಿನ್ನೆ ನೈಟ್ ಜವಾಚ್ ಮೆನ್ ಆಗಿ ಬಂದ ಸ್ಕಾಟ್ ಬೋಲ್ಯಾಂಡ್ 19 ಬಾಲ್ನಲ್ಲಿ 13 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
-
Another thrilling day of #Ashes cricket!
— ICC (@ICC) June 19, 2023 " class="align-text-top noRightClick twitterSection" data="
The Edgbaston Test is in the balance with one day remaining 👀#ENGvAUS | #WTC25https://t.co/ABClrvETRq
">Another thrilling day of #Ashes cricket!
— ICC (@ICC) June 19, 2023
The Edgbaston Test is in the balance with one day remaining 👀#ENGvAUS | #WTC25https://t.co/ABClrvETRqAnother thrilling day of #Ashes cricket!
— ICC (@ICC) June 19, 2023
The Edgbaston Test is in the balance with one day remaining 👀#ENGvAUS | #WTC25https://t.co/ABClrvETRq
ಇಂಗ್ಲೆಂಡ್ ಇಂದು ಕವಾಜಾ ಅವರ ವಿಕಟ್ಗಾಗಿ ಸಕಲ ಪ್ರಯತ್ನ ಮಾಡಲಿದೆ. ನಂತರ ಕಾಂಗರೂ ಪಡೆ ಬಳಿ ಕ್ಯಾಮರಾನ್ ಗ್ರೀನ್, ಅಲೆಕ್ಸ್ ಕ್ಯಾರಿ ಮತ್ತು ನಾಯಕ ಪ್ಯಾಟ್ ಕಮಿನ್ಸ್ ಅವರ ವಿಕೆಟ್ ಇದೆ. ಆದಷ್ಟು ಬೇಗ ವಿಕೆಟ್ಗಳನ್ನು ಉರುಳಿಸಿದರೆ. ಇಂಗ್ಲೆಂಡ್ ಗೆಲುವು ಖಚಿತ. ಇಲ್ಲವಾದಲ್ಲಿ 90 ಓವರ್ಗಳಲ್ಲಿ 174 ರನ್ ಗಳಿಸುವುದು ಆಸಿಸ್ಗೆ ಕಷ್ಟವಾಗದು.
ಇದನ್ನೂ ಓದಿ: On This Day: ದ್ರಾವಿಡ್ - ಗಂಗೂಲಿ - ಕೊಹ್ಲಿ ಟೆಸ್ಟ್ ವೃತ್ತಿಜೀವನ ಪ್ರಾರಂಭಿಸಿದ ದಿನ