ಮುಂಬೈ: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ದೇಶದ ಪ್ರತಿಷ್ಠಿತ ಸೆಲೆಬ್ರೆಟಿ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಕಾಲಿಟ್ಟಲೆಲ್ಲಾ ಸಾವಿರಾರು ಜನ ಸೇರುವುದರಿಂದ ಅನಿವಾರ್ಯವಾಗಿ ಬಾಡಿಗಾರ್ಡ್ ಅಗತ್ಯ ಬೇಕೆ ಬೇಕು. ಸೆಲೆಬ್ರೆಟಿಗಳು ತಮ್ಮನ್ನು ನಿತ್ಯ ರಕ್ಷಣೆ ಮಾಡುವ ಬಾಡಿಗಾರ್ಡ್ಗೆ ವೇತನವನ್ನು ಕೂಡ ತಮ್ಮ ಅಂತಸ್ಥಿಗೆ ತಕ್ಕ ಹಾಗೆ ನೀಡುತ್ತಿದ್ದಾರೆ.
ಭಾರತದ ಪ್ರಸಿದ್ಧ ಕ್ರಿಕಟಿಗ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಬಾಡಿಗಾರ್ಡ್ ಪ್ರಕಾಶ್ ಸಿಂಗ್ ಅಲಿಯಾಸ್ ಸೋನುಗೆ ಭಾರಿ ವೇತನವನ್ನೇ ನೀಡುತ್ತಿದ್ದಾರೆ. ಸೋನು ಕೆಲವು ವರ್ಷಗಳಿಂದ ಅನುಷ್ಕಾ ಶರ್ಮಾ ಅವರಿಗೆ ಬಾಡಿಗಾರ್ಡ್ ಆಗಿದ್ದಾರೆ. ಅನುಷ್ಕಾ ಕ್ರಿಕೆಟರ್ ಕೊಹ್ಲಿಯನ್ನು ವಿವಾಹವಾದ ಬಳಿಕ ಇಬ್ಬರಿಗೂ ಸಾರ್ವಜನಿಕ ಸ್ಥಳಗಳಲ್ಲಿ ತೆರಳುವಾಗ ರಕ್ಷಣೆ ನೀಡುತ್ತಿರುತ್ತಾರೆ.
ಸೋನು ಜೊತೆ ಬಾಂಧವ್ಯ ಹೊಂದಿರುವ ಅನುಷ್ಕಾ ಮತ್ತು ಕೊಹ್ಲಿ ಆತನನ್ನು ಕೇವಲ ಬಾಡಿಗಾರ್ಡ್ ಎಂದು ಭಾವಿಸದೆ ಮನೆಯ ಸದಸ್ಯನಂತೆ ನೋಡಿಕೊಳ್ಳುತ್ತಿದ್ದಾರೆ. ಸಿನಿಮಾ ಸೆಟ್ಗಳಲ್ಲಿ ಅನುಷ್ಕಾ ಶರ್ಮಾ ಆತನ ಬರ್ತಡೆಯನ್ನು ಆಚರಿಸಿರುವುದೇ ಇದಕ್ಕೆ ಸಾಕ್ಷಿ.
ವರ್ಷಕ್ಕೆ 1.2 ಕೋಟಿ ರೂ ವೇತನ
ಪ್ರತಿಷ್ಠಿತ ವೆಬ್ಸೈಟ್ ಪ್ರಕಾರ ಪ್ರಕಾಶ್ ಸಿಂಗ್ ಅಲಿಯಾಸ್ ಸೋನು ವಾರ್ಷಿಕವಾಗಿ 1.2 ಕೋಟಿ ರೂ ವೇತನ ಪಡೆಯುತ್ತಿದ್ದಾರೆ. ಅಂದರೆ ಬರೋಬ್ಬರಿ ತಿಂಗಳಿಗೆ 10 ಲಕ್ಷ ರೂ ವೇತನ ಪಡೆಯುತ್ತಿದ್ದಾರೆ. ಕೆಲವು ವರದಿಗಳ ಪ್ರಕಾರ ಸೋನು ವೇತನ ಕೆಲವು ಕಂಪನಿಗಳ ಸಿಇಒಗಳಿಗಿಂತಲೂ ಅಧಿಕ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ವಿಶ್ರಾಂತಿಗೆ ಕೊಹ್ಲಿ ಮನವಿ ಮಾಡಿಲ್ಲ: ಬಿಸಿಸಿಐ ಅಧಿಕಾರಿ