ಲಾರ್ಡ್ಸ್ (ಲಂಡನ್): ಐತಿಹಾಸಿಕ ಕ್ರಿಕೆಟ್ ಮೈದಾನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಎರಡನೇ ಆ್ಯಶಸ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಹಿನ್ನಡೆ ಅನುಭವಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕಾಂಗರೂ ಪಡೆಯ ಬೌಲರ್‌ಗಳು ಹೆಚ್ಚು ಸಾಮರ್ಥ್ಯ ಪ್ರದರ್ಶಿಸಿದ್ದು, ಇಂಗ್ಲೆಂಡ್ 325 ರನ್ಗಳಿಗೆ ಸರ್ವಪತನ ಕಂಡಿತು. ಮೂರನೇ ದಿನ ಬೌಲಿಂಗ್ ಆರಂಭಿಸಿದ ಆಸಿಸ್ ಪಡೆ ಇಂಗ್ಲೆಂಡ್ 74 ರನ್ ಕಲೆಹಾಕುವಷ್ಟರಲ್ಲಿ 6 ವಿಕೆಟ್ ಉರುಳಿಸಿತು. ಇದರಿಂದಾಗಿ ಆಸ್ಟ್ರೇಲಿಯಾ 91 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ಭೋಜನ ವಿರಾಮದ ವೇಳೆಗೆ ತಂಡ ವಿಕೆಟ್ ನಷ್ಟವಿಲ್ಲದೇ 12 ರನ್ ಗಳಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ಗೆ ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಒಂದೂವರೆ ದಿನ ಆಡಿದ ತಂಡ 100.4 ಓವರ್ನಲ್ಲಿ ಸ್ಟೀವ್ ಸ್ಮಿತ್ ಅವರ ಆಕರ್ಷಕ ಶತಕ (110) ಮತ್ತು ಹೆಡ್ ಅರ್ಧಶತಕದ (77) ನೆರವಿನಿಂದ 416 ರನ್ ಗಳಿಸಿತ್ತು.
-
Quick turnaround as Australia wrap up England's innings! #WTC25 | #ENGvAUS 📝: https://t.co/liWqlPCKqn pic.twitter.com/9fUH5dlKiD
— ICC (@ICC) June 30, 2023 " class="align-text-top noRightClick twitterSection" data="
">Quick turnaround as Australia wrap up England's innings! #WTC25 | #ENGvAUS 📝: https://t.co/liWqlPCKqn pic.twitter.com/9fUH5dlKiD
— ICC (@ICC) June 30, 2023Quick turnaround as Australia wrap up England's innings! #WTC25 | #ENGvAUS 📝: https://t.co/liWqlPCKqn pic.twitter.com/9fUH5dlKiD
— ICC (@ICC) June 30, 2023
ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಝಾಕ್ ಕ್ರಾಲಿ 48, ಬೆನ್ ಡಕೆಟ್ 98 ಮತ್ತು ಆಲಿ ಪೋಪ್ 42 ರನ್ಗಳ ಸಹಾಯದಿಂದ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 61 ಓವರ್‌ಗಳಲ್ಲಿ 278 ರನ್ ಗಳಿಸಿತ್ತು. ಇಂಗ್ಲೆಂಡ್ ತನ್ನ ಬಾಸ್ಬಾಲ್ ನೀತಿ ಅನುಸರಿಸಿ 61 ಓವರ್‌ಗಳಲ್ಲಿ 300 ರನ್ ಸನಿಹ ಸ್ಕೋರ್ ಕಲೆಹಾಕಿತ್ತು.
ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ (45*) ಮತ್ತು ಬೆನ್ ಸ್ಟೋಕ್ಸ್ (17*) ಇದ್ದರು. ಮೂರನೇ ದಿನವಾದ ಇಂದು ಇಂಗ್ಲೆಂಡ್ 138 ರನ್ಗಳ ಹಿನ್ನಡೆಯೊಂದಿಗೆ ಆರು ವಿಕೆಟ್ಗಳನ್ನು ಉಳಿಸಿಕೊಂಡಿತ್ತು. ಆದರೆ ಇಂದು ಕ್ರೀಸ್ಗೆ ಬರುತ್ತಿದಂತೆ ಎರಡನೇ ಬಾಲ್ನಲ್ಲಿ ನಾಯಕ ಬೆನ್ ಸ್ಟೋಕ್ಸ್ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ 5 ರನ್ ಗಳಿಸಿ ಅರ್ಧಶತಕ ಮಾಡಿಕೊಂಡು ಹ್ಯಾರಿ ಬ್ರೂಕ್ ಸಹ ಔಟಾದರು. ಜಾನಿ ಬೈರ್‌ಸ್ಟೋವ್ ಮತ್ತು ಸ್ಟುವರ್ಟ್ ಬ್ರಾಡ್ ಕ್ರಮವಾಗಿ 16, 12 ರನ್ ಗಳಿಸಿ ವಿಕೆಟ್ ಕೊಟ್ಟರು. ಆಸ್ಟ್ರೇಲಿಯಾದ ಪ್ರಬಲ ದಾಳಿಯ ಮುಂದೆ ಇಂಗ್ಲೆಂಡ್ನ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಹೆಚ್ಚೊತ್ತು ನಿಲ್ಲಲಿಲ್ಲ.
-
It's Lunch time at Lord's!#WTC25 | #ENGvAUS 📝: https://t.co/TvNVw1baJk pic.twitter.com/lCa920hxj5
— ICC (@ICC) June 30, 2023 " class="align-text-top noRightClick twitterSection" data="
">It's Lunch time at Lord's!#WTC25 | #ENGvAUS 📝: https://t.co/TvNVw1baJk pic.twitter.com/lCa920hxj5
— ICC (@ICC) June 30, 2023It's Lunch time at Lord's!#WTC25 | #ENGvAUS 📝: https://t.co/TvNVw1baJk pic.twitter.com/lCa920hxj5
— ICC (@ICC) June 30, 2023
ಕೊನೆಯಲ್ಲಿ ಬಾಲಂಗೋಚಿಗಳನ್ನು ಹೆಚ್ಚೊತ್ತು ಕ್ರೀಸ್ನಲ್ಲಿ ನಿಲ್ಲಲು ಆಸಿಸ್ ಬೌಲರ್‌ಗಳು ಬಿಡಲಿಲ್ಲ. ಆಲಿ ರಾಬಿನ್ಸನ್ 9 ಮತ್ತು ಜೋಶ್ ಟಂಗ್ 1 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು. ಇದರಿಂದ ಇಂಗ್ಲೆಂಡ್ ಇಂದು ಮೊದಲ ಸೆಷನ್ ಪೂರ್ಣವಾಗಿ ಆಡುವ ಮುನ್ನವೇ ಕೇವಲ 74 ರನ್ ಗಳಿಸಿ ಆರು ವಿಕೆಟ್ ಕಳೆದುಕೊಂಡಿತು. ಆಸ್ಟ್ರೇಲಿಯಾ ಪರ ಸ್ಟಾರ್ಕ್ 3, ಜೋಶ್ ಹ್ಯಾಜಲ್‌ವುಡ್ ಮತ್ತು ಟ್ರಾವಿಸ್ ಹೆಡ್ ತಲಾ ಎರಡು ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್, ನಾಥನ್ ಲಿಯಾನ್ ಮತ್ತು ಕ್ಯಾಮೆರಾನ್ ಗ್ರೀನ್ ಒಂದೊಂದು ವಿಕೆಟ್ ಕಿತ್ತರು.
ಇದನ್ನೂ ಓದಿ: England vs Australia, Ashes 2nd Test: ಆ್ಯಶಸ್ ಸರಣಿ- ಲಾರ್ಡ್ಸ್‌ನಲ್ಲಿ ದಾಖಲೆಗಳ ಸುರಿಮಳೆ ಸೃಷ್ಟಿಸಿದ ಸ್ಟೀವ್ ಸ್ಮಿತ್!