ETV Bharat / sports

ಅಫ್ಘಾನಿಸ್ತಾನ ಬ್ಯಾಟಿಂಗ್​, ಸ್ಪಿನ್​ ಬೌಲಿಂಗ್​ ಮೂಲಕ ಒತ್ತಡ ಹೇರಿತು: ಇಂಗ್ಲೆಂಡ್ ನಾಯಕ ಬಟ್ಲರ್​ - ETV Bharath Karnataka

ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಾನಾಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋಲು ಕಂಡಿದ್ದು, ಪ್ಲೇ ಆಫ್​ ಹಾದಿ ಕಠಿಣವಾಗಿದೆ. ಮುಂಬರುವ ಪಂದ್ಯಗಳಲ್ಲಿ ಪುಟಿದೇಳುವ ವಿಶ್ವಾಸ ನಾಯಕ ಬಟ್ಲರ್​ ವ್ಯಕ್ತಪಡಿಸಿದ್ದಾರೆ.

After loss to Afghanistan
After loss to Afghanistan
author img

By ETV Bharat Karnataka Team

Published : Oct 16, 2023, 5:48 PM IST

ನವದೆಹಲಿ: ಹಾಲಿ ವಿಶ್ವಕಪ್​ ಚಾಂಪಿಯನ್​ ಇಂಗ್ಲೆಂಡ್​ ತಂಡವು ಐಸಿಸಿ 9ನೇ ಶ್ರೇಯಾಂಕಿತ ಅಫ್ಘಾನಿಸ್ತಾನ ತಂಡದೆದುರು ಭಾನುವಾರ ಫಿರೋಜ್​ ಶಾ ಕೋಟ್ಲಾದಲ್ಲಿ ನಡೆದ ಪಂದ್ಯದಲ್ಲಿ 69 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಇದು 2023ರ ವಿಶ್ವಕಪ್​​ನ ಅಚ್ಚರಿಯ ಫಲಿತಾಂಶವಾಗಿದ್ದಲ್ಲದೇ, ವಿಶ್ವಕಪ್​ನಲ್ಲಿ ಸತತ 14 ಸೋಲು ಕಂಡಿದ್ದ ಅಫ್ಘಾನ್ ತಂಡ​ 15ನೇ ಪಂದ್ಯದಲ್ಲಿ ಗೆದ್ದು ಇತಿಹಾಸ ಬರೆಯಿತು.

ದೆಹಲಿಯ ಅರುಣ್​ ಜೇಟ್ಲಿ ಮೈದಾನದ ಪಿಚ್‌ ಅನ್ನು ಬ್ಯಾಟಿಂಗ್‌ ಸ್ನೇಹಿ ಎಂದೇ ಕರೆಯಲಾಗುತ್ತದೆ. ಬಾಜ್‌​ ಬಾಲ್​ ನೀತಿಯನ್ನು ಟೆಸ್ಟ್​ನಲ್ಲಿ ಅಳವಡಿಸಿಕೊಂಡು ಅಬ್ಬರದ ಇನ್ನಿಂಗ್ಸ್​ ಕಟ್ಟುವ ಆಂಗ್ಲರು, ಏಕದಿನ ಪಂದ್ಯದಲ್ಲಿ ಇದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್​ನ ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ಅವರ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ಇಂಗ್ಲೆಂಡ್ ಅ​ನ್ನು ಮಣಿಸಿದರೆ, ಅಫ್ಘಾನಿಸ್ತಾನ ಆಂಗ್ಲರನ್ನು ಸ್ಪಿನ್​ ಬೌಲಿಂಗ್​ನಲ್ಲಿ ಕಟ್ಟಿಹಾಕಿತು. ವಿಶ್ವಕಪ್​ನಲ್ಲಿ ಎರಡನೇ ಸೋಲು ಕಂಡಿರುವ ಇಂಗ್ಲೆಂಡ್​​ಗೆ ಪ್ಲೇ ಆಫ್​ ಹಾದಿ ಕೊಂಚ ಕಠಿಣವಾಗಿದೆ. ಅಲ್ಲದೇ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡವೂ ಇದೆ.

"ವಿಶ್ವಕಪ್​​ ಟೂರ್ನಿಯಲ್ಲಿ ನಾವು ಉತ್ತಮ ಆರಂಭ ಪಡೆಯಲಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಕ್ರಿಕೆಟ್ ಆಡಲು ಇಚ್ಛೆ ಪಡುತ್ತೇವೆ. ತಂಡ ಮತ್ತೆ ಲಯಕ್ಕೆ ಮರಳಲು ಪ್ರಯತ್ನಿಸುತ್ತಿದೆ. ಇದು ನಿಸ್ಸಂಶಯವಾಗಿ ದೊಡ್ಡ ಹಿನ್ನಡೆ. ಪಂದ್ಯಾವಳಿ ಪ್ರಾರಂಭವಾಗುವ ಮೊದಲಿದ್ದ ನಿರೀಕ್ಷೆಯಂತೆ ಪ್ರದರ್ಶನ ನೀಡುವಲ್ಲಿ ಎಡವಿದ್ದೇವೆ. ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ತಂಡಕ್ಕಿದೆ. ಅತ್ಯುತ್ತಮ ಆಟಗಾರರು ತಂಡದಲ್ಲಿದ್ದಾರೆ. ಆದರೆ ಅಫ್ಘಾನ್​ ವಿರುದ್ಧ ಪ್ರದರ್ಶನ ತೋರುವಲ್ಲಿ ವಿಫಲರಾದೆವು" ಎಂದು ಜೋಸ್​ ಬಟ್ಲರ್​ ಹೇಳಿದರು.

ಅಫ್ಘಾನ್​ನ ಆರಂಭಿಕ ಯುವ ಆಟಗಾರ ರಹಮಾನುಲ್ಲಾ ಗುರ್ಬಾಜ್ ಆಟಕ್ಕೆ ಬಟ್ಲರ್​ ಮೆಚ್ಚುಗೆ ವ್ಯಕ್ತಪಡಿಸಿದರು. ಆರಂಭದಲ್ಲಿ ಗುರ್ಜಾಜ್​ 80 ರನ್ ಮತ್ತು ಅಂತಿಮ ಓವರ್‌ಗಳಲ್ಲಿ ಮುಜೀಬ್ ಉರ್ ರೆಹಮಾನ್ ಅಮೋಘ 28 ರನ್‌ಗಳ ನೆರವಿನಿಂದ ಅಫ್ಘಾನಿಸ್ತಾನವು 284 ರನ್​ ಗಳಿಸಿತು. ಇದು ವಿಶ್ವಕಪ್‌ನಲ್ಲಿ ಅಫ್ಘಾನ್​ ಗಳಿಸಿದ ಎರಡನೇ ಬೃಹತ್​ ಮೊತ್ತವೂ ಹೌದು.

"ನಾವು ಮೊದಲ ಬಾಲ್​ನಲ್ಲೇ ಕಳಪೆ ಪ್ರಾರಂಭ ಮಾಡಿದೆವು. ನನ್ನ ಕೈ ತಪ್ಪಿನಿಂದ ಹೆಚ್ಚಿನ ರನ್​ ತಂಡಕ್ಕೆ ಸೇರಿತು. ಮೊದಲ 10 ಓವರ್​ನಲ್ಲಿ ಅಫ್ಘನ್ನರು ಪರಿಣಾಮ ಬೀರಿದರು. ನಮ್ಮ ಯೋಜನೆಗಳಂತೆ ಕಾರ್ಯನಿರ್ವಹಿಸುವಲ್ಲಿ ಎಡವಿದೆವು. ಗುರ್ಬಾಜ್​ ಆಟವನ್ನು ಶ್ಲಾಘಿಸುತ್ತೇನೆ. ಅವರು ನಮ್ಮ ಮೇಲೆ ಒತ್ತಡ ಹೆಚ್ಚಿಸಿದರು" ಎಂದರು.

"ನಾವು ಯಾವಾಗಲೂ ಧನಾತ್ಮಕವಾಗಿ ಮತ್ತು ಆಕ್ರಮಣಕಾರಿಯಾಗಿ ಆಡಲು ಬಯಸುತ್ತೇವೆ. ಆದರೆ ಕೆಲವು ದಿನಗಳಲ್ಲಿ ಆ ರೀತಿಯ ಪ್ರದರ್ಶನ ನಮ್ಮಿಂದ ಬಂದಿಲ್ಲ. ಅಫ್ಘಾನಿಸ್ತಾನವು ನಮ್ಮ ಮೇಲೆ ಉತ್ತಮ ಒತ್ತಡ ನಿರ್ಮಿಸಿದ್ದರೂ, ಬಹುಶಃ ಪಿಚ್​ ಹೇಗೆ ವರ್ತಿಸುತ್ತದೆ ಎಂದು ಭಾವಿಸಿದ್ದೇವೋ ಆ ರೀತಿ ಆಗಲಿಲ್ಲ. ಬಹುಶಃ ನಾವು ಯೋಚಿಸಿದಷ್ಟು ಇಬ್ಬನಿ ಬರಲಿಲ್ಲ" ಎಂದು ಹೇಳಿದ್ದಾರೆ.

ಇಂಗ್ಲೆಂಡ್​ ಅಕ್ಟೋಬರ್ 21, ಶನಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ 4ನೇ ಪಂದ್ಯ ಆಡಲಿದೆ.

ಇದನ್ನೂ ಓದಿ: ಮುಂದಿನ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌! 128 ವರ್ಷಗಳ ನಂತರ ಅವಕಾಶ: ಐಒಸಿ ಒಪ್ಪಿಗೆ ನೀಡಿದ 5 ಕ್ರೀಡೆಗಳು ಯಾವುವು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.