ETV Bharat / sports

ಭಾರತದ "B Team" ಶ್ರೀಲಂಕಾಗೆ ಕಳುಹಿಸಿ ಅವಮಾನ: ಶ್ರೀಲಂಕಾ ಮಾಜಿ ಕ್ಯಾಪ್ಟನ್ ಆಕ್ರೋಶ​​

author img

By

Published : Jul 2, 2021, 4:21 PM IST

ಲಂಕಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಯಂಗ್ ಇಂಡಿಯಾ ಭಾಗಿಯಾಗಲಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಶ್ರೀಲಂಕಾದ ಮಾಜಿ ಕ್ಯಾಪ್ಟನ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Team india
Team india

ಕೊಲಂಬೊ(ಶ್ರೀಲಂಕಾ): ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್​ನಲ್ಲಿ ಆರಂಭಗೊಳ್ಳಲಿರುವ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲಿದೆ. ಇದರ ಮಧ್ಯೆ ಶಿಖರ್ ಧವನ್​ ನೇತೃತ್ವದ ಯಂಗ್ ಇಂಡಿಯಾ ತಂಡ ಶ್ರೀಲಂಕಾ ವಿರುದ್ಧ ಸೀಮಿತ ಓವರ್​ಗಳ ಪಂದ್ಯದಲ್ಲಿ ಭಾಗಿಯಾಗಲಿದೆ. ಇದೇ ವಿಚಾರವನ್ನಿಟ್ಟುಕೊಂಡು ಶ್ರೀಲಂಕಾದ ಮಾಜಿ ಕ್ಯಾಪ್ಟನ್ ಇದೀಗ ಅಲ್ಲಿನ ಕ್ರಿಕೆಟ್ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Arjuna Ranatunga
ಶ್ರೀಲಂಕಾ ಮಾಜಿ ಕ್ಯಾಪ್ಟನ್​ ರಣತುಂಗಾ

ಭಾರತೀಯ ಕ್ರಿಕೆಟ್​ ಮಂಡಳಿ ಎರಡನೇ ದರ್ಜೆಯ ಕ್ರಿಕೆಟ್ ತಂಡವನ್ನು ಶ್ರೀಲಂಕಾಗೆ ಕಳುಹಿಸಿ ಅವಮಾನ ಮಾಡಿದೆ ಎಂದು ಶ್ರೀಲಂಕಾದ ಮಾಜಿ ಕ್ಯಾಪ್ಟನ್​ ಅರ್ಜುನ್​ ರಣತುಂಗಾ ಹೇಳಿದ್ದಾರೆ. 1996ರ ವಿಶ್ವಕಪ್​ ವಿಜೇತ ತಂಡದ ಕ್ಯಾಪ್ಟನ್​ ಅರ್ಜುನ್​ ರಣತುಂಗಾ ಅಲ್ಲಿನ ಕ್ರೀಡಾ ಸಚಿವರ ವಿರುದ್ಧ ಕೂಡ ಆಕ್ರೋಶ ಹೊರಹಾಕಿದ್ದು, ಭಾರತದಿಂದ ಕ್ರಿಕೆಟ್​ ಆಡಲು ಇಲ್ಲಿಗೆ ಬಂದಿರುವ ತಂಡ ಬಲಿಷ್ಠವಾಗಿಲ್ಲ. ಅದು ಎರಡನೇ ದರ್ಜೆ ತಂಡವಾಗಿದೆ. ಇದರ ಬಗ್ಗೆ ನಮ್ಮ ಕ್ರೀಡಾ ಸಚಿವರು ಅಥವಾ ಕ್ರಿಕೆಟ್​ ಮಂಡಳಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

Team india
ಅಭ್ಯಾಸದಲ್ಲಿ ನಿರತರಾಗಿರುವ ಟೀಂ ಇಂಡಿಯಾ

ಇದನ್ನೂ ಓದಿರಿ: ಬಂದೇ ಬಿಡ್ತು ಆಗಸದಲ್ಲಿ ಹಾರಾಡೋ ಕಾರು! ಇದು ಗಂಟೆಗೆ ಎಷ್ಟು ಕಿ.ಮೀ ಓಡುತ್ತೆ ಗೊತ್ತೇ?

ಶ್ರೀಲಂಕಾ ಐಸಿಸಿ ಶ್ರೇಯಾಂಕದಲ್ಲಿ ಕೆಳ ಮಟ್ಟದಲ್ಲಿರಬಹುದು. ಆದರೆ ಕ್ರಿಕೆಟ್​ನಿಂದ ನಾವು ಗುರುತಿಸಿಕೊಂಡಿದ್ದೇವೆ. ಈ ರೀತಿಯಾಗಿ ನಡೆದುಕೊಂಡಿರುವ ಭಾರತದ 'B team' ಜೊತೆ ನಾವು ಕ್ರಿಕೆಟ್​ ಆಡಬಾರದು ಎಂದು ಹೇಳಿದ್ದಾರೆ. ಜತೆಗೆ ಇದು ಶ್ರೀಲಂಕಾ ಕ್ರಿಕೆಟ್​ಗೆ ಮಾಡಿರುವ ಅವಮಾನ ಎಂದಿದ್ದಾರೆ. 1996ರ ಸಮಯದಲ್ಲಿ ಶ್ರೀಲಂಕಾ ವಿಶ್ವಕಪ್​ ಗೆದ್ದ ಸಂದರ್ಭದಲ್ಲಿ ರಣತುಂಗಾ ತಂಡದ ಕ್ಯಾಪ್ಟನ್​​ ಆಗಿದ್ದರು. ಶಿಖರ್​ ಧವನ್ ನೇತೃತ್ವದ ಯಂಗ್ ಇಂಡಿಯಾ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದ್ದು, ಮುಂದಿನ ತಿಂಗಳಿಂದ ಲಂಕಾ ವಿರುದ್ಧ ಏಕದಿನ ಹಾಗೂ ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಇದರಲ್ಲಿ ಹೆಚ್ಚಾಗಿ ಯುವ ಪಡೆ ಇದೆ. ಟೀಂ ಇಂಡಿಯಾದ ದಿ ವಾಲ್ ಖ್ಯಾತಿಯ ರಾಹುಲ್​ ದ್ರಾವಿಡ್​ ಕೋಚ್​ ಆಗಿದ್ದಾರೆ.

Team india
ಕೋಚ್​ ದ್ರಾವಿಡ್ ಜೊತೆ ಶಿಖರ್​ ಧವನ್​

ಸದ್ಯ ಇಂಗ್ಲೆಂಡ್​ ವಿರುದ್ಧ ಶ್ರೀಲಂಕಾ ಕ್ರಿಕೆಟ್​ ಪಂದ್ಯಗಳನ್ನಾಡುತ್ತಿದ್ದು, ಟಿ-20 ಸರಣಿ ಸೋತಿರುವ ತಂಡ ಈಗಾಗಲೇ ಆಡಿರುವ ಎರಡು ಏಕದಿನ ಪಂದ್ಯಗಳಲ್ಲೂ ಹೀನಾಯ ಸೋಲು ಅನುಭವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.