ETV Bharat / sports

ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯ: ತರಬೇತಿ ರದ್ದು ಪಡಿಸಿದ ಬಾಂಗ್ಲಾದೇಶ - ETV Bharath Karnataka

ದೆಹಲಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯದಿಂದಾಗಿ ಬಾಂಗ್ಲಾದೇಶ ಇಂದು ಫಿರೋಜ್​ ಶಾ ಕೋಟ್ಲಾದಲ್ಲಿ ಸಂಜೆ 6-9 ಗಂಟೆಗೆ ನಡೆಯಬೇಕಿದ್ದ ತರಬೇತಿ ರದ್ದುಗೊಳಿಸಿದೆ.

Air Pollution hits World Cup 2023
Air Pollution hits World Cup 2023
author img

By ETV Bharat Karnataka Team

Published : Nov 3, 2023, 11:02 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯವು ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗೆ ಹೊಡೆತ ನೀಡಿದ್ದು, ಬಾಂಗ್ಲಾದೇಶ ಶುಕ್ರವಾರ ತಮ್ಮ ತರಬೇತಿ ಅವಧಿಯನ್ನು ರದ್ದುಗೊಳಿಸಿದೆ. ಈಗಾಗಲೇ ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ನಿಂದ ಹೊರಗುಳಿದಿರುವ ಬಾಂಗ್ಲಾದೇಶ ತಂಡವು ನವೆಂಬರ್ 6 ರಂದು ಶ್ರೀಲಂಕಾ ವಿರುದ್ಧ ಪಂದ್ಯವನ್ನಾಡಲಿದೆ. ಬುಧವಾರದಂದು ರಾಷ್ಟ್ರ ರಾಜಧಾನಿಗೆ ಆಗಮಿಸಿದ ತಂಡ ಇಂದು ವಾಯು ಮಾಲಿನ್ಯದ ಕಾರಣಕ್ಕೆ ಅಭ್ಯಾಸವನ್ನು ರದ್ದುಗೊಳಿಸಿದೆ.

ಬಾಂಗ್ಲಾದೇಶ ತಂಡದ ನಿರ್ದೇಶಕ ಖಲೀದ್ ಮಹಮೂದ್ ಪ್ರಕಾರ, ವಾಯು ಮಾಲಿನ್ಯದ ಕಾರಣಕ್ಕೆ ಬಾಂಗ್ಲಾದೇಶವು ಶುಕ್ರವಾರ ಫಿರೋಜ್​ ಶಾ ಕೋಟ್ಲಾದಲ್ಲಿ ತಮ್ಮ ತರಬೇತಿಯನ್ನು ರದ್ದುಗೊಳಿಸಿದೆ. ಸಂಜೆ 6 ರಿಂದ 9 ರಾತ್ರಿ ವರೆಗೆ ನೆಟ್​ ಸೆಷನ್​ ಹಮ್ಮಿಕೊಂಡಿದ್ದನ್ನು ಕೈಬಿಡಲಾಗಿದೆ.

ನವದೆಹಲಿಯ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಶುಕ್ರವಾರ 450ರ ಗಡಿಯನ್ನು ದಾಟಿದೆ. ಕೇಂದ್ರದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಮಾರ್ಗಸೂಚಿಗಳ ಮೂರನೇ ಹಂತ ಸೇರಿದಂತೆ ಹಲವಾರು ನಿರ್ಬಂಧಗಳು ಮತ್ತು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೂ ರಾಷ್ಟ್ರೀಯ ರಾಜಧಾನಿಯಲ್ಲಿ ವಾಯುಮಾಲಿನ್ಯ ಏರಿಕೆ ಆಗುವ ಸಾಧ್ಯೆತೆ ಇದೆ. ವಾಯು ಮಾಲಿನ್ಯ ನಿಯಂತ್ರಿಸಲು ಸರ್ಕಾರವು ಕಠಿಣ ಪ್ರಯತ್ನಗಳ ಹೊರತಾಗಿಯೂ, ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ ಮತ್ತು ಈ ಕಲುಷಿತ ಗಾಳಿಯಿಂದ ತಮ್ಮನ್ನು ಸಂಪೂರ್ಣವಾಗಿ ರಕ್ಷಿಸಿಕೊಳ್ಳುವುದು ತುಂಬಾ ಕಷ್ಟವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ವಿಶ್ವಕಪ್​ನಿಂದ ಬಾಂಗ್ಲಾ ಔಟ್​: ಶಕೀಬ್-ಅಲ್-ಹಸನ್ ನೇತೃತ್ವದ ಬಾಂಗ್ಲಾದೇಶ 7 ಪಂದ್ಯದಲ್ಲಿ ಕೇವಲ 1ನ್ನು ಮಾತ್ರ ಗೆದ್ದಿದ್ದು, ವಿಶ್ವಕಪ್​ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಕಳೆದ 2019ರ ವಿಶ್ವಕಪ್​ನಲ್ಲಿ 3 ಗೆಲುವು ಕಂಡಿದ್ದ ಬಾಂಗ್ಲಾ ಈ ಬಾರಿ ಕಳಪೆ ಪ್ರದರ್ಶನ ತೋರಿದೆ. ವಿಶ್ವಕಪ್​ ಸಮೀಪದಲ್ಲಿ ತಮೀಮ್ ಇಕ್ಬಾಲ್ ಅನಾರೋಗ್ಯದ ಕಾರಣಕ್ಕೆ ನಾಯಕತ್ವದಿಂದ ವಿಮುಖರಾದರು. ಏಷ್ಯಾಕಪ್​ನಲ್ಲೂ ಬಾಂಗ್ಲಾ ಟೈಗರ್ಸ್​ ಮಂಕಾಗಿದ್ದರು.

ಬಾಂಗ್ಲಾದೇಶಕ್ಕೆ ನವೆಂಬರ್​ 6 ರಂದು ಶ್ರೀಲಂಕಾ ಮತ್ತು ನವೆಂಬರ್​ 11 ರಂದು ಆಸ್ಟ್ರೇಲಿಯಾ ವಿರುದ್ಧ ಆಡಬೇಕಿದೆ. ಈ ಎರಡೂ ಪಂದ್ಯ ಶಕೀಬ್​ ಪಡೆಗೆ ಔಪಚಾರಿಕವಾಗಿದೆ. 2025ರ ಚಾಂಪಿಯನ್ಸ್​ ಟ್ರೋಫಿಗೆ ಆಯ್ಕೆ ಆಗಬೇಕಾದರೆ, ಬಾಂಗ್ಲಾದೇಶ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಬೇಕಿದೆ.

ಚಾಂಪಿಯನ್ಸ್​ ಟ್ರೋಫಿ ಆಯ್ಕೆ ಹೇಗೆ?: 2025ಕ್ಕೆ ಮತ್ತೆ ಐಸಿಸಿ ಚಾಂಪಿಯನ್ಸ್​ ಟ್ರೋಫಿಯನ್ನು ಪರಿಚಯಿಸಿದ್ದು, ಇದರಲ್ಲಿ ತಂಡಗಳು ಭಾಗವಹಿಸಲು ನಡೆಯುತ್ತಿರುವ ವಿಶ್ವಕಪ್​ನ್ನು ಮಾನದಂಡವಾಗಿ ಬಳಸಲಾಗುತ್ತಿದೆ. 2021ರ ಸಭೆಯಲ್ಲಿ ಐಸಿಸಿ ಈ ನಿರ್ಣಯವನ್ನು ಮಾಡಿಕೊಂಡಿತ್ತು. ಅದರಂತೆ 2025ರ ವಿಶ್ವಕಪ್​ ಅತಿಥ್ಯ ವಹಿಸುತ್ತಿರುವ ಪಾಕಿಸ್ತಾನ ಮತ್ತು 2023 ವಿಶ್ವಕಪ್​ನ ಅಂಕಪಟ್ಟಿಯಲ್ಲಿ 7 ಸ್ಥಾನಗಳನ್ನು ಪಡೆದುಕೊಳ್ಳುವ ತಂಡಗಳು ಚಾಂಪಿಯನ್ಸ್​ ಟ್ರೋಫಿ ಆಡಲಿದೆ. ಈ ಹಿಂದೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ಐಸಿಸಿ ಶ್ರೇಯಾಂಕದಲ್ಲಿ 8 ಸ್ಥಾನಗಳನ್ನು ಪಡೆದುಕೊಂಡ ತಂಡ ಭಾಗವಹಿಸುತ್ತಿತ್ತು.

ಇದನ್ನೂ ಓದಿ: ವಿಶ್ವಕಪ್ 2023: ಕಿವೀಸ್​ ಬೌಲರ್​​ ಮ್ಯಾಟ್ ಹೆನ್ರಿ ಹೊರಕ್ಕೆ: ಕೈಲ್ ಜೇಮಿಸನ್​ಗೆ ಸ್ಥಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.