ಅಬುಧಾಬಿ: ವಿಲ್ ಜಾಕ್ಸ್((Will Jacks) ಅವರ ಬಿರುಸಿನ ಅರ್ಧಶತಕ ಹಾಗೂ ಬೆನ್ನಿ ಹಾವೆಲ್ (11 ಎಸೆತಗಳಲ್ಲಿ 35*) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಅಬುಧಾಬಿ ಟಿ-10(Abu Dhabi T10) ಟೂರ್ನಿಯಲ್ಲಿ ನಾರ್ದರ್ನ್ ವಾರಿಯರ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಬಾಂಗ್ಲಾ ಟೈಗರ್ಸ್ ಮೊದಲ ಜಯ ದಾಖಲಿಸಿದೆ.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೈಗರ್ಸ್(Bangla Tigers) ಮೊದಲು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ನಾರ್ದರ್ನ್ ವಾರಿಯರ್ಸ್ಗೆ(Northern Warriors) ನಾಯಕ ರೊವ್ಮಾನ್ ಪೊವೆಲ್ ಭರ್ಜರಿ ಅರ್ಧಶತಕ(27 ಎಸೆತಗಳಲ್ಲಿ 63) ಸಿಡಿಸಿ ಬೃಹತ್ ಮೊತ್ತಕ್ಕೆ ನೆರವಾದರು.
ಅಲ್ಲದೇ, ಮೊಯಿನ್ ಅಲಿ 24 ಹಾಗೂ ಸಮಿತ್ ಪಟೇಲ್ 21 ರನ್ಗಳ ಕಾಣಿಕೆ ನೀಡಿದರು. 10 ಓವರ್ಗಲ್ಲಿ ವಾರಿಯರ್ಸ್ 4 ವಿಕೆಟ್ಗೆ 126 ರನ್ ಪೇರಿಸಿತು. ಟೈಗರ್ಸ್ ಪರ ಲುಕ್ ವುಡ್, ಫೌಲ್ಕ್ನರ್, ಉದಾನಾ ಹಾಗೂ ಕರೀಮ್ ಜನತ್ ತಲಾ ಒಂದು ವಿಕೆಟ್ ಪಡೆದರು.
-
The Tigers have arrived 🔥
— T10 League (@T10League) November 21, 2021 " class="align-text-top noRightClick twitterSection" data="
What a difference 24hrs makes as Bangla Tigers get their first win of #Season5 👏#AbuDhabiT10 #InAbuDhabi #CricketsFastestFormat pic.twitter.com/91eA4dIASS
">The Tigers have arrived 🔥
— T10 League (@T10League) November 21, 2021
What a difference 24hrs makes as Bangla Tigers get their first win of #Season5 👏#AbuDhabiT10 #InAbuDhabi #CricketsFastestFormat pic.twitter.com/91eA4dIASSThe Tigers have arrived 🔥
— T10 League (@T10League) November 21, 2021
What a difference 24hrs makes as Bangla Tigers get their first win of #Season5 👏#AbuDhabiT10 #InAbuDhabi #CricketsFastestFormat pic.twitter.com/91eA4dIASS
ಬಳಿಕ 127 ರನ್ಗಳ ಗುರಿ ಬೆನ್ನಟ್ಟಿದ ಟೈಗರ್ಸ್ ತಂಡ ವಿಲ್ ಜಾಕ್ಸ್ (57*) ಹಾಗೂ ಬೆನ್ನಿ ಹಾವೆಲ್ (35*) ಅಜೇಯ ಆಟದಿಂದ 19.1ನೇ ಓವರ್ನಲ್ಲೇ 5 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. 58 ರನ್ಗೆ 5 ವಿಕೆಟ್ ಕಳೆದುಕೊಂಡರೂ ಈ ಇಬ್ಬರೂ ದಾಂಡಿಗರು ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಜಯ ತಂದಿತ್ತರು.
ಇನ್ನುಳಿದಂತೆ ಆರಂಭಿಕ ಆಟಗಾರ ಝಾಝೈ 17, ಜನತ್ 16 ರನ್ ಬಾರಿಸಿ ತಂಡಕ್ಕೆ ನೆರವಾದರು. ವಾರಿಯರ್ಸ್ ಪರ ತಾಹಿರ್, ಸಮಿತ್ ಪಟೇಲ್, ಅಭಿಮನ್ಯು ಮಿಥುನ್(Abhimanyu Mithun), ಎಮ್ರಿಟ್ ಹಾಗೂ ಉಮೈರ್ ಅಲಿ ತಲಾ ಒಂದು ವಿಕೆಟ್ ಕಬಳಿಸಿದರು. ಅಜೇಯ ಅರ್ಧಶತಕ ಬಾರಿಸಿ ಗೆಲುವಿನ ರೂವಾರಿಯಾದ ವಿಲ್ ಜಾಕ್ಸ್ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: NZ VS IND: ಹರ್ಷಲ್, ವೆಂಕಟೇಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಾಯಕ ರೋಹಿತ್