ಮುಂಬೈ : ಸ್ಟಾರ್ ಕ್ರಿಕೆಟಿಗರ ಅನುಪಸ್ಥಿತಿಯಲ್ಲು ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿರುವ ಶಿಖರ್ ಧವನ್ ನೇತೃತ್ವದ ಭಾರತ ತಂಡವನ್ನು ದ್ವಿತೀಯ ದರ್ಜೆ ತಂಡ ಎಂದು ಕರೆದಿದ್ದ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗಾಗೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ ತಿರಗೇಟು ನೀಡಿದ್ದಾರೆ.
ಭಾರತ ತಂಡದ ತನ್ನ ದ್ವಿತೀಯ ದರ್ಜೆ ತಂಡವನ್ನು ಕಳುಹಿಸಿ ಶ್ರೀಲಂಕಾ ಕ್ರಿಕೆಟ್ಅನ್ನು ಅವಮಾನಕ್ಕೀಡು ಮಾಡುತ್ತಿದೆ. ಇದಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಬಾರದಿತ್ತು ಎಂದು ಎರಡು ದಿನಗಳ ಹಿಂದೆ ರಣತುಂಗಾ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದರು ಆಕಾಶ್ ಚೋಪ್ರಾ, ಹೌದು, ಭಾರತ ತಂಡದ ತನ್ನ ಪ್ರಮುಖ ಆಟಗಾರರಿಲ್ಲದೆ ಈ ಪ್ರವಾಸ ಕೈಗೊಳ್ಳುತ್ತಿದೆ. ಆದರೆ, ಇಲ್ಲಿ ದ್ವಿತೀಯ ದರ್ಜೆ ಎಂದು ಕರೆದಿರುವುದನ್ನು ಪ್ರಶ್ನಿಸಿದ್ದಾರೆ. ಏಕೆಂದರೆ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಚಹಾಲ್, ಕುಲ್ದೀಪ್ ಯಾದವ್ ಇರುವ ತಂಡಕ್ಕೂ, ಪ್ರಸ್ತುತ ಶ್ರೀಲಂಕಾ ತಂಡಕ್ಕೂ ಹೋಲಿಕೆ ಮಾಡಿದರೆ ಯಾವ ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
"ಹೌದು, ಖಂಡಿತ ಇದು ಪ್ರಮುಖ ತಂಡವಲ್ಲ, ಬುಮ್ರಾ, ಶಮಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅಲ್ಲಿಲ್ಲ. ಆದರೆ, ಈ ತಂಡ ಬಿ ಗ್ರೇಡ್ ತಂಡದಂತಿದೆಯೇ? ಭಾರತಲ್ಲಿ ಸಂಭಾವ್ಯ ಏಕದಿನ ತಂಡ 471 ಏಕದಿನ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದೆ"
"ಖಂಡಿತ ಇದು ಭಾರತದ ಮೊದಲ ತಂಡವಲ್ಲ. ಆದರೆ, ಶ್ರೀಲಂಕಾ ಈ ಸರಣಿಗೆ ತಂಡವನ್ನು ಆಯ್ಕೆ ಮಾಡಿದಾಗ ಅವರ ತಂಡದಲ್ಲಿ ಎಲ್ಲಾ ಆಟಗಾರರಿಂದ ಎಷ್ಟು ಪಂದ್ಯಗಳನ್ನು ಆಡಿದ ಅನುಭವವಿದೆ ಎಂಬುವುದನ್ನು ನೋಡಲು ಕುತೂಹಲಕಾರಿಯಾಗಿದೆ. ಅದೊಂದು ಬಹಳ ರೋಮಾಂಚಕಾರಿಯಾಗಲಿದೆ" ಎಂದು ಆಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಟಿ20 ವಿಶ್ವಕಪ್ ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಲ್ಲಿ ನೇರ ಅರ್ಹತೆ ಪಡೆಯುವಲ್ಲಿ ಅರ್ಹತೆ ಕಳೆದುಕೊಂಡಿರುವುದನ್ನು ನೆನಪಿಸಿರುವ ಚೋಪ್ರಾ, ಶ್ರೀಲಂಕಾ ಮೊದಲು ತಮ್ಮ ಒಳಮುಖವನ್ನು ನೋಡಿಕೊಳ್ಳಬೇಕಿದೆ. ಹೊಸ ತಂಡವಾದ ಆಪ್ಘಾನಿಸ್ತಾನ ತಂಡ ಟಿ20 ವಿಶ್ವಕಪ್ಗೆ ನೇರ ಅರ್ಹತೆ ಪಡೆದಿದ್ದರೆ, ಶ್ರೀಲಂಕಾ ಕ್ವಾಲಿಫೈಯರ್ ಸುತ್ತಿನಲ್ಲಿ ಆಡಬೇಕಿದೆ ಎಂದು ಹೇಳಿ ರಣತುಂಗಾರ ಕಾಲೆಳೆದಿದ್ದಾರೆ.
ಪ್ರಸ್ತುತ ಶ್ರೀಲಂಕಾ ಇಂಗ್ಲೆಂಡ್ ಪ್ರವಾಸದಲ್ಲಿ 3 ಟಿ20 ಪಂದ್ಯಗಳಲ್ಲಿ ಯಾವುದೇ ಪೈಪೋಟಿಯಿಲ್ಲದೆ ಕಳೆದುಕೊಂಡಿದೆ. ಇನ್ನು, ಏಕದಿನ ಸರಣಿಯನ್ನು ಕೂಡ ಕಳೆದುಕೊಂಡಿದ್ದು, ವೈಟ್ ವಾಶ್ ಮುಖಭಂಗಕ್ಕೀಡಾಗುವ ದಾರಿಯಲ್ಲಿದೆ. ಶ್ರೇಯಾಂಕ ಪಟ್ಟಿಯಲ್ಲಿ ನೋಡುವುದಾದರೆ, ಟೆಸ್ಟ್ನಲ್ಲಿ 8, ಏಕದಿನ ಮತ್ತು ಟಿ20ಯಲ್ಲಿ 9ನೇ ಶ್ರೇಯಾಂಕದಲ್ಲಿದೆ.
ಇದನ್ನು ಓದಿ: ಮಿಥಾಲಿ ರಾಜ್ ಮಹಿಳಾ ಕ್ರಿಕೆಟ್ನ 'ಸಚಿನ್ ತೆಂಡೂಲ್ಕರ್': ಶಾಂತಾ ರಂಗಸ್ವಾಮಿ