ಅಬು ಧಾಬಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸೋಮವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡುವ ಮೂಲಕ ಒಂದೇ ಫ್ರಾಂಚೈಸಿಯಲ್ಲಿ 200 ಪಂದ್ಯವನ್ನಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ವಿಶ್ವದಾಖಲೆಗೆ ಪಾತ್ರರಾದರು.
ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ಡೆಬ್ಯೂಟ್ ಮಾಡಿದ ವನಿಂದು ಹಸರಂಗ ಮತ್ತು ವಿಕೆಟ್ ಕೀಪರ್ ಕೆ ಎಸ್ ಭರತ್ ಅವರಿಗೆ ಕ್ಯಾಪ್ ನೀಡಿದರೆ, 2008ರಿಂದಲೂ ಆರ್ಸಿಬಿ ಪರ ಆಡಿಕೊಂಡು ಬಂದಿರುವ ಕೊಹ್ಲಿಯ 200 ಪಂದ್ಯಗಳ ಸವಿನೆನಪಿಗಾಗಿ 200 ಸಂಖ್ಯೆಯುಳ್ಳ ಜರ್ಸಿಯನ್ನು ಉಡುಗೊರೆಯಾಗಿ ನೀಡಲಾಯಿತು. ವಿಶೇಷವೆಂದರೆ ಈ ಜರ್ಸಿಯನ್ನು ಸ್ಪೋಟಕ ಬ್ಯಾಟ್ಸ್ಮನ್ ಹಾಗೂ ವಿರಾಟ್ ನೆಚ್ಚಿನ ಸ್ನೇಹಿತನಾದ ಎಬಿಡಿ ವಿಲಿಯರ್ಸ್ ನೀಡಿದರು.
-
Game Day: KKR v RCB Dressing Room Talk
— Royal Challengers Bangalore (@RCBTweets) September 21, 2021 " class="align-text-top noRightClick twitterSection" data="
Mike Hesson and Virat Kohli address the team after a forgettable outing, urge them to put this loss behind them & turn up better for the next game v CSK on 24th. All this & more on @myntra presents Game Day.#PlayBold #IPL2021 #KKRvRCB pic.twitter.com/6bB0LcfSe3
">Game Day: KKR v RCB Dressing Room Talk
— Royal Challengers Bangalore (@RCBTweets) September 21, 2021
Mike Hesson and Virat Kohli address the team after a forgettable outing, urge them to put this loss behind them & turn up better for the next game v CSK on 24th. All this & more on @myntra presents Game Day.#PlayBold #IPL2021 #KKRvRCB pic.twitter.com/6bB0LcfSe3Game Day: KKR v RCB Dressing Room Talk
— Royal Challengers Bangalore (@RCBTweets) September 21, 2021
Mike Hesson and Virat Kohli address the team after a forgettable outing, urge them to put this loss behind them & turn up better for the next game v CSK on 24th. All this & more on @myntra presents Game Day.#PlayBold #IPL2021 #KKRvRCB pic.twitter.com/6bB0LcfSe3
ನಿನ್ನೆ ನಡೆದ ಪಂದ್ಯ ಕೊಹ್ಲಿ ಪಾಲಿಗೆ ವಿಶೇಷವಾದರೂ, ಫಲಿತಾಂಶ ಬಹಳ ಹೀನಾಯವಾಗಿತ್ತು. ಕೊಹ್ಲಿ ಕೇವಲ 5 ರನ್ಗಳಿಸಿ ಪ್ರಸಿಧ್ ಕೃಷ್ಣಾಗೆ ವಿಕೆಟ್ ಒಪ್ಪಿಸಿದರೆ, ಆರ್ಸಿಬಿ ಕೇವಲ 92 ರನ್ಗಳಿಗೆ ಆಲೌಟ್ ಆಗಿ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿತು. ದೇವದತ್ ಪಡಿಕ್ಕಲ್(22) ಮಾತ್ರ 20ರ ಗಡಿ ದಾಟಿದ ಏಕೈಕ ಬ್ಯಾಟ್ಸ್ಮನ್.
ಚೊಚ್ಚಲ ಐಪಿಎಲ್ನಿಂದಲೂ ಆರ್ಸಿಬಿ ಪರ ಆಡುತ್ತಿರುವ ಕೊಹ್ಲಿ, ಒಂದೇ ತಂಡದ ಪರ 200 ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.
ವಿರಾಟ್ ಕೊಹ್ಲಿ ನಂತರ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ(182), ಸುರೇಶ್ ರೈನಾ(172), ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲಾರ್ಡ್(172), ರೋಹಿತ್ ಶರ್ಮಾ(162) ಒಂದೇ ತಂಡದ ಪರ ಹೆಚ್ಚು ಪಂದ್ಯಗಳನ್ನಾಡಿದ ಲಿಸ್ಟ್ನಲ್ಲಿದ್ದಾರೆ.
200 ಪಂದ್ಯಗಳನ್ನಾಡಿದ 5ನೇ ಆಟಗಾರ
ಒಟ್ಟಾರೆ ಐಪಿಎಲ್ನಲ್ಲಿ ಕೊಹ್ಲಿ 200 ಪಂದ್ಯಗಳನ್ನಾಡಿದ 5ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಇವರಿಗಿಂತ ಮೊದಲು ಮಹೇಂದ್ರ ಸಿಂಗ್ ಧೋನಿ-212 , ರೋಹಿತ್ ಶರ್ಮಾ-207, ದಿನೇಶ್ ಕಾರ್ತಿಕ್-204, ಸುರೇಶ್ ರೈನಾ-201 ಈ ಸಾಧನೆ ಮಾಡಿದ್ದಾರೆ.
ಇದನ್ನು ಓದಿ:Iplನಲ್ಲಿಂದು ಕಿಂಗ್ಸ್ Vs ರಾಯಲ್ಸ್ ಕದನ: ಸ್ಫೋಟಕ ದಾಂಡಿಗರ ಜಿದ್ದಾಜಿದ್ದಿನಲ್ಲಿ ಗೆಲುವು ಯಾರಿಗೆ?