ನಾಟಿಂಗ್‌ಹ್ಯಾಮ್: ಮಧ್ಯಮ ಕ್ರಮಾಂಕದ ಬ್ಯಾಟರ್ ಜಾನಿ ಬೈರ್‌ಸ್ಟೋವ್ (136) ಅಮೋಘ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ನ್ಯೂಜಿಲ್ಯಾಂಡ್ ವಿರುದ್ಧ ಎರಡನೇ ಟೆಸ್ಟ್‌ನ ಅಂತಿಮ ದಿನ 5 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಅಲ್ಲದೇ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ನಾಲ್ಕನೇ ದಿನದಾಂತ್ಯದ 238 ರನ್‌ಗಳ ಮುನ್ನಡೆಯೊಂದಿಗೆ ಮಂಗಳವಾರ ಅಂತಿಮ ದಿನದಾಟ ಆರಂಭಿಸಿದ ಕಿವೀಸ್ 60 ರನ್ ಸೇರಿಸುವಲ್ಲಿ ಯಶಸ್ವಿಯಾಯಿತು. ಡೆರ್ಲ್ ಮಿಚೆಲ್ ಅಜೇಯ 62 ರನ್ ಗಳಿಸಿದರೆ, ಬಾಲಂಗೋಚಿಗಳು ಅವರಿಗೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ನ್ಯೂಜಿಲ್ಯಾಂಡ್ 298 ರನ್ಗಳಿಗೆ ಸರ್ವಪತನ ಕಂಡಿತು.
-
Seem familiar? pic.twitter.com/7xEGRpEa7c
— England Cricket (@englandcricket) June 14, 2022 " class="align-text-top noRightClick twitterSection" data="
">Seem familiar? pic.twitter.com/7xEGRpEa7c
— England Cricket (@englandcricket) June 14, 2022Seem familiar? pic.twitter.com/7xEGRpEa7c
— England Cricket (@englandcricket) June 14, 2022
ಗೆಲುವಿಗೆ 72 ಓವರ್ಗಳಲ್ಲಿ 299 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಅಂತಿಮ ಅವಧಿಯಲ್ಲಿ 160 ರನ್ ಅಗತ್ಯವಿತ್ತು. 93 ರನ್ಗೆ 4 ವಿಕೆಟ್ ಕಳೆದುಕೊಂಡರೂ ಕೂಡ ಜಾನಿ ಬೈರ್‌ಸ್ಟೋವ್ ಹಾಗೂ ನಾಯಕ ಬೆನ್ ಸ್ಟೋಕ್ಸ್(75*) ಸಂವೇದನಾಶೀಲ ಇನ್ನಿಂಗ್ಸ್ ಆಡುವ ಮೂಲಕ ಇಂಗ್ಲೆಂಡ್‌ಗೆ ಜಯ ತಂದಿತ್ತರು. ಈ ಜೋಡಿ 5ನೇ ವಿಕೆಟ್ಗೆ 179 ರನ್ ಸೇರಿಸಿತು.
ಆರಂಭಿಕ ಆಟಗಾರ ಅಲೆಕ್ಸ್ ಲೀಸ್ 44 ರನ್ ಗಳಿಸಿದರೆ, ಜಾಕ್ ಕ್ರಾವ್ಲಿ ಶೂನ್ಯ, ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಶತಕ ಬಾರಿಸಿದ್ದ ಒಲಿ ಪೋಪ್(18) ಹಾಗೂ ಜೋ ರೂಟ್(3) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆದರೆ, ಬೈರ್‌ಸ್ಟೋವ್ ಆಕ್ರಮಣಕಾರಿ ಆಟದ ಮೂಲಕ ಕೇವಲ 92 ಎಸೆತಗಳಲ್ಲಿ 136 ರನ್ ಚಚ್ಚಿ ಔಟಾದರು. ಬಳಿಕ ಬೆನ್ ಫೋಕ್ಸ್ ಅಜೇಯ 12 ರನ್ ಗಳಿಸಿ ಆಂಗ್ಲರನ್ನು ಗೆಲುವಿನ ದಡ ಸೇರಿಸಿದರು. ಕಿವೀಸ್ ಪರ ಟ್ರೆಂಟ್ ಬೋಲ್ಟ್ 3 ವಿಕೆಟ್ ಪಡೆದರು.
ಕಿವೀಸ್ ಮೊದಲ ಇನ್ನಿಂಗ್ಸ್ನಲ್ಲಿ ಡೆರ್ಲ್ ಮಿಚೆಲ್ (190) ಹಾಗೂ ಟಾಮ್ ಬ್ಲಂಡಲ್ (106) ಶತಕಗಳ ಬಲದಿಂದ 553 ರನ್ ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ ಕೂಡ ಒಲಿ ಪೋಪ್ (145) ಮತ್ತು ಮಾಜಿ ನಾಯಕ ಜೋ ರೂಟ್ (176) ಅವರ ಭರ್ಜರಿ ಶತಕದಾಟದಿಂದ 539 ರನ್ ಮೊತ್ತ ದಾಖಲಿಸಿತ್ತು.
ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಇಂಗ್ಲೆಂಡ್ ಸರಾಸರಿಯಲ್ಲಿ ಅಲ್ಪ ಮುನ್ನಡೆ ಸಾಧಿಸಿದರೆ, ನ್ಯೂಜಿಲ್ಯಾಂಡ್ ಮತ್ತಷ್ಟು ಹಿನ್ನಡೆಯೊಂದಿಗೆ ಆಂಗ್ಲರ ನಂತರದ ಸ್ಥಾನದಲ್ಲೇ ಮುಂದುವರೆದಿದೆ. ಎರಡೂ ತಂಡಗಳು ಅಂಕಪಟ್ಟಿಯಲ್ಲಿ 7 ಹಾಗೂ 8ನೇ ಸ್ಥಾನದಲ್ಲಿವೆ.
ಇದನ್ನೂ ಓದಿ: IND vs SA, 3rd T20: ಬೌಲರ್ಗಳ ಸಾಹಸ, ದ.ಆಫ್ರಿಕಾ ವಿರುದ್ಧ ಭಾರತಕ್ಕೆ 48 ರನ್‌ಗಳ ಜಯ