ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆ್ಯರನ್ ಫಿಂಚ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ವಿಚಿತ್ರ ದಾಖಲೆ ಮಾಡಿದ್ದಾರೆ. ಇರುವ 10 ತಂಡಗಳ ಪೈಕಿ ಪಿಂಚ್ 9 ತಂಡಗಳ ಪರವಾಗಿ ಕಣಕ್ಕಿಳಿದಿದ್ದಾರೆ. ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದ ಆಸ್ಟ್ರೇಲಿಯಾ ಟಿ- 20 ತಂಡದ ನಾಯಕ ಆ್ಯರನ್ ಫಿಂಚ್ ಅಲೆಕ್ಸ್ ಹೇಲ್ಸ್ ಬದಲಾಗಿ ಈಗ ಕೆಕೆಆರ್ ತಂಡ ಸೇರಿದ್ದಾರೆ.
-
Aaron Finch continuing the IPL tradition of joining a new team.pic.twitter.com/A5L67G1O0N
— Manya (@CSKian716) March 11, 2022 " class="align-text-top noRightClick twitterSection" data="
">Aaron Finch continuing the IPL tradition of joining a new team.pic.twitter.com/A5L67G1O0N
— Manya (@CSKian716) March 11, 2022Aaron Finch continuing the IPL tradition of joining a new team.pic.twitter.com/A5L67G1O0N
— Manya (@CSKian716) March 11, 2022
ಆ್ಯರನ್ ಫಿಂಚ್ ಮೊದಲ ಬಾರಿಗೆ ರಾಜಸ್ಥಾನ್ ರಾಯಲ್ಸ್ (2010) ತಂಡ ಸೇರಿಕೊಂಡಿದ್ದರು. ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್ (2011-12), ಪುಣೆ ವಾರಿಯರ್ಸ್ (2013), ಸನ್‌ರೈಸರ್ಸ್ ಹೈದರಾಬಾದ್ (2014), ಮುಂಬೈ ಇಂಡಿಯನ್ಸ್ (2015), ಗುಜರಾತ್ ಲಯನ್ಸ್ (2016-17), ಕಿಂಗ್ಸ್ ಇಲೆವೆನ್ ಪಂಜಾಬ್ (2018) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (2020) ಪರವಾಗಿ ಆಡಿದ್ದರು. ಇದೀಗ ಈ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಐಪಿಎಲ್ನಲ್ಲಿ ಆಡುತ್ತಿದ್ದಾರೆ.
-
Only CSK remains for Aaron Finch. Considering his age, we should fancy watching him play for CSK.
— Cricketcasm (@cricketcasm) March 11, 2022 " class="align-text-top noRightClick twitterSection" data="
">Only CSK remains for Aaron Finch. Considering his age, we should fancy watching him play for CSK.
— Cricketcasm (@cricketcasm) March 11, 2022Only CSK remains for Aaron Finch. Considering his age, we should fancy watching him play for CSK.
— Cricketcasm (@cricketcasm) March 11, 2022
ಫಿಂಚ್ರ ಈ ವಿಚಿತ್ರ ಸಾಧನೆಯನ್ನು ನೆಟಿಜನ್ಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ. ಅಲ್ಲದೇ, ಫಿಂಚ್ಗೆ ಉಳಿದಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾತ್ರ ಎಂದು ಕಾಲೆಳೆದಿದ್ದಾರೆ. ಐಪಿಎಲ್‌ನ 10 ಋತುಗಳಲ್ಲಿ ಆಡಿರುವ ಫಿಂಚ್ 25.70 ಸರಾಸರಿಯಲ್ಲಿ 2,005 ರನ್ ಗಳಿಸಿದ್ದಾರೆ. 14 ಅರ್ಧಶತಕಗಳನ್ನು ಗಳಿಸಿದ್ದು, 88 ಗರಿಷ್ಠ ರನ್ ಆಗಿದೆ.
ಇದನ್ನೂ ಓದಿ: ನೋಡಿ: ಹಾರ್ದಿಕ್ ಅಗ್ರ ರನ್ನರ್ ಆಗ್ತಿದ್ದಂತೆ 'ಆರೆಂಜ್ ಕ್ಯಾಪ್' ತೆಗೆದು ಬಟ್ಲರ್ ಕ್ರೀಡಾಸ್ಫೂರ್ತಿ!