ಮುಂಬೈ: ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೆಗಾ ಹರಾಜಿಗೂ ಮೊದಲೂ ತಮ್ಮನ್ನು ಬಿಡುಗಡೆ ಮಾಡಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ವಿಶೇಷ ವಿಡಿಯೋ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
10 ಲಕ್ಷ ಮೂಲಬೆಲೆಯನ್ನು ಹೊಂದಿದ್ದ ಹಾರ್ದಿಕ್ ಅವರನ್ನು 2017ರಲ್ಲಿ ಮುಂಬೈ ಇಂಡಿಯನ್ಸ್ 11 ಕೋಟಿ ರೂ ನೀಡಿ 2ನೇ ಆದ್ಯತೆಯ ಆಟಗಾರನಾಗಿ ರಿಟೈನ್ ಮಾಡಿಕೊಂಡಿತ್ತು. ಆದರೆ, ಮಂಗಳವಾರ ಮುಂಬೈ ಇಂಡಿಯನ್ಸ್ ರೋಹಿತ್ ನಂತರ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು 2ನೇ ಆಟಗಾರನಾಗಿ ರಿಟೈನ್ ಮಾಡಿಕೊಂಡಿತು. ಉಳಿದೆರಡು ಆಟಗಾರರ ಬೆಲೆ ಕಡಿಮೆ ಬೆಲೆಯಾದ್ದರಿಂದ ಹಾರ್ದಿಕ್ ಅವರನ್ನು ಹರಾಜಿಗೆ ಬಿಟ್ಟುಕೊಟ್ಟು ಸೂರ್ಯಕುಮಾರ್ ಯಾದವ್ರನ್ನು 8 ಕೋಟಿ ಮತ್ತು ಪೊಲಾರ್ಡ್ರನ್ನು 6 ಕೋಟಿ ರೂಗೆ ರಿಟೈನ್ ಮಾಡಿಕೊಂಡಿತು.
"ನನ್ನ ಜೀವನದುದ್ದಕ್ಕೂ ನಾನು ಈ ನೆನಪುಗಳನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತೇನೆ, ನನ್ನ ಜೀವನದುದ್ದಕ್ಕೂ ಈ ಕ್ಷಣಗಳನ್ನು ನನ್ನೊಂದಿಗೆ ಸಾಗಿಸುತ್ತೇನೆ. ನಾನು ಇಲ್ಲಿ ಗಳಿಸಿಕೊಂಡ ಸ್ನೇಹ, ಸಂಬಂಧಗಳು, ಜನರು, ಅಭಿಮಾನಿಗಳಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ಇಲ್ಲಿ ನಾನು ಕೇವಲ ಆಟಗಾರನಾಗಿ ಮಾತ್ರವಲ್ಲ, ಒಬ್ಬ ವ್ಯಕ್ತಿಯಾಗಿ ಬೆಳೆದಿದ್ದೇನೆ.
ದೊಡ್ಡ ಕನಸುಗಳನ್ನು ಹೊತ್ತ ಒಬ್ಬ ಯುವಕನಾಗಿ ಇಲ್ಲಿಗೆ ಬಂದಿದ್ದೆ, ನಾವು ಒಟ್ಟಿಗೆ ಗೆದ್ದಿದ್ದೇವೆ, ಒಟ್ಟಿಗೆ ಸೋತಿದ್ದೇವೆ, ನಾವು ಒಟ್ಟಿಗೆ ಹೋರಾಟ ಮಾಡಿದ್ದೇವೆ. ಈ ತಂಡದೊಂದಿಗಿನ ಪ್ರತಿ ಕ್ಷಣವೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಎಲ್ಲ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಎಂದು ಅವರು ಹೇಳುತ್ತಾರೆ. ಆದರೆ ಮುಂಬೈ ಇಂಡಿಯನ್ಸ್ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ" ಎಂದು ಹಾರ್ದಿಕ್ ಭಾವನಾತ್ಮಶೀರ್ಷಿಕೆಯೊಂದಿಗೆ ಇನ್ಸ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಒಂದೆರಡು ದಿನಗಳಲ್ಲಿ ಕೊಹ್ಲಿಯ ODI ನಾಯಕತ್ವದ ಭವಿಷ್ಯ ನಿರ್ಧಾರ