ಬೆಂಗಳೂರು: ಪ್ರಶಸ್ತಿಗಾಗಿ ಪ್ರತೀ ವರ್ಷ ಪರಿತಪಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ತಂಡದಲ್ಲಿ ಮೇಜರ್ ಸರ್ಜರಿಯನ್ನು ಮಾಡಿದೆ. ಈ ಹಿಂದೆಯೇ ಕೋಚ್ ಸಂಜಯ್ ಬಂಗಾರ್ ಅವರನ್ನು ಕೈ ಬಿಟ್ಟಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಅವರ ಜೊತೆ ಮೈಕ್ ಹೆಸ್ಸನ್ ಅವರನ್ನು ಕೈಬಿಡಲಾಗಿತ್ತು. ಈಗ ಸಂಜಯ್ ಬಂಗಾರು ಅವರ ಜಾಗಕ್ಕೆ ನೂತನ ಕೋಚ್ನ ನೇಮಕವಾಗಿದ್ದು, ಮುಂದಿನ ಬಾರಿ ಐಪಿಎಲ್ನಲ್ಲಿ ಆರ್ಸಿಬಿ ತಂಡದಿಂದ ಹೊಸ ನಿರೀಕ್ಷೆಗಳು ತಂಡದ ಅಭಿಮಾನಿಗಳಲ್ಲಿ ಹುಟ್ಟಿಸಿದೆ.
-
We are beyond thrilled to welcome 𝗜𝗖𝗖 𝗛𝗮𝗹𝗹 𝗼𝗳 𝗙𝗮𝗺𝗲𝗿 and 𝗧𝟮𝟬 𝗪𝗼𝗿𝗹𝗱 𝗖𝘂𝗽 winning coach 𝐀𝐧𝐝𝐲 𝐅𝐥𝐨𝐰𝐞𝐫 as the 𝗛𝗲𝗮𝗱 𝗖𝗼𝗮𝗰𝗵 of RCB Men’s team. 🤩🙌
— Royal Challengers Bangalore (@RCBTweets) August 4, 2023 " class="align-text-top noRightClick twitterSection" data="
Andy’s experience of coaching IPL & T20 teams around the world, and leading his teams to titles… pic.twitter.com/WsMYGCkcYT
">We are beyond thrilled to welcome 𝗜𝗖𝗖 𝗛𝗮𝗹𝗹 𝗼𝗳 𝗙𝗮𝗺𝗲𝗿 and 𝗧𝟮𝟬 𝗪𝗼𝗿𝗹𝗱 𝗖𝘂𝗽 winning coach 𝐀𝐧𝐝𝐲 𝐅𝐥𝐨𝐰𝐞𝐫 as the 𝗛𝗲𝗮𝗱 𝗖𝗼𝗮𝗰𝗵 of RCB Men’s team. 🤩🙌
— Royal Challengers Bangalore (@RCBTweets) August 4, 2023
Andy’s experience of coaching IPL & T20 teams around the world, and leading his teams to titles… pic.twitter.com/WsMYGCkcYTWe are beyond thrilled to welcome 𝗜𝗖𝗖 𝗛𝗮𝗹𝗹 𝗼𝗳 𝗙𝗮𝗺𝗲𝗿 and 𝗧𝟮𝟬 𝗪𝗼𝗿𝗹𝗱 𝗖𝘂𝗽 winning coach 𝐀𝐧𝐝𝐲 𝐅𝐥𝐨𝐰𝐞𝐫 as the 𝗛𝗲𝗮𝗱 𝗖𝗼𝗮𝗰𝗵 of RCB Men’s team. 🤩🙌
— Royal Challengers Bangalore (@RCBTweets) August 4, 2023
Andy’s experience of coaching IPL & T20 teams around the world, and leading his teams to titles… pic.twitter.com/WsMYGCkcYT
ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡದ ಮುಖ್ಯ ಕೋಚ್ ಆಗಿ ಆಂಡಿ ಫ್ಲವರ್ ನೇಮಕಗೊಂಡಿದ್ದಾರೆ. 2023 ರ ಐಪಿಎಲ್ ವರೆಗೆ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರಿಂದ ಫ್ಲವರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 16ನೇ ಐಪಿಎಲ್ ಆವೃತ್ತಿಯ ನಂತರ ಆರ್ಸಿಬಿ ತಂಡದ ಆಂತರಿಕ ಪರಿಶೀಲನೆಯ ಭಾಗವಾಗಿ ಬಂಗಾರ ಹೊರತುಪಡಿಸಿ, ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿದ್ದ ಮೈಕ್ ಹೆಸ್ಸನ್ ಅವರ ಒಪ್ಪಂದವನ್ನು ಅವರು ನವೀಕರಿಸುತ್ತಿಲ್ಲ ಎಂದು ಫ್ರಾಂಚೈಸ್ ದೃಢಪಡಿಸಿತ್ತು.
"ನಾನು ಗೌರವಿಸುವ ಇಬ್ಬರು ತರಬೇತುದಾರರಾದ ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಅವರ ಕೆಲಸವನ್ನು ನಾನು ಗುರುತಿಸುತ್ತೇನೆ ಮತ್ತು ಆರ್ಸಿಬಿ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸವಾಲನ್ನು ನಾನು ಎದುರು ನೋಡುತ್ತಿದ್ದೇನೆ. ಫಾಫ್ ಜೊತೆ ಮತ್ತೆ ಒಂದಾಗಲು ನಾನು ವಿಶೇಷವಾಗಿ ಉತ್ಸುಕನಾಗಿದ್ದೇನೆ. ನಾವು ಈ ಹಿಂದೆ ಚೆನ್ನಾಗಿ ಕೆಲಸ ಮಾಡಿದ್ದೇವೆ ಮತ್ತು ನಮ್ಮ ಪಾಲುದಾರಿಕೆ, ಸಂಬಂಧವನ್ನು ದೊಡ್ಡದಾದ ಮತ್ತು ಉತ್ತಮವಾದ ರೀತಿಯಲ್ಲಿ ರೂಪಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಫ್ಲವರ್ ಆರ್‌ಸಿಬಿಯ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಗ್ಗೆ ಹೇಳಿದರು.
-
The feeling is mutual, Gaffer! 🤝
— Royal Challengers Bangalore (@RCBTweets) August 4, 2023 " class="align-text-top noRightClick twitterSection" data="
We can't wait to get #IPL2024 prep underway! ❤️🔥#PlayBold #ನಮ್ಮRCB pic.twitter.com/av7fEPh4zz
">The feeling is mutual, Gaffer! 🤝
— Royal Challengers Bangalore (@RCBTweets) August 4, 2023
We can't wait to get #IPL2024 prep underway! ❤️🔥#PlayBold #ನಮ್ಮRCB pic.twitter.com/av7fEPh4zzThe feeling is mutual, Gaffer! 🤝
— Royal Challengers Bangalore (@RCBTweets) August 4, 2023
We can't wait to get #IPL2024 prep underway! ❤️🔥#PlayBold #ನಮ್ಮRCB pic.twitter.com/av7fEPh4zz
"ನಾವು ಕೆಲಸ ಮಾಡಲು ಅತ್ಯಾಕರ್ಷಕ ಆಟಗಾರರ ಪಟ್ಟಿಯನ್ನು ಹೊಂದಿದ್ದೇವೆ ಮತ್ತು ಆರ್ಸಿಬಿಯೊಂದಿಗಿನ ಅದ್ಭುತ ಅವಕಾಶವನ್ನು ನಾನು ಗುರುತಿಸುತ್ತೇನೆ ಮತ್ತು ಆನಂದಿಸುತ್ತೇನೆ. ಆದರೆ ಕೋಚ್ ಆಗಿ ಬರುವ ಜವಾಬ್ದಾರಿಯನ್ನೂ ಸಹ ಅನುಭವಿಸುತ್ತೇನೆ. ಇದು ಒಂದು ದೊಡ್ಡ ಸವಾಲು ಇದಕ್ಕಾಗಿ ನಾನು ಸಿದ್ಧವಿದ್ದೇನೆ" ಎಂದು ಫ್ಲವರ್ ತಿಳಿಸಿದ್ದಾರೆ.
ಫ್ಲವರ್ ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್‌ನ ಮುಖ್ಯ ತರಬೇತುದಾರರಾಗಿ ಕೆಲಸ ಮಾಡಿದ್ದರು. ಐಪಿಎಲ್ 2022 ಮತ್ತು 2023 ರಲ್ಲಿ ಲಕ್ನೋ ತಂಡ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ಸು ಸಾಧಿಸಿತ್ತು. ಇತ್ತಿಚೆಗೆ ಲಕ್ನೋ ತಂಡ ಫ್ಲವರ್ ಅವರನ್ನು ಕೈಬಿಟ್ಟು ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ನೇಮಿಸಿಕೊಂಡಿದೆ.
ಕೋಚಿಂಗ್ ಸರ್ಕಿಟ್‌ನಲ್ಲಿ ಫ್ಲವರ್ ತನ್ನದೇ ಆದ ಹೆಸರು ಮಾಡಿದ್ದಾರೆ. ಅವರು 2009 ಮತ್ತು 2013 ರಲ್ಲಿ ಆ್ಯಶಸ್ ಸರಣಿಯ ಗೆಲುವಿಗೆ ಇಂಗ್ಲೆಂಡ್ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಅಲ್ಲದೇ 2010-11 ರಲ್ಲಿ ಆಸ್ಟ್ರೇಲಿಯಾದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ 2010 ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ಸಂದರ್ಭದಲ್ಲಿ ಮುಖ್ಯ ಕೋಚ್ ಆಗಿದ್ದರು.
2014ರಲ್ಲಿ ಇಂಗ್ಲೆಂಡ್‌ನ ಕೋಚ್ ಹುದ್ದೆಯಿಂದ ಕೆಳಗಿಳಿದ ನಂತರ ಆಂಡಿ ಫ್ಲವರ್ ಐದು ವರ್ಷಗಳ ಕಾಲ ಇಂಗ್ಲೆಂಡ್‌ನ ಪಾಥ್‌ವೇ ಸಿಸ್ಟಮ್‌ಗಳಲ್ಲಿ ಕೆಲಸ ಮಾಡಿದರು. ನಂತರ ಐಪಿಎಲ್ನ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ನಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಯುಎಇಯ ಐಎಲ್‌ಟಿ 20 ಸ್ಪರ್ಧೆಯಲ್ಲಿ ಗಲ್ಫ್ ಜೈಂಟ್ಸ್, ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಮುಲ್ತಾನ್ ಸುಲ್ತಾನ್, ಕಳೆದ ವರ್ಷ ಪುರುಷರ ಹಂಡ್ರೆಡ್‌ನಲ್ಲಿ ಟ್ರೆಂಟ್ ರಾಕೆಟ್, ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡಗಳಿಗೆ ತರಬೇತುದಾರರಾಗಿದ್ದರು. ಪ್ರಸ್ತುತ ಆರ್ಸಿಬಿಯೊಂದಿಗೆದ ಕಾರ್ಯನಿರ್ವಹಿಸಲು ಸಹಿ ಹಾಕಿದ್ದಾರೆ.
ಜೂನ್‌ನಲ್ಲಿ ಫ್ಲವರ್ ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುಂಚಿತವಾಗಿ ಆಸ್ಟ್ರೇಲಿಯಾದ ಶಿಬಿರವನ್ನು ಸೇರಿಕೊಂಡರು ಮತ್ತು ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಮುಕ್ತಾಯಗೊಂಡ ಆ್ಯಶಸ್‌ನಲ್ಲಿ ಸಲಹಾ ಪಾತ್ರದಲ್ಲಿ ತಂಡದೊಂದಿಗೆ ಇದ್ದರು.
ಇದನ್ನೂ ಓದಿ: ವಿಶ್ವ ಚೆಸ್ ಟಾಪ್ 9 ಶ್ರೇಯಾಂಕ ಪಡೆದ ಡಿ ಗುಕೇಶ್: ವಿಶ್ವನಾಥನ್ ಆನಂದ್ರನ್ನೇ ಮೀರಿಸಿದ 17ರ ಪೋರ