ಮೆಲ್ಬೋರ್ನ್ (ಆಸ್ಟ್ರೇಲಿಯಾ): ದೀರ್ಘ ಕಾಲ ಆಸ್ಟ್ರೇಲಿಯಾ ತಂಡವನ್ನು ಯಶಸ್ವಿ ಆಗಿ ಮುನ್ನಡೆಸಿದ ಮೆಗ್ ಲ್ಯಾನಿಂಗ್ ನಿವೃತ್ತಿಯ ನಂತರ ಅವರ ಸ್ಥಾನಕ್ಕೆ ಅಲಿಸ್ಸಾ ಹೀಲಿ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ನೇಮಕ ಮಾಡಿದೆ. ಮೂರು ಮಾದರಿಯ ಕ್ರಿಕೆಟ್ಗೆ ನಾಯಕಿಯಾಗಿ ಹೀಲಿ ಅವರನ್ನು ಘೋಷಿಸಿದೆ. ಆಲ್ ರೌಂಡರ್ ತಹ್ಲಿಯಾ ಮೆಕ್‌ಗ್ರಾತ್ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಮೆಗ್ ಲ್ಯಾನಿಂಗ್ ಅನುಪಸ್ಥಿತಿಯಲ್ಲಿ ಕಳೆದ 12 ತಿಂಗಳುಗಳಲ್ಲಿ ವಿವಿಧ ಹಂತಗಳಲ್ಲಿ ತಂಡವನ್ನು ಹೀಲಿ ಮುನ್ನಡೆಸಿದರು. ಹೀಲಿ 2018ರಿಂದ ದೇಶೀಯ ಏಕದಿನ ಕ್ರಿಕೆಟ್‌ನಲ್ಲಿ ನ್ಯೂ ಸೌತ್ ವೇಲ್ಸ್‌ನ ನಾಯಕತ್ವ ವಹಿಸಿದ್ದಾರೆ ಮತ್ತು ಮೊದಲ ಏಳು ವುಮೆನ್ ಬಿಗ್ ಬ್ಯಾಷ್ ಲೀಗ್ (ಡಬ್ಲ್ಯುಬಿಬಿಎಲ್) ಆವೃತ್ತಿಯಲ್ಲಿ ಸಿಡ್ನಿ ಸಿಕ್ಸರ್ಸ್ ಉಪನಾಯಕಿಯಾಗಿದ್ದರು.
ನಾಲ್ಕು ಬಾರಿ ಟಿ20 ವಿಶ್ವಕಪ್ ಪ್ರಶಸ್ತಿ, ಒಂದು ಏಕದಿನ ವಿಶ್ವಕಪ್ ಮತ್ತು 2022ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ಗೆಲ್ಲುವ ಮೂಲಕ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಹಿರಿಮೆ ಮೆಗ್ ಲ್ಯಾನಿಂಗ್ ಅವರದ್ದು. 33 ವರ್ಷ ವಯಸ್ಸಿನ ಮೆಗ್ ಲ್ಯಾನಿಂಗ್ ಏಕದಿನ ಕ್ರಿಕೆಟ್‌ನಲ್ಲಿ 15 ಶತಕಗಳೊಂದಿಗೆ 4,602 ರನ್ ಹಾಗು ಟಿ-20ಯಲ್ಲಿ 2 ಶತಕ ಒಳಗೊಂಡಂತೆ 3,405 ರನ್ ದಾಖಲೆ ಹೊಂದಿದ್ದಾರೆ.
-
Introducing our official @AusWomenCricket leadership duo!
— Cricket Australia (@CricketAus) December 8, 2023 " class="align-text-top noRightClick twitterSection" data="
Congratulations to Alyssa and Tahlia 👏 pic.twitter.com/soNHQXQPOz
">Introducing our official @AusWomenCricket leadership duo!
— Cricket Australia (@CricketAus) December 8, 2023
Congratulations to Alyssa and Tahlia 👏 pic.twitter.com/soNHQXQPOzIntroducing our official @AusWomenCricket leadership duo!
— Cricket Australia (@CricketAus) December 8, 2023
Congratulations to Alyssa and Tahlia 👏 pic.twitter.com/soNHQXQPOz
ಮೆಕ್‌ಗ್ರಾತ್ ಡಬ್ಲ್ಯುಬಿಬಿಎಲ್ನಲ್ಲಿ ಅಡಿಲೇಡ್ ಸ್ಟ್ರೈಕರ್ ತಂಡದ ನಾಯಕತ್ವ ವಹಿಸಿದ್ದು ಬ್ಯಾಕ್-ಟು-ಬ್ಯಾಕ್ ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಪ್ರಮುಖ ಆಟಗಾರ್ತಿ ಆಗಿರುವ ಅವರು ಜುಲೈನಲ್ಲಿ ಐರ್ಲೆಂಡ್ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕರಾಗಿದ್ದರು.
ಕ್ರಿಕೆಟ್ ಆಸ್ಟ್ರೇಲಿಯಾದ ಉನ್ನತ ಪ್ರದರ್ಶನ ಮತ್ತು ರಾಷ್ಟ್ರೀಯ ತಂಡಗಳ ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಬೆನ್ ಆಲಿವರ್, "ಅಲಿಸ್ಸಾ ಅತ್ಯುತ್ತಮ ಆಟಗಾರ್ತಿ ಮತ್ತು ನಾಯಕಿಯಾಗಿದ್ದು, ಮೈದಾನದಲ್ಲಿ ಮತ್ತು ಹೊರಗೆ ಅಪಾರ ಗೌರವವನ್ನು ಗಳಿಸಿದ್ದಾರೆ. ಅಲಿಸ್ಸಾ ಈ ಪಾತ್ರಕ್ಕೆ ಅನುಭವ ಹೊಂದಿದ್ದಾರೆ ಮತ್ತು ತಹ್ಲಿಯಾ ಅವರೊಂದಿಗೆ ಉಪನಾಯಕಿಯಾಗಿ ಆಸ್ಟ್ರೇಲಿಯನ್ ಮಹಿಳಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಅವರ ಸಾಮರ್ಥ್ಯದ ಬಗ್ಗೆ ನಮಗೆ ಹೆಚ್ಚಿನ ವಿಶ್ವಾಸವಿದೆ" ಎಂದು ತಿಳಿಸಿದ್ದಾರೆ.
ಅಲಿಸ್ಸಾ ಹೀಲಿ, "ನಾಯಕಿಯ ಪಾತ್ರವನ್ನು ಸ್ವೀಕರಿಸಲು ನನಗೆ ಗೌರವವಿದೆ ಮತ್ತು ನಮ್ಮ ತಂಡವನ್ನು ಮುನ್ನಡೆಸುವ ಅವಕಾಶಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಕಳೆದ ಕೆಲವು ತಿಂಗಳುಗಳಲ್ಲಿ ಆಟಗಾರರ ಬೆಂಬಲವನ್ನು ನಾನು ನಿಜವಾಗಿಯೂ ಆನಂದಿಸಿದೆ ಮತ್ತು ನಾನು ಇದ್ದಂತೆ ಮುಂದುವರೆಯಲು ಮತ್ತು ತಂಡದಲ್ಲಿ ನಾನೊಬ್ಬಳಾಗಿ ಮುನ್ನಡೆಸಲು ಇಚ್ಛಿಸುತ್ತೇನೆ" ಎಂದಿದ್ದಾರೆ.
ವರ್ಷಾಂತ್ಯದಲ್ಲಿ ಮತ್ತು 2024ರಲ್ಲಿ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ ಮೂರು ಮಾದರಿಯ ಕ್ರಿಕೆಟ್ ಸರಣಿಯನ್ನು ಆಡಲಿದೆ. ಈ ಸರಣಿಯಿಂದ ಹೀಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಭಾರತದ ವಿರುದ್ಧ ಮೈದಾನಕ್ಕಿಳಿಯಲು ಸಿದ್ಧ: ಅಲಿಸ್ಸಾ ಹೀಲಿ