ETV Bharat / sports

76 ಬೌಂಡರಿ, 37 ಸಿಕ್ಸರ್​! 414 ಎಸೆತಗಳಲ್ಲಿ 578 ರನ್​ ಚಚ್ಚಿದ 21 ವರ್ಷದ ನೇಹಲ್​ ವಡೇರಾ - ನೇಹಲ್ ವಡೇರಾ ಐಪಿಎಲ್

ಭಾರತ ಅಂಡರ್​ 19 ತಂಡದ ಮಾಜಿ ಬ್ಯಾಟರ್​ ಆಗಿರುವ ಎಡಗೈ ಸ್ಟೈಲಿಷ್ ಬ್ಯಾಟರ್​ ನೇಹಲ್ ಲೂದಿಯಾನ ತಂಡವನ್ನು ಪ್ರತಿನಿಧಿಸುತ್ತಿದ್ದು, ಸೆಮಿಫೈನಲ್​​ನ 2ನೇ ದಿನ ಔಟಾಗುವ ಮುನ್ನ ಅವರು 414 ಎಸೆತಗಳಲ್ಲಿ ಬರೋಬ್ಬರಿ 578 ರನ್​ಗಳಿಸಿ ಕ್ರಿಕೆಟ್​ ಲೋಕ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

21 years Nehal Wadhera  smashed  578 runs in Punjab U-23 tournament
414 ಎಸೆತಗಳಲ್ಲಿ 578 ರನ್​ ಚಚ್ಚಿದ 21 ವರ್ಷದ ನೇಹಲ್​ ವಡೇರಾ
author img

By

Published : Apr 28, 2022, 7:38 PM IST

ಲೂದಿಯಾನ: 21 ವರ್ಷದ ಯುವ ಬ್ಯಾಟರ್​ ನೇಹಲ್ ವಡೇರಾ ಪಂಜಾಬ್​ ಅಂಡರ್​ -23 ಅಂತರ್​ ಜಿಲ್ಲಾ​ ಕ್ರಿಕೆಟ್​​ ಚಾಂಪಿಯನ್​ಶಿಪ್​ನಲ್ಲಿ 578 ರನ್​ಗಳ ಬೃಹತ್ ಮೊತ್ತ ಸಿಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಭಾರತ ಅಂಡರ್​ 19 ತಂಡದ ಮಾಜಿ ಬ್ಯಾಟರ್​ ಆಗಿರುವ ಎಡಗೈ ಸ್ಟೈಲಿಷ್ ಬ್ಯಾಟರ್​ ನೇಹಲ್ ಲೂದಿಯಾನ ತಂಡವನ್ನು ಪ್ರತಿನಿಧಿಸುತ್ತಿದ್ದು, ಸೆಮಿಫೈನಲ್​​ನ 2ನೇ ದಿನ ಔಟಾಗುವ ಮುನ್ನ 414 ಎಸೆತಗಳಲ್ಲಿ 578 ರನ್​ಗಳಿಸಿದರು.

ಬತಿಂಡಾ ತಂಡದ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ 21 ವರ್ಷದ ನೇಹಲ್ 42 ಬೌಂಡರಿ ಮತ್ತು 37 ಸಿಕ್ಸರ್​ ಸಿಡಿಸಿದ್ದಾರೆ. ಅವರು ಬೌಂಡರಿ ಮತ್ತು ಸಿಕ್ಸರ್​ಗಳ ಮೂಲಕವೇ 390 ರನ್​ ದಾಖಲಿಸಿದರು. ಇವರ ಅಬ್ಬರದ ಇನ್ನಿಂಗ್ಸ್​ನಿಂದ ಲೂದಿಯಾನ 6 ವಿಕೆಟ್ ಕಳೆದುಕೊಂಡು 888 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ.

ಇದು ಪ್ರಥಮ ದರ್ಜೆ ಕ್ರಿಕೆಟ್​​ಗೆ ಸೇರುವುದಿಲ್ಲವಾದ್ದರಿಂದ ನೇಹಲ್ ಅದ್ಭುತ ಪ್ರದರ್ಶನ ವಿಶ್ವದಾಖಲೆಗೆ ಅರ್ಹವಾಗಿಲ್ಲ. ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ವೆಸ್ಟ್​ ಇಂಡೀಸ್​ನ ಬ್ರಿಯಾನ್ ಲಾರಾ ಅಜೇಯ 501 ರನ್​ಗಳಿಸಿರುವುದು ವಿಶ್ವದಾಖಲೆಯಾಗಿದೆ. ಅವರು ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ವಾರ್ವಿಕ್​ಶೈರ್ ತಂಡದ ಪರ 1994ರಲ್ಲಿ ಈ ದಾಖಲೆ ಬರೆದಿದ್ದರು. ಲಾರ ಒಟ್ಟು 62 ಫೋರ್ಸ್​ ಮತ್ತು 10 ಸಿಕ್ಸರ್​ಗಳನ್ನು ಸಿಡಿಸಿದ್ದರು.

ಅಲ್ಲದೆ, ನೇಹಲ್​ ಕ್ರಿಕೆಟ್​ ಇತಿಹಾಸದ 4 ದಿನಗಳ ಪಂದ್ಯದಲ್ಲಿ 37 ಸಿಕ್ಸರ್​ ಸಿಡಿಸಿದ ಮೊದಲ ಬ್ಯಾಟರ್​ ಎಂಬ ಶ್ರೇಯಕ್ಕೆ ಪಾತ್ರರಾದರು. 2018 ಪೃಥ್ವಿ ಶಾ ಬ್ಯಾಚ್​ನಲ್ಲಿ ಅಂಡರ್​ 19 ಕ್ರಿಕೆಟ್​ ಆಡಿರುವ ನೇಹಲ್​ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದ ಪರ 2 ಅರ್ಧಶತಕ ಸಿಡಿಸಿದ್ದರು. ಇದಲ್ಲದೆ 2017-18ರ ಕೋಚ್​ ಬಿಹಾರ್ ಟ್ರೋಫಿಯಲ್ಲಿ 540 ರನ್​ಗಳನ್ನು ಸಿಡಿಸಿದ್ದರು.

ಯುವರಾಜ್​ ಸಿಂಗ್​​ರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿರುವ ಯುವ ಆಟಗಾರ ಭವಿಷ್ಯದಲ್ಲಿ ಪಂಜಾಬ್ ತಂಡ ಮತ್ತು ಐಪಿಎಲ್​ನಲ್ಲಿ ಆಡುವ ಆಸೆಯನ್ನಿಟ್ಟುಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 2022ರ ಐಪಿಎಲ್ ಟ್ರಯಲ್ಸ್​ಗೆ ಕರೆದಿತ್ತಾದರೂ ಹರಾಜಿನಲ್ಲಿ ಖರೀದಿಸಿರಲಿಲ್ಲ.

ಇದನ್ನೂ ಓದಿ:ಆಲ್​ರೌಂಡರ್ ಬೆನ್​ ಸ್ಟೋಕ್ಸ್​ಗೆ​ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.