ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಕ್ರೀಡೆ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಕ್ರೀಡಾಂಗಣದಲ್ಲಿ ಬದ್ಧ ವೈರಿಗಳಂತೆ ಕಂಡರೂ ಪಂದ್ಯದ ನಂತರ ಎಲ್ಲರೂ ಒಂದೇ. ಎಲ್ಲರನ್ನೂ ಸಮಾನವಾಗಿ ಕಂಡು ಗೌರವಿಸುವುದೇ ಕ್ರೀಡಾ ಸ್ಪೂರ್ತಿ. ನಿನ್ನೆ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ನಾಲ್ಕನೇ ಪಂದ್ಯದಲ್ಲಿ ಪಾಕ್ ಮತ್ತು ಭಾರತದ ವನಿತೆಯರು ಮುಖಾಮುಖಿಯಾಗಿದ್ದರು. ವುಮೆನ್ ಇನ್ ಬ್ಲೂ 7 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು.
-
Players' interactions after the #INDvPAK match at Newlands 🇵🇰🇮🇳#BackOurGirls | #T20WorldCup pic.twitter.com/Yc4YcKxV2v
— Pakistan Cricket (@TheRealPCB) February 13, 2023 " class="align-text-top noRightClick twitterSection" data="
">Players' interactions after the #INDvPAK match at Newlands 🇵🇰🇮🇳#BackOurGirls | #T20WorldCup pic.twitter.com/Yc4YcKxV2v
— Pakistan Cricket (@TheRealPCB) February 13, 2023Players' interactions after the #INDvPAK match at Newlands 🇵🇰🇮🇳#BackOurGirls | #T20WorldCup pic.twitter.com/Yc4YcKxV2v
— Pakistan Cricket (@TheRealPCB) February 13, 2023
ಪಂದ್ಯದ ನಂತರ ಉಭಯ ತಂಡಗಳು ಡ್ರೆಸ್ಸಿಂಗ್ ರೂಮ್ನಲ್ಲಿ ಒಂದಾಗಿದ್ದು, ತಮ್ಮ ಜರ್ಸಿಗಳನ್ನು ಬದಲಾಯಿಸಿಕೊಂಡು ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ. ಡ್ರೆಸ್ಸಿಂಗ್ ರೂಮ್ನಲ್ಲಿ ಗೆಲುವಿನ ಸಂತೋಷವನ್ನು ಹಂಚಿಕೊಂಡರು. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಟ್ವಿಟರ್ ಹ್ಯಾಂಡಲ್ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದೆ.
ಪಾಕಿಸ್ತಾನದ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ವಿಕೆಟ್ ಪತನದ ನಂತರ ಜೆಮಿಮಾ ರಾಡ್ರಿಗಸ್ ಮತ್ತು ರಿಚಾ ಘೋಷ್ ನಾಲ್ಕನೇ ವಿಕೆಟ್‌ಗೆ ಅಜೇಯ 58 ರನ್‌ಗಳ ಜೊತೆಯಾಟ ನಡೆಸಿದರು. ರೋಡ್ರಿಗಸ್ 38 ಎಸೆತಗಳಲ್ಲಿ ಅಜೇಯ 53 ರನ್ ಮತ್ತು ರಿಚಾ ಘೋಷ್ 20 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಭಾರತಕ್ಕೆ 150 ರನ್ ಗುರಿಯನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಸಾಧಿಸಿದರು.
ಉದಯೋನ್ಮುಖ ತಾರೆ ಜೆಮಿಮಾ ರಾಡ್ರಿಗಸ್ ಅವರ ಆಟವನ್ನು ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಯ ಆಟಕ್ಕೆ ಹೋಲಿಸಲಾಗುತ್ತಿದೆ. ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ, ಭಾರತ ಪ್ರಮುಖ ವಿಕೆಟ್ ಕಳೆದು ಕೊಂಡಾಗ ವಿರಾಟ್ ಕೊಹ್ಲಿ ಏಕಾಗಿಯಾಗಿ ನಿಂತು ಪಂದ್ಯ ಗೆಲ್ಲಿಸಿದ್ದರು.
ಜೆಮಿಮಾ ರಾಡ್ರಿಗಸ್ ಅವರ ಅದ್ಭುತ ಅಜೇಯ ಅರ್ಧಶತಕದಿಂದಾಗಿ ಭಾರತವು ನಿನ್ನೆ ಜಯಗಳಿಸಿತು, ನಂತರ ನ್ಯೂಜಿಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಆಟಗಾರರು ಒಟ್ಟಿಗೆ ಸೇರಿ ಸೆಲಬ್ರೇಶನ್ ಮಾಡಿದರು. ಎರಡೂ ತಂಡಗಳ ಆಟಗಾರ್ತಿಯರು ಒಟ್ಟಿಗೆ ನಿಂತು ಗ್ರೂಪ್ ಫೋಟೋಗೆ ಪೋಸ್ ನೀಡಿದ್ದಾರೆ. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪಾಕಿಸ್ತಾನದ ಆಲ್‌ರೌಂಡರ್ ನಿದಾ ದಾರ್ ತಮ್ಮ ಜೆರ್ಸಿ ಬದಲಾಯಸಿಕೊಂಡರು. ಈ ವೇಳೆ ಎಲ್ಲರೂ ಸಂಭ್ರಮದಿಂದ ಇರುವುದು ಕಂಡು ಬಂತು.
ನಿನ್ನೆಯ ಪಂದ್ಯದಲ್ಲಿ: ಟಾಸ್ಗೆದ್ದು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನಕ್ಕೆ ಆರಂಭಿಕ ಆಘಾತವನ್ನು ಅನುಭವಿಸಿದರೂ, ನಾಯಕಿ ಮಾರೂಫ್ ಮತ್ತು ನಸೀಮ್ ಅವರ 81 ರನ್ನ ಜೊತೆಯಾಟದಿಂದ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಇದನ್ನು ಬೆನ್ನು ಹತ್ತಿದ ಭಾರತಕ್ಕೂ ಪಾಕ್ ಬೌಲರ್ಗಳು ಕಾಡಿದರು. ಆದರೆ, ನಾಯಕಿ ಕೌರ್ ವಿಕೆಟ್ ನಂತರ ಜೆಮಿಮಾ ರಾಡ್ರಿಗಸ್ ಮತ್ತು ರಿಚಾ ಘೋಷ್ ಸಧೃಡವಾಗಿ ನಿಂತು ಕೊನೆಯ ಒಂದು ಓವರ್ ಉಳಿಸಿ ಗೆಲುವು ದಾಖಲಿಸಿದರು. 19 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ ಭಾರತ 151 ರನ್ಗಳಿಸಿತು. ಇದು ಭಾರತ ಮಹಿಳಾ ಟಿ-20 ವಿಶ್ವಕಪ್ನಲ್ಲಿ ಚೇಸ್ ಮಾಡಿದ ಅತೀ ಹೆಚ್ಚಿನ ರನ್ ಎಂಬ ದಾಖಲೆ ನಿರ್ಮಾಣ ಆಗಿದೆ.
ಫೆಬ್ರವರಿ 15 ರಂದು ಭಾರತದ ವನಿತೆಯತರು ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದ ಸತತ ಎರಡನೇ ಗೆಲುವು ದಾಖಲಿಸುವ ಹುಮ್ಮಸ್ಸಿನಲ್ಲಿ ಕೌರ್ ಪಡೆ ಇದೆ. ಪಾಕಿಸ್ತಾನ ತಂಡ ಅದೇ ದಿನ ಐರ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದ್ದು, ಗೆಲುವಿನ ಟ್ರ್ಯಾಕ್ಗೆ ಮರಳಲು ಪ್ರಯತ್ನಿಸಲಿದೆ.
ಇದನ್ನೂ ಓದಿ: ಜೆಮಿಮಾ ರೋಡ್ರಿಗಸ್ ಆಕರ್ಷಕ ಅರ್ಧ ಶತಕ.. ಪಾಕ್ ವಿರುದ್ಧ ಗೆದ್ದ ಭಾರತದ ವನಿತೆಯರು