ದುಬೈ(ಯುಎಇ): ಏಷ್ಯಾ ಕಪ್ನಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆದ ಭಾರತದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದು, ಟಿ20ಯಲ್ಲಿ ಚೊಚ್ಚಲ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 71ನೇ ಶತಕ ಸಾಧನೆ ಮಾಡಿದ್ದಾರೆ. ಕೊಹ್ಲಿ ಅವರ ಈ ಗಮನಾರ್ಹ ಪ್ರದರ್ಶನಕ್ಕೆ ಎಬಿಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
When I spoke to him yesterday I knew something was brewing💪
— AB de Villiers (@ABdeVilliers17) September 8, 2022 " class="align-text-top noRightClick twitterSection" data="
Well played my friend
">When I spoke to him yesterday I knew something was brewing💪
— AB de Villiers (@ABdeVilliers17) September 8, 2022
Well played my friendWhen I spoke to him yesterday I knew something was brewing💪
— AB de Villiers (@ABdeVilliers17) September 8, 2022
Well played my friend
"ಪಂದ್ಯದ ಹಿಂದಿನ ದಿನ ನಾನು ಕೊಹ್ಲಿ ಅವರೊಂದಿಗೆ ಮಾತನಾಡಿದ್ದೆ. ಏನೋ ದೊಡ್ಡದಾಗಿ ನಡೆಯಲಿದೆ ಎಂಬಂತೆ ಭಾಸವಾಗಿತ್ತು. ಅದ್ಭುತವಾಗಿ ಆಡಿದ್ದೀರಿ, ಮೈ ಫ್ರೆಂಡ್" ಎಂದು ಟ್ವೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಇಬ್ಬರೂ ಉತ್ತಮ ಸ್ನೇಹಿತರು. ಕೊಹ್ಲಿ ಬ್ಯಾಟಿಂಗ್ನಲ್ಲಿ ಕೆಟ್ಟ ದಿನಗಳನ್ನು ಅನುಭವಿಸುತ್ತಿದ್ದಾಗ ಅವರ ಪರವಾಗಿ ನಿಂತು ಪ್ರೋತ್ಸಾಹಕ ನುಡಿಗಳನ್ನಾಡಿದ್ದ 'ಮಿ.360', ಅನೇಕ ಸಲಹೆಗಳನ್ನೂ ನೀಡುತ್ತಿದ್ದರು. ಐಪಿಎಲ್ನಲ್ಲಿ ಇಬ್ಬರು ಅನೇಕ ಪಂದ್ಯಗಳಲ್ಲಿ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇಬ್ಬರ ನಡುವಿನ ಸ್ನೇಹ ಗಾಢವಾಗಿದ್ದು, ಮೇಲಿಂದ ಮೇಲೆ ಫೋನ್ನಲ್ಲಿ ಮಾತನಾಡುತ್ತಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮೊದಲು ಇಬ್ಬರು ಮಾತನಾಡಿದ್ದರು.
ನಿನ್ನೆಯ ಪಂದ್ಯದಲ್ಲಿ 200 ಸ್ಟ್ರೆಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ 6 ಸಿಕ್ಸರ್, 12 ಬೌಂಡರಿ ಸೇರಿದಂತೆ ಕೇವಲ 61 ಎಸೆತಗಳಲ್ಲಿ 122ರನ್ ಗಳಿಸಿದ್ದಾರೆ. ಈ ಹಿಂದೆ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಶತಕ ಸಿಡಿಸಿದ್ದರು. ಇದಾದ ಬಳಿಕ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದು ಅನೇಕ ಟೀಕೆಗಳಿಗೂ ಒಳಗಾಗಿದ್ದರು. ಏಷ್ಯಾ ಕಪ್ ಮೂಲಕ ಭರ್ಜರಿ ಫಾರ್ಮ್ಗೆ ಮರಳಿರುವ ವಿರಾಟ್, 2 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿ ಮಿಂಚಿದ್ದಾರೆ.
-
#NewCoverPic 📸 pic.twitter.com/kpoZlvArVa
— ICC (@ICC) September 8, 2022 " class="align-text-top noRightClick twitterSection" data="
">#NewCoverPic 📸 pic.twitter.com/kpoZlvArVa
— ICC (@ICC) September 8, 2022#NewCoverPic 📸 pic.twitter.com/kpoZlvArVa
— ICC (@ICC) September 8, 2022
ಟ್ವಿಟರ್ ಡಿಪಿ ಚೇಂಜ್ ಮಾಡಿದ ಐಸಿಸಿ: ವಿರಾಟ್ ಕೊಹ್ಲಿ ಶತಕ ಸಾಧನೆ ಮಾಡುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಬೋರ್ಡ್(ಐಸಿಸಿ) ತನ್ನ ಟ್ವಿಟರ್ ಡಿಪಿ ಸಹ ಚೇಂಜ್ ಮಾಡಿದೆ. ವಿರಾಟ್ ಕೊಹ್ಲಿ ಶತಕ ಸಾಧನೆ ಮಾಡಿ, ಸಂಭ್ರಮಿಸುತ್ತಿರುವ ಫೋಟೋ ಹಾಕಿಕೊಂಡಿದೆ. ಈ ಮೂಲಕ ರನ್ ಮಷಿನ್ಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ. ಶತಕ ಸಾಧನೆಗೆ ಅನೇಕರು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.