ಶಾರ್ಜಾ(ಯುಎಇ): ಮೊಹಮ್ಮದ್ ನಬಿಯ ಆಲ್ರೌಂಡರ್ ಪ್ರದರ್ಶನ ಮತ್ತು ಅಫ್ಘಾನಿಸ್ತಾನ ಬೌಲರ್‌ಗಳ ದಾಳಿಗೆಯ ನೆರವಿನಿಂದ ತಂಡವು ಶುಕ್ರವಾರ ಶಾರ್ಜಾದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20ಯಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವು ಅಫ್ಘಾನಿಸ್ತಾನಕ್ಕೆ ಐತಿಹಾಸ ಕ್ಷಣವಾಗಿದೆ.
11 ವರ್ಷಗಳ ನಂತರ ಉಭಯ ತಂಡಗಳು ಮುಖಾಮುಖಿಯಾಗಿದ್ದು, ರಶೀದ್ ಖಾನ್ ಪಡೆ ಅಂತಿಮವಾಗಿ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಣಯವನ್ನು ತೆಗೆದುಕೊಂಡತು. ಆದರೆ ಪಕ್ ನಾಯಕ ಬ್ಯಾಟಿಂಗ್ ಮಾಡುವ ಚಿಂತನೆ ಬುಡಮೇಲಾಯಿತು. ಅತೀ ಕಡಿಮೆ ರನ್ ಗುರಿಯನ್ನು ಪಾಕ್ ತಂಡ ಅಫ್ಘಾನ್ಗೆ ನೀಡಿತು.
20 ಓವರ್ಗೆ ಪಾಕ್ ತಂಡ 9 ವಿಕೆಟ್ ನಷ್ಟ ಅನುಭವಿಸಿ ಕೇವಲ 93ರನ್ನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಅಘ್ಫಾನ್ 17.5 ಓವರ್ನಲ್ಲೇ 4 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿ ಐತಿಹಾಸಿಕ ಗೆಲುವು ದಾಖಲಿಸಿತು. ಪಾಕಿಸ್ತಾನ ಟಿ20ಯಲ್ಲಿ ಗಳಿಸಿದ ಅತೀ ಕನಿಷ್ಠ ರನ್ ಪಟ್ಟಿಯಲ್ಲಿ ಇದು ಐದನೇಯದ್ದಾಗಿದೆ. ಈ ಹಿಂದೆ 2012ರಲ್ಲಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 74 ರನ್, 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 82, 2016 ರಲ್ಲಿ ಭಾರತದ ವಿರುದ್ಧ 83, 2010ರಲ್ಲಿ ಇಂಗ್ಲೆಂಡ್ ವಿರುದ್ಧ 89 ಮತ್ತು ನಿನ್ನೆ ಅಫ್ಘಾನಿಸ್ತಾನದ ವಿರುದ್ಧ 92 ರನ್ ಗಳಿಸಿದೆ.
-
🎉 𝐇𝐈𝐒𝐓𝐎𝐑𝐘 𝐌𝐀𝐃𝐄 𝐢𝐧 𝐒𝐇𝐀𝐑𝐉𝐀𝐇! 🏏
— Afghanistan Cricket Board (@ACBofficials) March 24, 2023 " class="align-text-top noRightClick twitterSection" data="
Congratulations to Afghanistan on a fantastic first-ever international victory over @TheRealPCB! 🤩👏👌💪
Congratulations to the entire Afghan Nation! Many more to come...! 💯🔥#AfghanAtalan | #AFGvPAK | #LobaBaRangRawri pic.twitter.com/wWmfriv4DZ
">🎉 𝐇𝐈𝐒𝐓𝐎𝐑𝐘 𝐌𝐀𝐃𝐄 𝐢𝐧 𝐒𝐇𝐀𝐑𝐉𝐀𝐇! 🏏
— Afghanistan Cricket Board (@ACBofficials) March 24, 2023
Congratulations to Afghanistan on a fantastic first-ever international victory over @TheRealPCB! 🤩👏👌💪
Congratulations to the entire Afghan Nation! Many more to come...! 💯🔥#AfghanAtalan | #AFGvPAK | #LobaBaRangRawri pic.twitter.com/wWmfriv4DZ🎉 𝐇𝐈𝐒𝐓𝐎𝐑𝐘 𝐌𝐀𝐃𝐄 𝐢𝐧 𝐒𝐇𝐀𝐑𝐉𝐀𝐇! 🏏
— Afghanistan Cricket Board (@ACBofficials) March 24, 2023
Congratulations to Afghanistan on a fantastic first-ever international victory over @TheRealPCB! 🤩👏👌💪
Congratulations to the entire Afghan Nation! Many more to come...! 💯🔥#AfghanAtalan | #AFGvPAK | #LobaBaRangRawri pic.twitter.com/wWmfriv4DZ
ಪಾಕಿಸ್ತಾನದ ನಾಲ್ಕು ಬ್ಯಾಟರ್ ಮಾತ್ರ 10+ ರನ್ ಗಳಿಸಿದರು. ಇಮಾದ್ ವಾಸಿಂ 18, ಚೊಚ್ಚಲ ಆಟಗಾರ ಸೈಮ್ ಅಯೂಬ್ 17 ಮತ್ತು ತಯ್ಯಬ್ ತಾಹಿರ್ 16 ಹಾಗೂ ನಾಯಕ ಶಾದಾಬ್ ಖಾನ್ 12 ರನ್ ಗಳಿಸಿದ್ದೇ ಹೆಚ್ಚಿನ ರನ್ ಆಗಿತ್ತು. ಅಫ್ಘಾನ್ ಪರ ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ ಮತ್ತು ಮೊಹಮ್ಮದ್ ನಬಿ ತಲಾ ಎರಡು ವಿಕೆಟ್ ಪಡೆದರು.
ಈ ಸಂಕ್ಷಿಪ್ತ ರನ್ ಗುರಿ ಬೆನ್ನು ಹತ್ತಿದ ಅಫ್ಘಾನಿಸ್ತಾನದ ಬ್ಯಾಟರ್ಗಳಿಗೆ ಪಾಕ್ ಬೌಲರ್ಗಳು ಕಾಡಿದರು. 45 ರನ್ ಗಳಿಸುವಷ್ಟರಲ್ಲಿ ಅಫ್ಘಾನ್ 4 ವಿಕೆಟ್ ಕಳೆದುಕೊಂಡಿತು. ಸಂಕಷ್ಟದಲ್ಲಿದ್ದ ಅಫ್ಘಾನ್ಗೆ ನಬಿ ಮತ್ತೆ ನೆರವಾದರು. ನಬಿಯ ರಕ್ಷಣಾತ್ಮಕ ಆಟದಿಂದ ಪಾಕಿಸ್ತಾನ ಸೋಲನುಭವಿಸಿತು. 38 ಬಾಲ್ನಲ್ಲಿ 38 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು ಇವರ ಬ್ಯಾಟಿಂಗ್ ಮತ್ತು ಬೌಲಿಂಗ್ನ ಗಮನಾರ್ಹ ಕೊಡುಗೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಇವರ ಜೊತೆಗೆ ನಜಿಬುಲ್ಲಾ ಜದ್ರಾನ್ 23 ಎಸೆತಗಳಲ್ಲಿ 17ರನ್ ಗಳಿಸಿ ಇನ್ನೊಂಡೆದೆ ವಿಕೆಟ್ ನಿಲ್ಲಿಸಿದ್ದರು. ಪಾಕಿಸ್ತಾನದ ವಿರುದ್ಧ ಟಿ20ಯಲ್ಲಿ ರಶೀದ್ ಖಾನ್ ನಾಯಕತ್ವದಲ್ಲಿ ಅಫ್ಘಾನ್ 6 ವಿಕೆಟ್ ಗೆಲುವಿನ ನಗೆ ಬೀರಿತು.
ಪಾಕಿಸ್ತಾನ: ಸೈಮ್ ಅಯೂಬ್, ಮೊಹಮ್ಮದ್ ಹ್ಯಾರಿಸ್, ಅಬ್ದುಲ್ಲಾ ಶಫೀಕ್, ತಯ್ಯಬ್ ತಾಹಿರ್, ಶಾದಾಬ್ ಖಾನ್ (ನಾಯಕ), ಅಜಮ್ ಖಾನ್ (ವಿಕೆಟ್ ಕೀಪರ್), ಫಹೀಮ್ ಅಶ್ರಫ್, ಇಮಾದ್ ವಾಸಿಮ್, ನಸೀಮ್ ಶಾ, ಜಮಾನ್ ಖಾನ್, ಇಹ್ಸಾನುಲ್ಲಾ
ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್), ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಜಾಯ್, ಗುಲ್ಬದಿನ್ ನೈಬ್, ರಶೀದ್ ಖಾನ್ (ನಾಯಕ), ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್
ಇದನ್ನೂ ಓದಿ: ಬೆಟ್ಟಿಂಗ್ ದಂಧೆ: 13 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಫಿಕ್ಸಿಂಗ್ - ವರದಿ