ಲಂಡನ್: ಗಾಯದಿಂದ ಚೇತರಿಸಿಕೊಂಡು ಕೌಂಟಿ ಕ್ರಿಕೆಟ್ನಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ಗೆ ಮತ್ತೊತ್ತೆ ಮೊಣಕೈ ನೋವು ಕಾನಿಸಿಕೊಂಡಿದ್ದು, ಜೂನ್ ಮೊದಲ ವಾರದಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುವುದು ಅನುಮಾನ ಎನ್ನಲಾಗುತ್ತಿದೆ.
ಸಸೆಕ್ಸ್ ಪರ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಕೆಂಟ್ ವಿರುದ್ಧ ಆಡುವಾಗ ದೀರ್ಘಕಾಲ ಕಾಡಿದ್ದ ಮೊಣಕೈ ನೋವು ಮತ್ತೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
26 ವರ್ಷದ ವೇಗಿ ಭಾರತದ ವಿರುದ್ಧ ಸರಣಿಯಲ್ಲಿ ಪಾಲ್ಗೊಂಡಿದ್ದ ವೇಳೆ ಹಳೆಯ ನೋವು ಕಾಣಿಸಿಕೊಂಡ ಹಿನ್ನೆಲೆ ಕೊನೆಯ 2 ಪಂದ್ಯಗಳಿಂದ ಹೊರ ಬಿದ್ದಿದ್ದರು. ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಐಪಿಎಲ್ನಿಂದಲೂ ಹೊರ ಉಳಿದಿದ್ದರು.
ಆರ್ಚರ್ ಕೌಂಟಿ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 29 ರನ್‌ಗಳಿಗೆ 2 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 5 ಓವರ್ ಮಾತ್ರ ಬೌಲಿಂಗ್ ಮಾಡಿ, ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.
ಜೋಫ್ರಾ ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ, ನಾಯಕನಿಗೆ ಮತ್ತು ತಂಡಕ್ಕೆ ನಿರಾಶೆಯಾಗುತ್ತದೆ. ಆದರೆ ಕ್ರೀಡೆಯಲ್ಲಿ ಇದು ಸಂಭವಿಸುತ್ತದೆ. ಕ್ರೀಡೆಗಳಲ್ಲಿ ಜನರು ಅದನ್ನು ಅನುಭವಿಸಲೇಬೇಕು. ಅದೇ ಜೀವನ, ಅದೇ ಕ್ರೀಡೆ. ಸದ್ಯಕ್ಕೆ ಅವರು ಹೊರಗುಳಿಯಲು ಸಿದ್ಧರಿದ್ದು, ಸಸೆಕ್ಸ್ ಗೆಲ್ಲಬೇಕೆಂದು ಬಯಸುತ್ತಿದ್ದಾರೆ. ಈ ಪಂದ್ಯದಲ್ಲಿ ಆಡಲು ಅವರಿಗೆ ಇಸಿಬಿ ಅನುಮತಿ ನೀಡಬೇಕಿತ್ತು. ಏಕೆಂದರೆ ಅವರು ನಮ್ಮ ಆಟಗಾರರಲ್ಲ. ಇಸಿಬಿ ಅನುಮತಿ ನೀಡಿದರೆ ಅವರು ಮುಂದುವರಿಯಲಿದ್ದಾರೆ ಎಂದು ಸಸೆಕ್ಸ್ ಕೋಚ್ ಇಯಾನ್ ಸಾಲಿಸ್‌ಬರಿ ತಿಳಿಸಿದ್ದಾರೆ.
ಇದನ್ನು ಓದಿ:ನಾನು ಮೊದಲಿಗಿಂತ ಪ್ರತಿದಿನ ಬಲಿಷ್ಠನಾಗುತ್ತಿದ್ದೇನೆ: ಕ್ರಿಕೆಟಿಗ ಟಿ.ನಟರಾಜನ್