ಓವಲ್(ಇಂಗ್ಲೆಂಡ್): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 23 ಸಾವಿರ ರನ್ಗಳನ್ನು ಗಳಿಸುವ ಮೂಲಕ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಈ ದಾಖಲೆ ಸೃಷ್ಟಿಸಿದ ಆಟಗಾರರಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.
ಓವಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ ನಡೆಯುತ್ತಿದ್ದು, ತಮ್ಮ 490ನೇ ಪಂದ್ಯದಲ್ಲಿ 23 ಸಾವಿರ ರನ್ ಗಳಿಸಿದ್ದಾರೆ. ಈವರೆಗೆ ಏಳು ಮಂದಿ 23 ಸಾವಿರ ರನ್ ಗಳಿಸಿದ್ದು, ಪಂದ್ಯಗಳನ್ನು ಆಧರಿಸಿ, ಶ್ರೇಯಾಂಕ ನೀಡುವುದಾದರೆ, ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.
-
23K and counting...@imVkohli | #TeamIndia pic.twitter.com/l0oVhiIYP6
— BCCI (@BCCI) September 2, 2021 " class="align-text-top noRightClick twitterSection" data="
">23K and counting...@imVkohli | #TeamIndia pic.twitter.com/l0oVhiIYP6
— BCCI (@BCCI) September 2, 202123K and counting...@imVkohli | #TeamIndia pic.twitter.com/l0oVhiIYP6
— BCCI (@BCCI) September 2, 2021
ಕೊಹ್ಲಿ ಪ್ರತೀ ಪಂದ್ಯಕ್ಕೆ ಸರಾಸರಿ 55 ರನ್ ಗಳಿಸಿದ್ದು, ಈ ಪಂದ್ಯಗಳಲ್ಲಿ 70 ಶತಕಗಳು ಮತ್ತು 115 ಅರ್ಧಶತಕಗಳೂ ಇವೆ. ಇದನ್ನು ಹೊರತುಪಡಿಸಿದರೆ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದ್ದಾರೆ. ಏಳು ಮಂದಿಯಲ್ಲಿ ಭಾರತೀಯರಾದ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.
ಸಚಿನ್ ತೆಂಡೂಲ್ಕರ್ 34,357 ರನ್ ಗಳಿಸಿದ್ದರೆ, ರಾಹುಲ್ ದ್ರಾವಿಡ್ 24,208 ರನ್ ಗಳಿಸಿದ್ದಾರೆ. ಈಗಷ್ಟೇ ವಿರಾಟ್ ಕೊಹ್ಲಿ 23 ಸಾವಿರ ರನ್ ಪೂರೈಸಿದ್ದು, ಕೇವಲ ಟೆಸ್ಟ್ ಪಂದ್ಯಗಳಲ್ಲಿ 7,675 ರನ್ಗಳನ್ನು ವಿರಾಟ್ ಕೊಹ್ಲಿ ಗಳಿಸಿರುವುದು ವಿಶೇಷ.
23 ಸಾವಿರ ರನ್ ಗಳಿಸಿದ ಆಟಗಾರರು ಮತ್ತು ಅವರು ತೆಗೆದುಕೊಂಡ ಇನ್ನಿಂಗ್ಸ್ಗಳ ಮಾಹಿತಿ ಇಲ್ಲಿದೆ..
ಕ್ರ.ಸಂ. | ಬ್ಯಾಟ್ಸ್ಮನ್ | ತೆಗೆದುಕೊಂಡ ಇನ್ನಿಂಗ್ಸ್ |
1. | ವಿರಾಟ್ ಕೊಹ್ಲಿ | 490 |
2. | ಸಚಿನ್ ತೆಂಡೂಲ್ಕರ್ | 522 |
3. | ರಿಕ್ಕಿ ಪಾಂಟಿಂಗ್ | 544 |
4. | ಜಾಕಸ್ ಕಾಲಿಸ್ | 551 |
5. | ಕುಮಾರ್ ಸಂಗಕ್ಕಾರ | 568 |
6. | ರಾಹುಲ್ ದ್ರಾವಿಡ್ | 576 |
7 | ಮಹೇಲಾ ಜಯವರ್ಧನೆ | 645 |