ನವದೆಹಲಿ : ಭಾರತ ತಂಡದ ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ 2011ರ ಏಕದಿನ ವಿಶ್ವಕಪ್ ಗೆದ್ದ ದಿನವನ್ನು ವೃತ್ತಿ ಜೀವನದ ಅತ್ಯುತ್ತಮ ದಿನ. ಅಂದು ನನ್ನ ಬಹುದೊಡ್ಡ ಕನಸು ನನಸಾಗಿತ್ತು ಎಂದು ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.
2011ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ಬರೋಬ್ಬರಿ 28 ವರ್ಷಗಳ ಬಳಿಕ 50 ಓವರ್ಗಳ ವಿಶ್ವಕಪ್ ಎತ್ತಿ ಹಿಡಿದಿತ್ತು.
ಹಿಂದೆ 5 ವಿಶ್ವಕಪ್ಗಳಲ್ಲಿ ಆಡಿದ್ದ ಸಚಿನ್ಗೆ ಅದು ಕೊನೆಯ ವಿಶ್ವಕಪ್ ಆಗಿತ್ತು. ಕೊನೆಗೂ ಧೋನಿ ನೇತೃತ್ವದ ಭಾರತ ತಂಡ ವಿಶ್ವಕಪ್ ಗೆದ್ದು ಕ್ರಿಕೆಟ್ ದೇವರ ವಿಶ್ವಕಪ್ ಕನಸನ್ನು ನನಸಾಗಿಸಿತ್ತು.
ಕಪಿಲ್ ದೇವ್ 1983ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದನ್ನು ನೋಡಿದಾಗ ನನಗೆ ನಂಬಲಸಾಧ್ಯವಾದ ರೋಮಾಂಚನಕಾರಿ ಅನುಭವಾಗಿತ್ತು. ನಾನು ನನ್ನ ಸ್ನೇಹಿತರ ಜೊತೆ ಆ ದಿನವನ್ನು ಆನಂದಿಸಿದ್ದೆ.
ಅಲ್ಲದೆ ನಾನು ಕೂಡ ವಿಶ್ವಕಪ್ ಎತ್ತಿ ಹಿಡಿಯುವ ಕನಸನ್ನು ಎತ್ತಿ ಹಿಡಿಯಬೇಕೆಂದು ಬಯಸಿದ್ದೆ. ಏನಾದರೂ ಬರಲಿ ನಾನು ನನ್ನ ಕನಸಾದ ವಿಶ್ವಕಪ್ ಎತ್ತಿ ಹಿಡಿಯುವ ಕನಸನ್ನು ಹಿಂಬಾಲಿಸುವುದರ ಕಡೆಗೆ ಹೆಚ್ಚು ಗಮನ ನೀಡಿದೆ.
2011ರಲ್ಲಿ ಮುಂಬೈನ ವಾಂಖೆಡೆಯಲ್ಲಿ ಅದು ನೆರೆವೇರಿತು.ಆ ದಿನ ನನ್ನ ಪಾಲಿನ ನಂಬಲಸಾಧ್ಯವಾಗಿತ್ತು. ಅದು ನನ್ನ ಕ್ರಿಕೆಟ್ ಜೀವನದ ಅತ್ಯುತ್ತಮ ದಿನವಾಗಿತ್ತು.
ಅದು ಇಡೀ ದೇಶವೇ ಒಟ್ಟಾರೆ ಸಂಭ್ರಮಿಸಿದ ಕೆಲವು ದಿನಗಳಲ್ಲಿ ಒಂದಾಗಿತ್ತು ಎಂದು ಸಚಿನ್ ಅನ್ ಅಕಾಡೆಮಿ ಆಯೋಜಿಸಿದ್ದ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ಕೊಹ್ಲಿ ಪರ ಪರ ಮಾತನಾಡಿದ ಪಾಕ್ ಕ್ರಿಕೆಟರ್ಗೆ ಫಿಕ್ಸರ್ ಎಂದು ಹೀಯಾಳಿಸಿದ ಮೈಕಲ್ ವಾನ್