ಅಡಿಲೇಡ್ : 2ನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲೂ ಆಂಗ್ಲರ ವಿರುದ್ಧ ಅಧಿಪತ್ಯ ಸಾಧಿಸಿದ ಅತಿಥೇಯ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು ಕೇವಲ 192 ರನ್ಗಳಿಗೆ ಆಲೌಟ್ ಮಾಡುವ ಮೂಲಕ 275 ರನ್ಗಳ ಭರ್ಜರಿ ಜಯ ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 2-0ಯಲ್ಲಿ ಮುನ್ನಡೆ ಪಡೆದಿದೆ.
468 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ 4ನೇ ದಿನ 82 ರನ್ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು. ಬೆನ್ ಸ್ಟೋಕ್ಸ್ 3 ರನ್ಗಳಿಸಿ ಮೈದಾನದಲ್ಲಿದ್ದರು. ಕೊನೆಯ ದಿನವಾದ ಇಂದು ಬ್ಯಾಟಿಂಗ್ ಮುಂದುವರಿಸಿದ ಆಂಗ್ಲರು ದಿನದಾಟದ 3ನೇ ಓವರ್ನಲ್ಲೇ ಹೊಸ ಬ್ಯಾಟರ್ ಪೋಪ್(4) ವಿಕೆಟ್ ಕಳೆದುಕೊಂಡಿತು.
ಬೃಹತ್ ಮೊತ್ತದ ಗುರಿಯಾಗಿದ್ದರಿಂದ ಇಂಗ್ಲೆಂಡ್ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಶತಪ್ರಯತ್ನ ಪಟ್ಟಿತು. ಆದರೆ, ಆಸ್ಟ್ರೇಲಿಯಾ ಬೌಲರ್ಗಳನ್ನು ಜೋಶ್ ಬಟ್ಲರ್ ಹೊರೆತುಪಡಿಸಿ ಯಾರೊಬ್ಬರು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಬಟ್ಲರ್ ಮತ್ತು ವೋಕ್ಸ್ ಬಿಟ್ಟರೆ ಸ್ವಲ್ಪ ಸಮಯ ಆಸೀಸ್ ಬೌಲರ್ಗಳನ್ನು ಕಾಡಿದರಾದರೂ ವೋಕ್ಸ್ 44(97) ರನ್ಗಳಿಸಿ ಔಟಾಗುತ್ತಿದ್ದಂತೆ ಆಂಗ್ಲರಿಗೆ ಸೋಲು ಖಚಿತವಾಯಿತು.
ಬೆನ್ ಸ್ಟೋಕ್ಸ್ 77 ಎಸೆತಗಳಲ್ಲಿ 12, ರಾಬಿನ್ಸನ್ 39 ಎಸೆತಗಳಲ್ಲಿ 8, ಜೋಶ್ ಆ್ಯಂಡರ್ಸನ್ 2 ರನ್ಗಳಿಸಿ ಔಟಾದರು. ಪಂದ್ಯವನ್ನು ಡ್ರಾಗೊಳಿಸಲು ಸಾಕಷ್ಟು ಹೋರಾಟ ನಡೆಸಿದ ಜೋಶ್ ಬಟ್ಲರ್ ಹಿಟ್ ವಿಕೆಟ್ ಆಗಿ ನಿರಾಶೆ ಅನುಭವಿಸಿದರು. ಅವರು 207 ಎಸೆತಗಳಲ್ಲಿ 26 ರನ್ಗಳಿಸಿದ್ದರು.
-
Jhye Richardson claims a five-wicket haul to set up a 275-run victory for Australia!
— ICC (@ICC) December 20, 2021 " class="align-text-top noRightClick twitterSection" data="
The hosts go 2-0 up in the #Ashes series 💪#AUSvENG | #WTC23 pic.twitter.com/f6L2vRjH2l
">Jhye Richardson claims a five-wicket haul to set up a 275-run victory for Australia!
— ICC (@ICC) December 20, 2021
The hosts go 2-0 up in the #Ashes series 💪#AUSvENG | #WTC23 pic.twitter.com/f6L2vRjH2lJhye Richardson claims a five-wicket haul to set up a 275-run victory for Australia!
— ICC (@ICC) December 20, 2021
The hosts go 2-0 up in the #Ashes series 💪#AUSvENG | #WTC23 pic.twitter.com/f6L2vRjH2l
ಆಸ್ಟ್ರೇಲಿಯಾ ಪರ ಜೇ ರಿಚರ್ಡ್ಸನ್ 42ಕ್ಕೆ 5, ಮಿಚೆಲ್ ಸ್ಟಾರ್ಕ್ 43ಕ್ಕೆ 2, ನೇಥನ್ ಲಿಯಾನ್ 55ಕ್ಕೆ 2 ವಿಕೆಟ್ ಪಡೆದರು. ಡೇ ಅಂಡ್ ನೈಟ್ ಟೆಸ್ಟ್ನಲ್ಲಿ ಸೋಲೇ ಕಂಡಿಲ್ಲದ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ನಲ್ಲಿ 473 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತ್ತು.
ಲಾಬುಶೇನ್ 103, ಡೇವಿಡ್ ವಾರ್ನರ್ 85 ಮತ್ತು ನಾಯಕ ಸ್ಮಿತ್ 93 ರನ್ಗಳಿಸಿದ್ದರು. ಇದಕ್ಕುತ್ತರವಾಗಿ ಇಂಗ್ಲೆಂಡ್ 236ಕ್ಕೆ ಆಲೌಟ್ ಆಗಿತ್ತು. ಆಸೀಸ್ 2ನೇ ಇನ್ನಿಂಗ್ಸ್ನಲ್ಲಿ 230 ರನ್ಗಳಿಗೆ ಡಿಕ್ಲೇರ್ ಘೋಷಿಸಿ 468 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 103 ಮತ್ತು 2ನೇ ಇನ್ನಿಂಗ್ಸ್ನಲ್ಲಿ 51 ರನ್ಗಳಿಸಿದ್ದ ಮಾರ್ನಸ್ ಲಾಬುಶೇನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನೂ ಓದಿ:ಮತ್ತೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ನ್ಯೂಜಿಲ್ಯಾಂಡ್, 5 ತಿಂಗಳ ಅಂತರದಲ್ಲಿ 15 ಪಂದ್ಯಗಳ್ನಾಡಲಿರುವ ಕಿವೀಸ್