ETV Bharat / sports

ಐಪಿಎಲ್ ರದ್ದಾಯ್ತು.. ಟಿ-20 ವಿಶ್ವಕಪ್​ ಆತಿಥ್ಯ ಉಳಿಸಿಕೊಳ್ಳಲು ಬಿಸಿಸಿಐ ಮುಂದಿರುವ ದಾರಿ ಏನು? - ಯುಎಇನಲ್ಲಿ ಟಿ20 ವಿಶ್ವಕಪ್​

ನವೆಂಬರ್​ನಲ್ಲಿ ಭಾರತಕ್ಕೆ ಕೋವಿಡ್‌-19 ಮೂರನೇ ಅಲೆಯ ಭೀತಿ ಕೂಡ ಇದೆ. ಆದ್ದರಿಂದ ಬಿಸಿಸಿಐ, ಆತಿಥೇಯ ಮಂಡಳಿಯಾಗಿಯೇ ಉಳಿಯಲಿದ್ದು, ಟೂರ್ನಿ ಯುಎಇಗೆ ಸ್ಥಳಾಂತರವಾಗುವ ಸಾಧ್ಯತೆಯೇ ಹೆಚ್ಚಿದೆ..

ಟಿ20 ವಿಶ್ವಕಪ್​
ಟಿ20 ವಿಶ್ವಕಪ್​
author img

By

Published : May 4, 2021, 8:08 PM IST

ಮುಂಬೈ : ಕೊರೊನಾ ಅಬ್ಬರಕ್ಕೆ ಐಪಿಎಲ್​ ಅಂತ್ಯ ಕಂಡಿದೆ. ಆದರೆ, ಇದೇ ವರ್ಷ ನಡೆಯುವ ಟಿ-20 ವಿಶ್ವಕಪ್ ಕೂಡ ಭಾರತದ ಕೈತಪ್ಪುವುದೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಕೆಕೆಆರ್ ಮತ್ತು ಸಿಎಸ್​ಕೆ ತಂಡದಲ್ಲಿ ಸೋಮವಾರ, ಡೆಲ್ಲಿ ಮತ್ತು ಹೈದರಾಬಾದ್​ ತಂಡದ ಆಟಗಾರರಲ್ಲಿ ಮಂಗಳವಾರ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ ಟೂರ್ನಿಯನ್ನೇ ಅನಿರ್ದಾಷ್ಟಾವಧಿಗೆ ರದ್ದು ಮಾಡಿದೆ.

ಈ ವರ್ಷದ ಐಪಿಎಲ್‌ನ ದೇಶದಲ್ಲಿ ಯಶಸ್ವಿಯಾಗಿ ಆಯೋಜಿಸಿದರೆ ಅಕ್ಟೋಬರ್​ನಲ್ಲಿ ಟಿ-20 ವಿಶ್ವಕಪ್‌ನ ಅಯೋಜಿಸಲು ಯಾವುದೇ ಸಮಸ್ಯೆಯಿರುವುದಿಲ್ಲ ಎಂದು ಬಿಸಿಸಿಐ ಅಂದಾಜಿಸಿತ್ತು. ಆದರೆ, ಇದೀಗ ಎಲ್ಲಾ ಉಲ್ಟಾ ಆಗಿದೆ. ಟೂರ್ನಿ ಅರ್ಧದಲ್ಲೇ ಮೊಟಕುಗೊಂಡಿದೆ.

ಇದರಿಂದ ಟಿ-20 ವಿಶ್ವಕಪ್​ ಭಾರತದಿಂದ ಹೊರ ಬೀಳುವ ಆಘಾತ ಎದುರಾಗಿದೆ. ಆದರೆ, ಇನ್ನು ವಿಶ್ವಕಪ್​ಗೆ 5 ತಿಂಗಳ ಕಾಲಾವಕಾಶವಿದೆ, ಅಷ್ಟರಲ್ಲಿ ದೇಶದ ಪರಿಸ್ಥಿತಿ ಸುಧಾರಿಸಿದರೆ ಮಾತ್ರ ವಿಶ್ವಕಪ್ ನಡೆಯಲಿದೆ.

ಈ ಕುರಿತಂತೆ ಬಿಸಿಸಿಐ ಅಧಿಕಾರಿಗಳು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಟೂರ್ನಿಯನ್ನು ಕಳೆದ ವರ್ಷದ ಐಪಿಎಲ್​ನಂತೆ ಯುಎಇಗೆ ಸ್ಥಳಾಂತರಿಸಲು ಮನವಿ ಮಾಡಿಕೊಂಡಿದ್ದು, ಅದಕ್ಕೆ ಅಧಿಕಾರಿಗಳಿಂದ ಹೆಚ್ಚು ಕಡಿಮೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.

ಕೇವಲ ನಾಲ್ಕು ವಾರಗಳಲ್ಲೇ ಐಪಿಎಲ್ ಟೂರ್ನಿ ರದ್ದುಗೊಂಡಿರುವುದು ದೇಶದಲ್ಲಿ ವಿಶ್ವಕಪ್‌ನ ಆಯೋಜಿಸುವುದು ಖಂಡಿತಾ ಸುರಕ್ಷಿತವಲ್ಲ ಎಂಬುದರ ಸೂಚಕವಾಗಿದೆ.

ದೇಶ ಕಳೆದ 70 ವರ್ಷಗಳಲ್ಲೇ ಇದು ಅತಿ ಸಂಕಷ್ಟದ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಸೆಣಸುತ್ತಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ನವೆಂಬರ್​ನಲ್ಲಿ ಭಾರತಕ್ಕೆ ಕೋವಿಡ್‌-19 ಮೂರನೇ ಅಲೆಯ ಭೀತಿ ಕೂಡ ಇದೆ. ಆದ್ದರಿಂದ ಬಿಸಿಸಿಐ, ಆತಿಥೇಯ ಮಂಡಳಿಯಾಗಿಯೇ ಉಳಿಯಲಿದ್ದು, ಟೂರ್ನಿ ಯುಎಇಗೆ ಸ್ಥಳಾಂತರವಾಗುವ ಸಾಧ್ಯತೆಯೇ ಹೆಚ್ಚಿದೆ" ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ಐಪಿಎಲ್​ ರದ್ದಾಗುತ್ತಿದ್ದಂತೆ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.