ಕೊಲಂಬೊ : ಆರಂಭಿಕ ಬ್ಯಾಟ್ಸ್ಮನ್ ಆವಿಷ್ಕಾ ಫರ್ನಾಂಡೊ ಅವರ ಅರ್ಧಶತಕದ ಬಲದಿಂದ ಶ್ರೀಲಂಕಾ ತಂಡ 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 276 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದ ಶ್ರೀಲಂಕಾ ತಂಡಕ್ಕೆ ಆರಂಭಿಕರಾದ ಫರ್ನಾಂಡೊ ಮತ್ತು ಮಿನೋದ್ ಭನುಕ 77 ರನ್ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿದರು.
36 ರನ್ಗಳಿಸಿದ್ದ ಭನುಕ ವಿಕೆಟ್ ಪಡೆಯುವ ಮೂಲ ಚಹಲ್ ಭಾರತಕ್ಕೆ ಮೊದಲ ಬ್ರೇಕ್ ನೀಡಿದರು. ನಂತರ ಬಂದ ರಾಜಪಕ್ಷ ಕೂಡ ಅದೇ ಓವರ್ನಲ್ಲೇ ಗೋಲ್ಡನ್ ಡಕ್ ಆದರು.
-
Sri Lanka end their innings on 275/9 💥
— ICC (@ICC) July 20, 2021 " class="align-text-top noRightClick twitterSection" data="
Will this score be enough for the hosts to level the series?#SLvIND | https://t.co/mazzKoaauY pic.twitter.com/SYKbz3hEqG
">Sri Lanka end their innings on 275/9 💥
— ICC (@ICC) July 20, 2021
Will this score be enough for the hosts to level the series?#SLvIND | https://t.co/mazzKoaauY pic.twitter.com/SYKbz3hEqGSri Lanka end their innings on 275/9 💥
— ICC (@ICC) July 20, 2021
Will this score be enough for the hosts to level the series?#SLvIND | https://t.co/mazzKoaauY pic.twitter.com/SYKbz3hEqG
4ನೇ ಕ್ರಮಾಂಕದಲ್ಲಿ ಬಂದ ಧನಂಜಯ ಡಿಸಿಲ್ವಾ ಫರ್ನಾಂಡೊ ಜೊತೆಗೂಡಿ 3ನೇ ವಿಕೆಟ್ ಜೊತೆಯಾಟದಲ್ಲಿ 47 ರನ್ ಸೇರಿಸಿದರು. 71 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 50 ರನ್ಗಳಿಸಿದ್ದ ಫರ್ನಾಂಡೊ ಭುವನೇಶ್ವರ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು.
10 ರನ್ಗಳ ಅಂತರದಲ್ಲಿ 45 ಎಸೆತಗಳಲ್ಲಿ 32 ರನ್ಗಳಿಸಿ ಎಚ್ಚರಿಕೆಯಿಂದ ಆಡುತ್ತಿದ್ದ ಡಿಸಿಲ್ವಾ ಅವರು ಚಹಾರ್ ಬೌಲಿಂಗ್ನಲ್ಲಿ ಬಲಿಯಾದರು. ನಾಯಕ ಶನಕ 16 ಮತ್ತು ಹಸರಂಗ ಕೇವಲ 8 ರನ್ಗಳಿಗೆ ಸೀಮಿತವಾದರು.
ಮೊದಲ ಪಂದ್ಯದಲ್ಲಿ ಮಿಂಚಿದ್ದ ಆಲ್ರೌಂಡರ್ ಚರಿತ್ ಅಸಲಂಕಾ 68 ಎಸೆತಗಳಲ್ಲಿ 6 ಬೌಂಡರಿ ಸಹಿತ 65 ರನ್ ಮತ್ತು ಕರುಣರತ್ನೆ ಕೊನೆಯಲ್ಲಿ ಅಬ್ಬರಿಸಿ 33 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 44 ರನ್ಗಳಿಸಿ ತಂಡದ ಮೊತ್ತವನ್ನು 250 ರನ್ ಗಡಿ ದಾಟಿಸಿದರು.
ಭಾರತದ ಪರ ಭುವನೇಶ್ವರ್ ಕುಮಾರ್ 54ಕ್ಕೆ3, ದೀಪಕ್ ಚಹಾರ್, 53ಕ್ಕೆ2, ಯುಜ್ವೇಂದ್ರ ಚಹಲ್ 50ಕ್ಕೆ 3 ವಿಕೆಟ್ ಪಡೆದು ಶ್ರೀಲಂಕಾ ತಂಡದ ರನ್ಗತಿಗೆ ಕಡಿವಾಣ ಹಾಕಿದರು.
ಇದನ್ನು ಓದಿ: ICC Rankings : ಏಕದಿನದಲ್ಲಿ ಮಿಥಾಲಿ, ಟಿ20ಯಲ್ಲಿ ಶೆಫಾಲಿ ನಂಬರ್ 1