ಲಾರ್ಡ್ಸ್ (ಲಂಡನ್): ಆ್ಯಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ನಾಥನ್ ಲಿಯಾನ್ ಈ ಮ್ಯಾಚ್ನಲ್ಲಿ ಸ್ಥಾನ ಪಡೆಯುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. ಟೆಸ್ಟ್ ಮಾದರಿ ಕ್ರಿಕೆಟ್ನಲ್ಲಿ ಸತತ 100 ಪಂದ್ಯಗಳನ್ನು ಆಡಿದ ಮೊದಲ ಸ್ಪೆಷಲಿಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.
ಜುಲೈ 2011ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಲಿಯಾನ್, ಕ್ರಿಕೆಟ್ ಇತಿಹಾಸದಲ್ಲಿ ಸತತ 100 ಟೆಸ್ಟ್‌ಗಳಲ್ಲಿ ಕಾಣಿಸಿಕೊಂಡ ಆರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲಸ್ಟೈರ್ ಕುಕ್ (159), ಅಲನ್ ಬಾರ್ಡರ್ (153), ಮಾರ್ಕ್ ವಾ (107), ಸುನಿಲ್ ಗವಾಸ್ಕರ್ (106) ಮತ್ತು ಬ್ರೆಂಡನ್ ಮೆಕಲಮ್ (101) ಪಟ್ಟಿಯಲ್ಲಿರುವ ಇತರ ಆಟಗಾರರು. ಸುನಿಲ್ ಗವಾಸ್ಕರ್ ಸತತ 100 ಪಂದ್ಯಗಳನ್ನು ಆಡಿದ ಭಾರತದ ಆಟಗಾರನಾಗಿದ್ದಾರೆ.
ಕಾಕತಾಳೀಯವೆಂದರೆ, 2011ರಲ್ಲಿ ಪಾದಾರ್ಪಣೆ ಮಾಡಿದ್ದ ಲಿಯಾನ್ ಅವರನ್ನು 2013ರಲ್ಲಿ ಲಾರ್ಡ್ಸ್ ಮೈದಾನದ ಪಂದ್ಯದ ನಂತರ ಕೈಬಿಡಲಾಗಿತ್ತು. ನಂತರ ತಂಡಕ್ಕೆ ಕಮ್ಬ್ಯಾಕ್ ಮಾಡಿದ ಲಿಯಾನ್ ಈ ಅದೇ ಮೈದಾನದಲ್ಲಿ ಸತತ 100 ಟೆಸ್ಟ್ ಆಡಿದ ಸಾಧನೆ ಮಾಡುತ್ತಿದ್ದಾರೆ.
-
💯 consecutive Tests!
— ICC (@ICC) June 28, 2023 " class="align-text-top noRightClick twitterSection" data="
Nathan Lyon is in elite company ✨
More ➡️ https://t.co/N44HVHxuxB pic.twitter.com/j5lFP2pysU
">💯 consecutive Tests!
— ICC (@ICC) June 28, 2023
Nathan Lyon is in elite company ✨
More ➡️ https://t.co/N44HVHxuxB pic.twitter.com/j5lFP2pysU💯 consecutive Tests!
— ICC (@ICC) June 28, 2023
Nathan Lyon is in elite company ✨
More ➡️ https://t.co/N44HVHxuxB pic.twitter.com/j5lFP2pysU
122ನೇ ಟೆಸ್ಟ್ನಲ್ಲಿ 227 ಇನ್ನಿಂಗ್ಸ್ಗಳನ್ನು ಆಡಿರುವ ಲಿಯಾನ್ 2.94 ಎಕಾನಮಿ ದರದಲ್ಲಿ 495 ವಿಕೆಟ್ ಪಡೆದುಕೊಂಡಿದ್ದಾರೆ. 4 ಬಾರಿ 10 ವಿಕೆಟ್ ಹಾಗೇಯೇ 23 ಬಾರಿ 5 ವಿಕೆಟ್ ತೆಗೆದ ಸಾಧನೆ ಇವರದು. 50 ರನ್ ಕೊಟ್ಟು 8 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಟೆಸ್ಟ್ ಬೌಲಿಂಗ್ ಆಗಿದೆ.
ಪಂದ್ಯಕ್ಕೂ ಮುನ್ನ ಮಾಧ್ಯಮದ ಜೊತೆ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, "ಒಬ್ಬ ಆಟಗಾರ ಟೆಸ್ಟ್ ಮಾದರಿಯಲ್ಲಿ ಇಷ್ಟು ನಿರಂತರತೆಯನ್ನು ಕಾಯ್ದುಕೊಳ್ಳುವುದು ಸುಲಭ ಸಾಧ್ಯವಲ್ಲ. ಅವರ ಫಿಟ್ನೆಸ್ ಮತ್ತು ಫಾರ್ಮ್ ಅವರು ಸತತವಾಗಿ ತಂಡದಲ್ಲಿ ಆಡುವಂತೆ ಮಾಡಿದೆ. ಅವರು ಎಲ್ಲ ರೀತಿಯ ಪಿಚ್ನಲ್ಲೂ ಪರಿಣಾಮಕಾರಿ ಬೌಲರ್ ಆಗಿರುವುದರಿಂದ ಮೈದಾನದ ಕಾರಣಕ್ಕೆ ಹೊರಗಿಡುವ ಅಗತ್ಯ ಬರುವುದಿಲ್ಲ" ಎಂದಿದ್ದಾರೆ.
ಪಂದ್ಯಕ್ಕೂ ಮುನ್ನ ಮಾತನಾಡಿದ ಲಿಯಾನ್, 12 ವರ್ಷಗಳ ಟೆಸ್ಟ್ ವೃತ್ತಿಜೀವನದುದ್ದಕ್ಕೂ ಕುಟುಂಬ ಮತ್ತು ಸ್ನೇಹಿತರ ಬೆಂಬಲ ನೆನೆದರು. "ಯಾವುದೇ ಅಥ್ಲೀಟ್ ದೀರ್ಘಾವಧಿಯಲ್ಲಿ ಯಶಸ್ವಿಯಾಗಬೇಕಾದರೆ, ನಿಮ್ಮ ಸುತ್ತಲೂ ನಿಜವಾಗಿಯೂ ಒಳ್ಳೆಯ ಜನರು ಇರಬೇಕು. ನನ್ನ ಕುಟುಂಬ ಅದ್ಭುತವಾಗಿದೆ. ನನಗೆ ಸಾಕಷ್ಟು ಬೆಂಬಲ, ಪ್ರೀತಿ ಮತ್ತು ಕಾಳಜಿ ಸಿಕ್ಕಿದೆ" ಎಂದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವ ಇಂಗ್ಲೆಂಡ್ ತಂಡ ಆಲ್ರೌಂಡರ್ ಮೋಯಿನ್ ಅಲಿ ಅವರನ್ನು ಕೂರಿಸಿ ಜೋಶ್ ಟಂಗ್ ಅವರನ್ನು ಸೇರಿಸಿಕೊಂಡಿದೆ. ಆಸ್ಟ್ರೇಲಿಯಾ ಸ್ಕಾಟ್ ಬೋಲ್ಯಾಂಡ್ ಅವರನ್ನು ಹೊರಗಿಟ್ಟು ಅನುಭವಿ ಸ್ಟಾರ್ಕ್ಗೆ ಅವಕಾಶ ಕೊಟ್ಟಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಎರಡು ವಿಕೆಟ್‌ಗಳಿಂದ ಗೆದ್ದ ನಂತರ ಆಸ್ಟ್ರೇಲಿಯಾ ಪ್ರಸ್ತುತ ಐದು ಪಂದ್ಯಗಳ ಆ್ಯಶಸ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.