ಲಂಡನ್: ಆ್ಯಶಸ್ ಸರಣಿಯ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಉಸ್ಮಾನ್ ಖವಾಜಾ ಅವರ 141 ರನ್, ಹೆಡ್ ಮತ್ತು ಅಲೆಕ್ಸ್ ಕ್ಯಾರಿ ಅವರ ಅರ್ಧಶತಕದ ನೆರವಿನಿಂದ 386 ರನ್ ಗಳಿಸಿ ಆಲ್ಔಟ್ ಆಗಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 8 ನಷ್ಟಕ್ಕೆ 393 ರನ್ ಗಳಿಸಿ ಡಿಕ್ಲೇರ್ ಘೋಷಣೆ ಮಾಡಿತ್ತು. 7 ರನ್ ಮುನ್ನಡೆಯೊಂದಿಗೆ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ಮಳೆಯ ಕಾರಣ ಇನ್ನಿಂಗ್ಸ್ ಬ್ರೇಕ್ ಕೊಡಲಾಗಿದ್ದು, ಆಂಗ್ಲರ ಆರಂಭಿಕರಾದ ಬೆನ್ ಡಕ್ಕೆಟ್ ಮತ್ತು ಕ್ರಾಲಿ ಕ್ರೀಸ್ನಲ್ಲಿದ್ದಾರೆ. ಇಂಗ್ಲೆಂಡ್ 6.5 ಓವರ್ನಲ್ಲಿ 26 ರನ್ ಗಳಿಸಿದೆ.
ಟಾಸ್ ಗೆದ್ದು ಇಂಗ್ಲೆಂಡ್ ಬ್ಯಾಟಿಂಗ್ ಮಾಡಿ 393 ರನ್ ಗಳಿಸಿ ಮೊದಲ ದಿನವೇ ಡಿಕ್ಲೇರ್ ಘೋಷಿಸಿತ್ತು. ಇಂಗ್ಲೆಂಡ್ ಪರ ಜೋ ರೂಟ್ 118 ರನ್ ದೊಡ್ಡ ಇನ್ನಿಂಗ್ಸ್ ಕಟ್ಟಿದ್ದರು. ಅವನ್ನು ಬಿಟ್ಟರೆ ಜಾನಿ ಬೆರ್ಸ್ಟೋವ್ 78 ಮತ್ತು ಝಾಕ್ ಕ್ರಾಲಿ 61 ರನ್ ಗಳಿಸಿದ್ದರು. ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದ್ದ ಇಂಗ್ಲೆಂಡ್ ತಂಡ ಮೊದಲ ದಿನವೇ 400ಕ್ಕೆ 7 ರನ್ ಕಡಿಮೆ ಗಳಿಸಿ ಡಿಕ್ಲೇರ್ ಹೇಳಿತ್ತು.
-
Australia are all out at the stroke of lunch.#Ashes | #WTC25 | 📝: https://t.co/ZNnKIn9jeq pic.twitter.com/0O5ymkQ9rA
— ICC (@ICC) June 18, 2023 " class="align-text-top noRightClick twitterSection" data="
">Australia are all out at the stroke of lunch.#Ashes | #WTC25 | 📝: https://t.co/ZNnKIn9jeq pic.twitter.com/0O5ymkQ9rA
— ICC (@ICC) June 18, 2023Australia are all out at the stroke of lunch.#Ashes | #WTC25 | 📝: https://t.co/ZNnKIn9jeq pic.twitter.com/0O5ymkQ9rA
— ICC (@ICC) June 18, 2023
ಮೊದಲ ದಿನದ ಕೊಮೆಯಲ್ಲಿ 4 ಓವರ್ಗಳ ಪ್ರಥಮ ಇನ್ನಿಂಗ್ಸ್ ಆಸ್ಟ್ರೇಲಿಯಾ ಆರಂಭಿಸಿತು ಅಂದು ವಿಕೆಟ್ ಕಳೆದುಕೊಂಡಿರಲಿಲ್ಲ. ಆದರೆ ಎರಡನೇ ದಿನದ ಆರಂಭದಲ್ಲಿ ಬ್ರಾಡ್ ವಾರ್ನರ್ (9) ವಿಕೆಟ್ ಪಡೆದರು. ಅವರ ಬೆನ್ನಲ್ಲೇ ಮಾರ್ನಸ್ ಲಬುಶೇನ್ ಶೂನ್ಯಕ್ಕೆ ಔಟ್ ಆದರು. ಆದರೆ ಆಸಿಸ್ನ ಇನ್ನೋರ್ವ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಏಕಾಂಗಿಯಾಗಿ ಇನ್ನಿಂಗ್ಸ್ ಕಟ್ಟಿದರು.
ಸ್ಮಿತ್ ಸಹ ಇಂಗ್ಲೆಂಡ್ ಪಿಚ್ನಲ್ಲಿ ಬಲಿಷ್ಠವಾಗಿ ನಿಲ್ಲಲಿಲ್ಲ. 59 ಬಾಲ್ ಎದುರಿಸಿ 16 ರನ್ ವಿಕೆಟ್ ಕೊಟ್ಟರು. ನಂತರ ಟ್ರಾವೆಸ್ ಹೆಡ್ ಖವಾಜಾ ಜೊತೆಗೂಡಿ ರನ್ ಕಲೆ ಹಾಕಿದರು. ಹೆಡ್ ತಮ್ಮ ಅರ್ಧಶತಕವನ್ನು ಮಾಡಿಕೊಂಡು ಇನ್ನಿಂಗ್ಸ್ ಮುಕ್ತಾಯ ಮಾಡಿದರು. ನಂತರ ಬಂದ ಗ್ರೀನ್ ಹೆಚ್ಚು ಹೊತ್ತು ಆಡಲಿಲ್ಲ. ನಂತರ ಬಂದ ಅಲೆಕ್ಸ್ ಕ್ಯಾರಿ ಖವಾಜಾ ಜೊತೆಗೆ ಉತ್ತಮ ಜೊತೆಯಾಟ ಆಡಿದರು. ಎರಡನೇ ದಿನದ ಅಂತ್ಯಕ್ಕ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತ್ತು. ಕ್ರೀಸ್ನಲ್ಲಿ ಶತಕ ಗಳಿಸಿದ (126) ಉಸ್ಮಾನ್ ಖವಾಜಾ ಮತ್ತು ಅರ್ಧಶತಕ ಗಳಿಸಿದ (52) ಅಲೆಕ್ಸ್ ಕ್ಯಾರಿ ಇದ್ದರು.
ಮೂರನೇ ದಿನವಾದ ಇಂದು ಪಂದ್ಯ ಆರಂಭವಾಗುತ್ತಿದ್ದಂತೆ ಆಸ್ಟ್ರೇಲಿಯಾದ ಕ್ಯಾರಿ ವಿಕೆಟ್ನ್ನು ಜೇಮ್ಸ್ ಆಂಡರ್ಸನ್ ಪಡೆದರು. ನಂತರ ನಾಯಕ ಪ್ಯಾಟ್ ಕಮಿನ್ಸ್ ಬಂದು ಖವಾಜಾ ಜೊತೆ ಇನ್ನಿಂಗ್ಸ್ ಕಟ್ಟಿದರು. ಖವಾಜಾ ವಿಕೆಟ್ಗಾಗಿ ಬೆನ್ ಸ್ಟೋಕ್ಸ್ ವಿಭಿನ್ನ ರೀತಿಯ ಫೀಲ್ಡಿಂಗ್ ಸೆಟ್ ಮಾಡಿ ವಿಕೆಟ್ ತೆಗೆದರು. 321 ಬಾಲ್ ಆಡಿದ ಕವಾಜಾ 14 ಬೌಂಡರಿ ಮತ್ತು 3 ಸಿಕ್ಸ್ನಿಂದ 141 ಗಳಿಸಿ ವಿಕೆಟ್ ಕೊಟ್ಟರು.
ನಂತರ ಬಾಲಂಗೋಚಿಗಳಾದ ಲಿಯಾನ್ ಮತ್ತು ಬೋಲ್ಯಾಂಡ್ ಬೇಗ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ 38 ರನ್ ಗಳಿಸಿದ್ದ ನಾಯಕ ಕಮಿನ್ಸ್ ಸಹ ವಿಕೆಟ್ ಕೊಟ್ಟರು. ಇದರಿಂದ ಆಸಿಸ್ 386ಕ್ಕೆ ಆಲ್ ಔಟ್ ಆಯಿತು. ನಿವೃತ್ತಿಯ ನಂತರ ಇಂಗ್ಲೆಂಡ್ ತಂಡ ಸೇರಿದ ಮೋಯಿನ್ ಅಲಿ 2 ವಿಕೆಟ್ ಪಡೆದರೆ, ಬ್ರಾಡ್ ಮತ್ತು ರಾಬಿನ್ಸನ್ ತಲಾ 3 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: Ashes 2023: ಕೈಗೆ ಡ್ರೈಯಿಂಗ್ ಸ್ಪ್ರೇ ಬಳಸಿದ ಮೊಯಿನ್ ಅಲಿ.. ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಿದ ಐಸಿಸಿ