ಪಣಜಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಅಜಯ್ ಜಡೇಜಾಗೆ 5 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದ್ದು, ಯಾವುದೇ ರೀತಿಯ ಗಲಾಟೆ ಮಾಡದಿದ್ದರೂ ಇವರು ದಂಡ ಪಾವತಿ ಮಾಡಿದ್ದಾರೆ.
ಉತ್ತರ ಗೋವಾದ ಅಲ್ಡೋನಾ ಗ್ರಾಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಬಂಗಲೆ ಹೊಂದಿದ್ದಾರೆ. ಆದರೆ, ಪಕ್ಕದ ಹಳ್ಳಿಯಾದ ನಾಚಿನೋಲಾದಲ್ಲಿ ಕಸ ಎಸೆದಿದ್ದಕ್ಕಾಗಿ ಇದೀಗ ಅವರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಪಚ್ ಮಾಹಿತಿ ನೀಡಿದ್ದಾರೆ. ಅವರು ದಂಡ ಕೂಡ ಪಾವತಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಇದನ್ನೂ ಓದಿರಿ: ಕ್ರಿಕೆಟರ್ಸ್ ಹಿತದೃಷ್ಟಿಯಿಂದ ಯುಎಇನಲ್ಲಿ ಟಿ -20 ವಿಶ್ವಕಪ್: ಗಂಗೂಲಿ
ನಮ್ಮ ಹಳ್ಳಿಯಲ್ಲಿ ಹೆಚ್ಚಿನ ಕಸ ಎಸೆಯುತ್ತಿರುವ ಕಾರಣ ಕಳೆದ ಕೆಲ ದಿನಗಳಿಂದ ಅದರ ವೀಕ್ಷಣೆಗೋಸ್ಕರ ಕೆಲವರ ನೇಮಕ ಮಾಡಿದ್ದೇವೆ. ಅಜಯ್ ಜಡೇಜಾ ಕಸ ಎಸೆದಿರುವ ಘಟನೆ ನಡೆದಿದ್ದು, ಅವರಿಗೆ ಇದರ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದಕ್ಕೆ ಪ್ರತಿಯಾಗಿ ದಂಡ ನೀಡಿದ್ದಾರೆ ಎಂದಿದ್ದಾರೆ. ಅಜಯ್ ಜಡೇಜಾ ಟೀಂ ಇಂಡಿಯಾ ಪರ 15 ಟೆಸ್ಟ್, 196 ಏಕದಿನ ಪಂದ್ಯಗಳನ್ನಾಡಿದ್ದು, ತಂಡದ ಕ್ಯಾಪ್ಟನ್ ಸಹ ಆಗಿದ್ದರು.