ಶಾರ್ಜಾ(ಯುಎಇ): ಏಷ್ಯಾ ಕಪ್ನ ಸೂಪರ್ 4 ಹಂತದ ಬುಧವಾರದ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದು ಫೈನಲ್ಗೆ ಲಗ್ಗೆ ಹಾಕಿದೆ. ಈ ವೇಳೆ ಮೈದಾನದಲ್ಲಿ ಹಾಗೂ ಮೈದಾನದ ಹೊರಗಡೆ ಉಭಯ ತಂಡದ ಆಟಗಾರರು ಹಾಗೂ ಅಭಿಮಾನಿಗಳು ಫೈಟ್ ನಡೆಸಿರುವ ಸನ್ನಿವೇಶವೂ ನಡೆದಿವೆ.
-
Here is another video…this is absolutely lethal throwing chairs randomly in air not bothered who they might hit with women and children in the stands…. #PAKvAFG #AsiaCup2022 pic.twitter.com/YFcKF117mI
— Fakhr-e-Alam (@falamb3) September 7, 2022 " class="align-text-top noRightClick twitterSection" data="
">Here is another video…this is absolutely lethal throwing chairs randomly in air not bothered who they might hit with women and children in the stands…. #PAKvAFG #AsiaCup2022 pic.twitter.com/YFcKF117mI
— Fakhr-e-Alam (@falamb3) September 7, 2022Here is another video…this is absolutely lethal throwing chairs randomly in air not bothered who they might hit with women and children in the stands…. #PAKvAFG #AsiaCup2022 pic.twitter.com/YFcKF117mI
— Fakhr-e-Alam (@falamb3) September 7, 2022
ಅಫ್ಘಾನಿಸ್ತಾನ ನೀಡಿದ್ದ 129 ರನ್ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್‌ಗಿಳಿದ ಆಸೀಫ್ ಅಲಿ ಕೇವಲ 7 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 18 ರನ್ಗಳಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಬೌಲರ್ ಅಹ್ಮದ್ ಯಶಸ್ವಿಯಾದರು. ತಾಳ್ಮೆ ಕಳೆದುಕೊಂಡ ಬ್ಯಾಟರ್, ಅಫ್ಘನ್ ಪ್ಲೇಯರ್‌ಗೆ ಬ್ಯಾಟ್ನಿಂದ ಹೊಡೆಯಲು ಮುಂದಾಗಿದ್ದರು ಎನ್ನಲಾಗ್ತಿದೆ. ಮಧ್ಯಪ್ರವೇಶ ಮಾಡಿದ ಅಂಪೈರ್ಗಳು ಸನ್ನಿವೇಶ ತಿಳಿಗೊಳಿಸಿದ್ದಾರೆ. ಪಂದ್ಯ ಮುಕ್ತಾಯಗೊಂಡ ಬಳಿಕ ಇಬ್ಬರು ಪ್ಲೇಯರ್ಗಳು ಪರಸ್ಪರ ತಬ್ಬಿಕೊಂಡಿರುವ ಘಟನೆಯೂ ಸಹ ನಡೆಯಿತು.
-
Difference between pak and Afg #AsiaCup2022 pic.twitter.com/lpcWu887FS
— Hamza qadeer (@Hamza_Gondal66) September 8, 2022 " class="align-text-top noRightClick twitterSection" data="
">Difference between pak and Afg #AsiaCup2022 pic.twitter.com/lpcWu887FS
— Hamza qadeer (@Hamza_Gondal66) September 8, 2022Difference between pak and Afg #AsiaCup2022 pic.twitter.com/lpcWu887FS
— Hamza qadeer (@Hamza_Gondal66) September 8, 2022
ಈ ಹಿಂದೆಯೂ ಸಹ ಅನೇಕ ಪಂದ್ಯಗಳಲ್ಲಿ ಇಂತಹ ಘಟನೆ ನಡೆದಿದ್ದು, ಇತರೆ ಆಟಗಾರರು ಹಾಗೂ ಅಂಪೈರ್ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು. ಮತ್ತೊಂದೆಡೆ, ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಅಭಿಮಾನಿಗಳ ನಡುವೆ ಗಲಾಟೆ ನಡೆದಿದೆ. ಪಾಕಿಸ್ತಾನ ಗೆಲುವು ಸಾಧಿಸುತ್ತಿದ್ದಂತೆ ಕೆಲವರು ತಾವು ಕುಳಿತುಕೊಂಡಿದ್ದ ಚೇರ್ ಎತ್ತಿ, ಇತರರ ಮೇಲೆ ಎಸೆದಿದ್ದಾರೆ. ಅನೇಕರಿಗೆ ಗಾಯಗಳಾಗಿವೆ.
ಇದನ್ನೂ ಓದಿ: ಅಫ್ಘನ್ ವಿರುದ್ಧ ಹರಸಾಹಸ ಪಟ್ಟು ಗೆದ್ದ ಪಾಕ್: ಅಧಿಕೃತವಾಗಿ ಏಷ್ಯಾ ಕಪ್ನಿಂದ ಭಾರತ ಔಟ್