ETV Bharat / sports

U-19 ಏಷ್ಯಾಕಪ್​: ಫೈನಲ್​​ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು, ಟ್ರೋಫಿಗೆ ಮುತ್ತಿಟ್ಟ ಯಂಗ್​ ಇಂಡಿಯಾ

author img

By

Published : Dec 31, 2021, 6:26 PM IST

ACC U19 Asia cup Final: ಶ್ರೀಲಂಕಾ ವಿರುದ್ಧ ನಡೆದ ಅಂಡರ್​​-19 ಏಷ್ಯಾಕಪ್​ ಫೈನಲ್​​ನಲ್ಲಿ ಯಂಗ್ ಇಂಡಿಯಾ ಟೈಗರ್ಸ್​​ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗೆಲುವು ದಾಖಲಿಸಿದ್ದು, ಈ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದೆ.

Sri Lanka U19 vs India U19 Final
Sri Lanka U19 vs India U19 Final

ಶಾರ್ಜಾ: ಅಂಡರ್​​ 19 ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಸಿಂಹಳೀಯರ ವಿರುದ್ಧ 9 ವಿಕೆಟ್​​ಗಳ(DLS) ಗೆಲುವು ದಾಖಲು ಮಾಡಿದ್ದು, ಏಷ್ಯಾಕಪ್​​​ ಟ್ರೋಫಿಗೆ ಮುತ್ತಿಕ್ಕಿದೆ.

WHAT. A. WIN! ☺️ 👏

India U19 beat Sri Lanka U19 by 9⃣ wickets to clinch the #ACC #U19AsiaCup title. 🏆 👍 #BoysInBlue #INDvSL

Scorecard ▶️ https://t.co/GPPoJpzNpQ

📸 📸: ACC pic.twitter.com/bWBByGxc3u

— BCCI (@BCCI) December 31, 2021

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ ಟೀಂ ಇಂಡಿಯಾ ಬೌಲಿಂಗ್​ ದಾಳಿಗೆ ತತ್ತರಿಸಿ ಹೋಯಿತು. ಆರಂಭದಲ್ಲೇ ಲಂಕಾ ತಂಡದ ಆರಂಭಿಕರಾದ ಚಮೀಡಾ(2) ಹಾಗೂ ಡಾನಿಲ್​(6) ವಿಕೆಟ್​ ಪಡೆದುಕೊಳ್ಳುವಲ್ಲಿ ಬೌಲರ್ಸ್​​ ಯಶಸ್ವಿಯಾದರು. ಯಾವುದೇ ಕಾರಣಕ್ಕೂ ಲಂಕಾ ಬ್ಯಾಟರ್​ಗಳು ದೊಡ್ಡ ಮೊತ್ತ ಗಳಿಕೆ ಮಾಡಲು ಭಾರತದ ಬೌಲರ್ಸ್​ಗಳು ಬಿಡಲಿಲ್ಲ. ಲಂಕಾ ತಂಡ 7 ವಿಕೆಟ್​ನಷ್ಟಕ್ಕೆ 74ರನ್​ಗಳಿಕೆ ಮಾಡಿದ್ದ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನ 38 ಓವರ್​ಗೆ ಕಡಿತಗೊಳಿಸಲಾಯಿತು. ಹೀಗಾಗಿ ಲಂಕಾ ತಂಡ 38 ಓವರ್​ಗಳಲ್ಲಿ 9ವಿಕೆಟ್​ನಷ್ಟಕ್ಕೆ 106ರನ್​​ಗಳಿಕೆ ಮಾಡಿತು.

Sri Lanka U19 vs India U19 Final
ಭಾರತ-ಶ್ರೀಲಂಕಾ ತಂಡದ ನಾಯಕರು

ಭಾರತದ ಪರ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ವಿಕಿ ಒಸ್ತಾಲ್​ 3 ವಿಕೆಟ್​, ಕೌಶಲ್ ತಾಂಬೆ 2 ವಿಕೆಟ್​ ಪಡೆದುಕೊಂಡರೆ, ರಾಜವರ್ಧನ್​, ರವಿಕುಮಾರ್​ ಹಾಗೂ ರಾಜ್​ ತಲಾ 1 ವಿಕೆಟ್ ಪಡೆದುಕೊಂಡರು.

Sri Lanka U19 vs India U19 Final
ಟಾಸ್​ ಗೆದ್ದ ಬ್ಯಾಟಿಂಗ್ ಆಯ್ದ ಲಂಕಾ ಪಡೆ

DLS ನಿಯಮದ ಪ್ರಕಾರ ಟೀಂ ಇಂಡಿಯಾಗೆ 38 ಓವರ್​ಗಳಲ್ಲಿ 102ರನ್​ಗಳಿಕೆ ಮಾಡುವ ಗುರಿ ನೀಡಲಾಯಿತು. ಈ ಟಾರ್ಗೆಟ್​ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 21 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 104ರನ್​ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ತಂಡದ ಪರ ಆರಂಭಿಕ ರಘುವಂಶಿ ಅಜೇಯ 56ರನ್​, ಹಾರೂನ್​ ಸಿಂಗ್​​ 5 ಹಾಗೂ ಶಿಖಾ ರಾಶೀದ್​ ಅಜೇಯ 31ರನ್​ಗಳಿಕೆ ಮಾಡಿ,ತಂಡವನ್ನ ಗೆಲುವಿನ ನಗೆ ಬೀರಿತು.

ಶಾರ್ಜಾ: ಅಂಡರ್​​ 19 ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಸಿಂಹಳೀಯರ ವಿರುದ್ಧ 9 ವಿಕೆಟ್​​ಗಳ(DLS) ಗೆಲುವು ದಾಖಲು ಮಾಡಿದ್ದು, ಏಷ್ಯಾಕಪ್​​​ ಟ್ರೋಫಿಗೆ ಮುತ್ತಿಕ್ಕಿದೆ.

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ ಟೀಂ ಇಂಡಿಯಾ ಬೌಲಿಂಗ್​ ದಾಳಿಗೆ ತತ್ತರಿಸಿ ಹೋಯಿತು. ಆರಂಭದಲ್ಲೇ ಲಂಕಾ ತಂಡದ ಆರಂಭಿಕರಾದ ಚಮೀಡಾ(2) ಹಾಗೂ ಡಾನಿಲ್​(6) ವಿಕೆಟ್​ ಪಡೆದುಕೊಳ್ಳುವಲ್ಲಿ ಬೌಲರ್ಸ್​​ ಯಶಸ್ವಿಯಾದರು. ಯಾವುದೇ ಕಾರಣಕ್ಕೂ ಲಂಕಾ ಬ್ಯಾಟರ್​ಗಳು ದೊಡ್ಡ ಮೊತ್ತ ಗಳಿಕೆ ಮಾಡಲು ಭಾರತದ ಬೌಲರ್ಸ್​ಗಳು ಬಿಡಲಿಲ್ಲ. ಲಂಕಾ ತಂಡ 7 ವಿಕೆಟ್​ನಷ್ಟಕ್ಕೆ 74ರನ್​ಗಳಿಕೆ ಮಾಡಿದ್ದ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನ 38 ಓವರ್​ಗೆ ಕಡಿತಗೊಳಿಸಲಾಯಿತು. ಹೀಗಾಗಿ ಲಂಕಾ ತಂಡ 38 ಓವರ್​ಗಳಲ್ಲಿ 9ವಿಕೆಟ್​ನಷ್ಟಕ್ಕೆ 106ರನ್​​ಗಳಿಕೆ ಮಾಡಿತು.

Sri Lanka U19 vs India U19 Final
ಭಾರತ-ಶ್ರೀಲಂಕಾ ತಂಡದ ನಾಯಕರು

ಭಾರತದ ಪರ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ವಿಕಿ ಒಸ್ತಾಲ್​ 3 ವಿಕೆಟ್​, ಕೌಶಲ್ ತಾಂಬೆ 2 ವಿಕೆಟ್​ ಪಡೆದುಕೊಂಡರೆ, ರಾಜವರ್ಧನ್​, ರವಿಕುಮಾರ್​ ಹಾಗೂ ರಾಜ್​ ತಲಾ 1 ವಿಕೆಟ್ ಪಡೆದುಕೊಂಡರು.

Sri Lanka U19 vs India U19 Final
ಟಾಸ್​ ಗೆದ್ದ ಬ್ಯಾಟಿಂಗ್ ಆಯ್ದ ಲಂಕಾ ಪಡೆ

DLS ನಿಯಮದ ಪ್ರಕಾರ ಟೀಂ ಇಂಡಿಯಾಗೆ 38 ಓವರ್​ಗಳಲ್ಲಿ 102ರನ್​ಗಳಿಕೆ ಮಾಡುವ ಗುರಿ ನೀಡಲಾಯಿತು. ಈ ಟಾರ್ಗೆಟ್​ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 21 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 104ರನ್​ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ತಂಡದ ಪರ ಆರಂಭಿಕ ರಘುವಂಶಿ ಅಜೇಯ 56ರನ್​, ಹಾರೂನ್​ ಸಿಂಗ್​​ 5 ಹಾಗೂ ಶಿಖಾ ರಾಶೀದ್​ ಅಜೇಯ 31ರನ್​ಗಳಿಕೆ ಮಾಡಿ,ತಂಡವನ್ನ ಗೆಲುವಿನ ನಗೆ ಬೀರಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.