ಚೆನ್ನೈ(ತಮಿಳುನಾಡು): ವಿಶ್ವಾದ್ಯಂತ ಮೆಚ್ಚುಗೆ ಪಡೆದಿರುವ ಕ್ರೀಡೆಗಳಲ್ಲಿ ಕ್ರಿಕೆಟ್ ಒಂದು. ಟೆಸ್ಟ್ ಮಾದರಿಯಿಂದ ಆರಂಭವಾದ ಈ ಕ್ರೀಡೆ ಜನಪ್ರಿಯತೆ ಗಳಿಸುತ್ತಾ ಏಕದಿನ ಮತ್ತು ಟಿ20 ಮಾದರಿಯಲ್ಲೂ ಪರಿಚಯವಾಯಿತು. ಈಗ ಏಕದಿನ, ಟಿ20 ಮಾದರಿಗಳ ಕ್ರೇಜ್ ಕೂಡಾ ಕಡಿಮೆ ಆಗಿದೆ. ಹೀಗಿರುವಾಗ ಕ್ರಿಕೆಟ್ ಇನ್ನಷ್ಟೂ ಚುಟುಕಾಗುತ್ತಿದೆ. 100 ಎಸೆತ ಮಾದರಿಯ ದಿ ಹಂಡ್ರೆಡ್, ಟಿ10 ಸರಣಿಗಳು ಜನಪ್ರಿಯತೆ ಗಳಿಸುತ್ತಿವೆ. ರಾಷ್ಟ್ರೀಯ ದ್ವಿಪಕ್ಷೀಯ ಸರಣಿಗಳಿಗಿಂತ ಲೀಗ್ ಕ್ರಿಕೆಟ್ಗಳೇ ಮಹತ್ವ ಪಡೆದುಕೊಳ್ಳುತ್ತಿವೆ. ಐಪಿಎಲ್ ಖ್ಯಾತಿಯ ನಂತರ ಈಗ ಭಾರತದಲ್ಲಿ ಐಎಸ್‌ಪಿಎಲ್ ಎಂಬ ಟೆನಿಸ್ ಬಾಲ್ ಲೀಗ್ ಕ್ರಿಕೆಟ್ ಶುರುವಾಗುತ್ತಿದೆ.
ಮುಂದಿನ ವರ್ಷದಿಂದ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಇದು ಟೆನಿಸ್ ಬಾಲ್ನಲ್ಲಿ ಆಡುವ ಕ್ರಿಕೆಟ್ ಆಗಿದ್ದು, ಚೊಚ್ಚಲ ಆವೃತ್ತಿಯಲ್ಲಿ 6 ತಂಡಗಳು ಭಾಗವಹಿಸಲಿವೆ. ಚೆನ್ನೈ, ಹೈದರಾಬಾದ್, ಬೆಂಗಳೂರು, ಮುಂಬೈ, ಕೋಲ್ಕತ್ತಾ ಮತ್ತು ಶ್ರೀನಗರದ ಎಂಬ ತಂಡಗಳಿರಲಿವೆ.
ಐಎಸ್‌ಪಿಎಲ್‌ಗೆ ಸಿನಿ ತಾರೆಯರ ಬೆಂಬಲ: ಟೆನಿಸ್ ಬಾಲ್ ಕ್ರಿಕೆಟ್ಗೆ ಸಿನಿಮಾ ಸ್ಟಾರ್ಗಳ ಬೆಂಬಲ ವ್ಯಕ್ತವಾಗಿದ್ದು, ತಾರೆಯರು ಒಂದೊಂದು ತಂಡ ಖರೀದಿಸಿದ್ದಾರೆ. ನಟ ಅಮಿತಾಬ್ ಬಚ್ಚನ್ ಮುಂಬೈ, ಬಾಲಿವುಡ್ ನಟ ಹೃತಿಕ್ ರೋಷನ್ ಬೆಂಗಳೂರು, ಅಕ್ಷಯ್ ಕುಮಾರ್ ಶ್ರೀನಗರ ಮತ್ತು ತೆಲುಗು ನಟ ರಾಮ್ ಚರಣ್ ಹೈದರಾಬಾದ್ ತಂಡವನ್ನು ಖರೀದಿಸಿದ್ದಾರೆ.
-
Vanakkam Chennai! I am beyond electrified to announce the ownership of our Team Chennai in ISPLT10. To all the cricket enthusiasts, let's create a legacy of sportsmanship, resilience, and cricketing excellence together.
— Suriya Sivakumar (@Suriya_offl) December 27, 2023 " class="align-text-top noRightClick twitterSection" data="
Register now at https://t.co/2igPXtyl29!🏏#ISPL @ispl_t10… pic.twitter.com/fHekRfYx0i
">Vanakkam Chennai! I am beyond electrified to announce the ownership of our Team Chennai in ISPLT10. To all the cricket enthusiasts, let's create a legacy of sportsmanship, resilience, and cricketing excellence together.
— Suriya Sivakumar (@Suriya_offl) December 27, 2023
Register now at https://t.co/2igPXtyl29!🏏#ISPL @ispl_t10… pic.twitter.com/fHekRfYx0iVanakkam Chennai! I am beyond electrified to announce the ownership of our Team Chennai in ISPLT10. To all the cricket enthusiasts, let's create a legacy of sportsmanship, resilience, and cricketing excellence together.
— Suriya Sivakumar (@Suriya_offl) December 27, 2023
Register now at https://t.co/2igPXtyl29!🏏#ISPL @ispl_t10… pic.twitter.com/fHekRfYx0i
ಚೆನ್ನೈ ತಂಡ ಖರೀದಿಸಿದ ಸೂರ್ಯ: ಚೆನ್ನೈ ತಂಡವನ್ನು ಖರೀದಿಸಿರುವುದಾಗಿ ನಟ ಸೂರ್ಯ ತಮ್ಮ ಎಕ್ಸ್ ಆ್ಯಪ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪೋಸ್ಟ್ಗೆ, "ವಣಕ್ಕಂ ಚೆನ್ನೈ! ISPLT10ರಲ್ಲಿ ನಮ್ಮ ಚೆನ್ನೈ ತಂಡದ ಮಾಲೀಕತ್ವವನ್ನು ಘೋಷಿಸಲು ಸಂತಸವಾಗುತ್ತಿದೆ. ಎಲ್ಲಾ ಕ್ರಿಕೆಟ್ ಉತ್ಸಾಹಿಗಳು ಒಟ್ಟಾಗಿ ಕ್ರೀಡಾಸ್ಫೂರ್ತಿಯೊಂದಿಗೆ ಶ್ರೇಷ್ಠ ಕ್ರಿಕೆಟ್ ಪರಂಪರೆಯನ್ನು ರಚಿಸೋಣ" ಎಂದು ಬರೆದಿದ್ದಾರೆ.
ಕೋಲ್ಕತ್ತಾ ತಂಡವನ್ನು ಯಾರು ಖರೀದಿಸಲಿದ್ದಾರೆ ಎಂಬ ಕುತೂಹಲವಿದೆ. ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕತ್ವ ಹೊಂದಿರುವ ಶಾರುಖ್ ಖಾನ್ ಐಎಸ್‌ಪಿಎಲ್ ಪ್ರವೇಶಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಹೇಗಿರಲಿದೆ ಐಎಸ್‌ಪಿಎಲ್?: ಐಎಸ್ಪಿಎಲ್ನಲ್ಲಿ ಹೇಳಿರುವಂತೆ ಸ್ಟ್ರೀಟ್ ಕ್ರಿಕೆಟ್ನಲ್ಲಿ ಬಳಸಲಾಗುವ ಟೆನಿಸ್ ಬಾಲ್ ಬಳಸಲಾಗುತ್ತದೆ. ಚೊಚ್ಚಲ ಆವೃತ್ತಿ 2024ರ ಮಾರ್ಚ್ 2 ರಿಂದ 9 ರವರೆಗೆ ನಡೆಯಲಿದೆ. ಟಿ10 ಮಾದರಿಯ ಪಂದ್ಯ ಇದಾಗಿದ್ದು, 6 ತಂಡಗಳ ನಡುವೆ 19 ಪಂದ್ಯಗಳು ನಡೆಯಲಿದೆ.
ಇದನ್ನೂ ಓದಿ: ನನ್ನ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ: ವಿನೇಶ್ ಫೋಗಟ್